
ನವದೆಹಲಿ, 14 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ರಾಷ್ಟ್ರ ರಾಜಧಾನಿ ಪ್ರದೇಶದ ಹೆಚ್ಚಿನ ಭಾಗಗಳು ಭಾನುವಾರ ಬೆಳಿಗ್ಗೆ ದಟ್ಟ ಮಂಜು ಹಾಗೂ ಹೊಗೆಯಿಂದ ಆವೃತವಾಗಿದ್ದು, ವಾಯು ಮಾಲಿನ್ಯವು ತೀವ್ರ ಮಟ್ಟ ತಲುಪಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾಹಿತಿ ಪ್ರಕಾರ, ಆನಂದ್ ವಿಹಾರ್‌ನಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) 491ಕ್ಕೆ ಏರಿದ್ದು, ITO ಪ್ರದೇಶದಲ್ಲಿ 484 ದಾಖಲಾಗಿದೆ. ನೋಯ್ಡಾ, ಗಾಜಿಯಾಬಾದ್, ಫರಿದಾಬಾದ್, ಗುರುಗ್ರಾಮ್ ಮತ್ತು ಸೋನಿಪತ್‌ನಲ್ಲಿಯೂ ‘ತೀವ್ರ’ ವರ್ಗದ ಮಾಲಿನ್ಯ ಪರಿಸ್ಥಿತಿ ಮುಂದುವರಿದಿದೆ.
ಮಾಲಿನ್ಯದ ಗಂಭೀರತೆ ಹಿನ್ನೆಲೆಯಲ್ಲಿ ದೆಹಲಿ–ಎನ್‌ಸಿಆರ್‌ನಲ್ಲಿ GRAP ನಾಲ್ಕನೇ ಹಂತ ಜಾರಿಗೆ ತರಲಾಗಿದೆ. ಶಿಕ್ಷಣ ನಿರ್ದೇಶನಾಲಯವು 9ರಿಂದ 11ನೇ ತರಗತಿಯವರೆಗೆ ಹೈಬ್ರಿಡ್ ಮೋಡ್‌ನಲ್ಲಿ ತರಗತಿಗಳನ್ನು ನಡೆಸಲು ಸೂಚಿಸಿದೆ. ಸರ್ಕಾರವು ಎಲ್ಲ ನಿರ್ಬಂಧಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಿದೆ.
ಇನ್ನೊಂದೆಡೆ, ಡಿಸೆಂಬರ್ ಮಧ್ಯಭಾಗದಲ್ಲೇ ಉತ್ತರ ಭಾರತದಲ್ಲಿ ಚಳಿಗಾಲ ತೀವ್ರಗೊಂಡಿದೆ. ಹರಿಯಾಣ, ಪಂಜಾಬ್ ಮತ್ತು ಚಂಡೀಗಢದಲ್ಲಿ ಶೀತ ಗಾಳಿ ಜನಜೀವನ ಅಸ್ತವ್ಯಸ್ತಗೊಳಿಸಿದೆ. ಉತ್ತರಾಖಂಡ, ಹಿಮಾಚಲ ಪ್ರದೇಶ ಮತ್ತು ಜಮ್ಮು–ಕಾಶ್ಮೀರದಲ್ಲಿ ಹಿಮಪಾತ, ಶೀತ ಅಲೆಗಳು ಮತ್ತು ದಟ್ಟ ಮಂಜು ಚಳಿಯ ತೀವ್ರತೆಯನ್ನು ಹೆಚ್ಚಿಸಿದೆ. ಇದೇ ವೇಳೆ, ವಿದರ್ಭ, ಉತ್ತರ ಮಹಾರಾಷ್ಟ್ರ, ಛತ್ತೀಸ್‌ಗಢ, ತೆಲಂಗಾಣ, ದಕ್ಷಿಣ ಒಳನಾಡು ಕರ್ನಾಟಕ ಹಾಗೂ ಒಡಿಶಾ ಪ್ರದೇಶಗಳಿಗೆ ಈ ವರ್ಷ ಮೊದಲ ಬಾರಿಗೆ ಶೀತ ಅಲೆಗಳ ಎಚ್ಚರಿಕೆ ನೀಡಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa