ಬಿಎಲ್ಡಿಇ ಧ್ವನಿ 98.6 FM ರೇಡಿಯೋ ಕೇಂದ್ರ ಉದ್ಘಾಟನೆ
ವಿಜಯಪುರ, 14 ಡಿಸೆಂಬರ್ (ಹಿ.ಸ.) : ಆ್ಯಂಕರ್ : ವಿಜಯಪುರದ ನಗರದ ಪ್ರತಿಷ್ಟಿತ ಬಿ.ಎಲ್.ಡಿ.ಇ ಸಂಸ್ಥೆಯ “ಬಿ.ಎಲ್.ಡಿ.ಇ ಧ್ವನಿ 98.6 FM ಸಮುದಾಯ ಬಾನುಲಿ ಕೇಂದ್ರವನ್ನು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಸಚಿವರು ಹಾಗೂ ಬಿ.ಎಲ್.ಡಿ.ಇ ಸಂಸ್ಥೆಯ ಅಧ್ಯಕ್ಷ ಎಂ.ಬಿ.ಪಾಟೀಲ ರವಿವಾರ
ಎಫ್ ಎಂ


ವಿಜಯಪುರ, 14 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ವಿಜಯಪುರದ ನಗರದ ಪ್ರತಿಷ್ಟಿತ ಬಿ.ಎಲ್.ಡಿ.ಇ ಸಂಸ್ಥೆಯ “ಬಿ.ಎಲ್.ಡಿ.ಇ ಧ್ವನಿ 98.6 FM ಸಮುದಾಯ ಬಾನುಲಿ ಕೇಂದ್ರವನ್ನು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಸಚಿವರು ಹಾಗೂ ಬಿ.ಎಲ್.ಡಿ.ಇ ಸಂಸ್ಥೆಯ ಅಧ್ಯಕ್ಷ ಎಂ.ಬಿ.ಪಾಟೀಲ ರವಿವಾರ ಉದ್ಘಾಟಿಸಿದರು.

ಬಿ.ಎಲ್.ಡಿ.ಇ ಸಂಸ್ಥೆಯ ಬಂಗಾರಮ್ಮ ಸಜ್ಜನ ಆವರಣದಲ್ಲಿ ನೂತನವಾಗಿ ಆರಂಭವಾಗುತ್ತಿರುವ *ಬಿ.ಎಲ್.ಡಿ.ಇ ಧ್ವನಿ 98.6 FM* ಆಕಾಶವಾಣಿ ಕೇಂದ್ರವನ್ನು ಉದ್ಘಾಟಿಸಿ ಬಳಿಕ, ಯುವಕರು, ಮಹಿಳೆಯರು ಮತ್ತು ರೈತ ಸಮುದಾಯಗಳಿಗಾಗಿ ವಿನೂತನ ಕಾರ್ಯಕ್ರಮಗಳು ಮೂಡಿ ಬರಲಿ ಎಂದು ರೇಡಿಯೋ ಮೂಲಕ ಶುಭ ಹಾರೈಸಿದರು.

ನಮ್ಮ ಭಾಗದ ರೈತರಿಗೆ ಇರುವ ಸಮಸ್ಯೆಗಳ ಬಗ್ಗೆ ಪರಿಹಾರ ಕಂಡುಕೊಳ್ಳುವುದು, ಸಂಪನ್ಮೂಲ ವ್ಯಕ್ತಿಗಳಿಂದ ಸಲಹೆ ನೀಡಿಸುವುದರ ಜೊತೆಗೆ ರೈತರ ಧ್ವನಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಅವರು ಹೇಳಿದರು.

ಮಹಿಳೆಯರ ಆರೋಗ್ಯ ಮತ್ತು ಗುಡಿ ಕೈಗಾರಿಕೆಗಳು ಸಣ್ಣ ಮಟ್ಟದ ಉದ್ಯೋಗವಕಾಶ ಎಲ್ಲ ಬಗೆಯ ಬೆಳವಣಿಗೆ ಬಗ್ಗೆ ತಿಳಿಸುವಂತಾಗಬೇಕು ಎಂದು ಅವರು ಹೇಳಿದರು.

ಮಾಹಿತಿ ಮತ್ತು ಮನೋರಂಜನೆಯೊಂದಿಕೆ ನೂತನ ರೇಡಿಯೋ ಬಹಳಷ್ಟು ಜನರನ್ನು ತಲುಪಲಿ ಎಂದು ಅವರು‌ಆಶಿಸಿದರು.

ಇದೇ ಸಂದರ್ಭದಲ್ಲಿ ವಿಜಯಪುರದ ಆಟೋ ಚಾಲಕರಿಗೆ ರೇಡಿಯೋಗಳನ್ನು ವಿತರಿಸಲಾಯಿತು.

ಈ‌ ಕಾರ್ಯಕ್ರಮದಲ್ಲಿ ಬಿ.ಎಲ್.ಡಿ.ಇ ಸಂಸ್ಥೆಯ ನಿರ್ದೇಶಕ ಡಾ.ಆನಂದ ಪಾಟೀಲ, ಎಸ್. ಜಿ ಸಜ್ಜನ,‌ ಎಸ್. ಎನ್. ಮಠ, ಬಿ.ಎಲ್‌.ಡಿ.ಇ ವಿವಿ ಸಮಕುಲಾಧಿಪತಿ ಡಾ. ವೈ. ಎಂ. ಜಯರಾಜ, ಸಂಸ್ಥೆಯ ಮುಖ್ಯ ಸಲಹೆಗಾರ ಮತ್ತು ವಿವಿ ರಜಿಸ್ಟ್ರಾರ್ ಡಾ. ಆರ್.‌ ವಿ. ಕುಲಕರ್ಣಿ, ಆಡಳಿತಾಧಿಕಾರಿ ವಿ. ಎಸ್. ಬಗಲಿ, ಐ. ಎಸ್. ಕಾಳಪ್ಪನವರ, ಯೋಜನೆಯ ಸಲಹೆಗಾರ ರಾಘವೇಂದ್ರ ಉಡುಪಿ, ರೇಡಿಯೋ ಕೇಂದ್ರದ ಸಂಯೋಜಕ ಅಚ್ಯುತ ಯರಗಲ್ಲ, ರೇಡಿಯೋ ಜಾಕಿಗಳಾದ ಮುತ್ತುರಾಜ ಯಲಗಟ್ಟಿ, ಮಹಾಂತೇಶ ಕೋತಿನ, ಶುಭಾ ಹತ್ತಳ್ಳಿ, ನಾನಾ ಕಾಲೇಜುಗಳ ಪ್ರಾಚಾರ್ಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande