ಕಲಿಕಾ ಚಾಲನಾ ಅನುಜ್ಞಾ ಪತ್ರ ಸೇವೆ ಪಡೆಯಲು ಕಲಿಕಾ ಪರೀಕ್ಷೆ ಬಾಕಿ
ಬಳ್ಳಾರಿ, 11 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಸಾರ್ವಜನಿಕರು ಕಲಿಕಾ ಚಾಲನಾ ಅನುಜ್ಞಾ ಪತ್ರ(ಎಲ್ ಎಲ್) ಸೇವೆ ಕೋರಿ ಅರ್ಜಿ ಸಲ್ಲಿಸಿದಲ್ಲಿ ಪ್ರಾದೇಶಿಕ ಸಾರಿಗೆ ಇಲಾಖೆಯಿಂದ ಪರಿಶೀಲನೆಯಾದ ನಂತರ ಆನ್ ಲೈನ್ ಮೂಲಕ ಕಲಿಕಾ ಪರೀಕ್ಷೆಯನ್ನು ದಿನದ ಯಾವ ಸಮಯಲ್ಲಾದರೂ ತೆಗೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದ್ದ
ಕಲಿಕಾ ಚಾಲನಾ ಅನುಜ್ಞಾ ಪತ್ರ ಸೇವೆ ಪಡೆಯಲು ಕಲಿಕಾ ಪರೀಕ್ಷೆ ಬಾಕಿ


ಬಳ್ಳಾರಿ, 11 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಸಾರ್ವಜನಿಕರು ಕಲಿಕಾ ಚಾಲನಾ ಅನುಜ್ಞಾ ಪತ್ರ(ಎಲ್ ಎಲ್) ಸೇವೆ ಕೋರಿ ಅರ್ಜಿ ಸಲ್ಲಿಸಿದಲ್ಲಿ ಪ್ರಾದೇಶಿಕ ಸಾರಿಗೆ ಇಲಾಖೆಯಿಂದ ಪರಿಶೀಲನೆಯಾದ ನಂತರ ಆನ್ ಲೈನ್ ಮೂಲಕ ಕಲಿಕಾ ಪರೀಕ್ಷೆಯನ್ನು ದಿನದ ಯಾವ ಸಮಯಲ್ಲಾದರೂ ತೆಗೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದ್ದು, ಅರ್ಜಿದಾರರು ತಾವಿರುವ ಸ್ಥಳದಿಂದಲೇ ಸಂಪರ್ಕರಹಿತವಾಗಿ ಸೇವೆ ಪಡೆಯಬಹುದಾಗಿದೆ ಎಂದು ಬಳ್ಳಾರಿ ಪ್ರಾದೇಶಿಕ ಸಾರಿಗೆ ಅಧಿಕಾರಿಯವರು ತಿಳಿಸಿದ್ದಾರೆ.

ಸಾರಿಗೆ ಇಲಾಖೆಯು ಕಲಿಕಾ ಚಾಲನಾ ಅನುಜ್ಞಾ ಪತ್ರ(ಎಲ್ ಎಲ್) ಸೇವೆಯನ್ನು ಎನ್‍ಐಸಿ ವತಿಯಿಂದ ಅಭಿವೃದ್ಧಿಪಡಿಸಿರುವ ಕೇಂದ್ರಿಕೃತ ವೆಬ್ ಆಧಾರಿತ ಸಾರಥಿ ತಂತ್ರಾಂಶದ ಮೂಲಕ ಆಧಾರ್, ಮೊಬೈಲ್ ಒಟಿಪಿ ಬಳಸಿಕೊಂಡು ಅರ್ಜಿ ಸಲ್ಲಿಸಿ, ನಿಗದಿತ ದಾಖಲಾತಿ ಅಪ್ಲೋಡ್ ಮಾಡಿ, ಶುಲ್ಕ ಪಾವತಿಸಿ ಕಲಿಕಾ ಪರೀಕ್ಷೆ ತೆಗೆದುಕೊಳ್ಳಬಹುದಾಗಿದೆ.

ಈಗಾಗಲೇ ಸಾರ್ವಜನಿಕರು ಕಲಿಕಾ ಚಾಲನಾ ಅನುಜ್ಞಾ ಪತ್ರ(ಎಲ್ ಎಲ್) ಸೇವೆ ಕೋರಿ ಅರ್ಜಿ ಸಲ್ಲಿಸಿ ಕಲಿಕಾ ಪರೀಕ್ಷೆ ತೆಗೆದುಕೊಳ್ಳಲು ಬಾಕಿ ಇರುವವರು ಡಿಸೆಂಬರ್ 31 ರೊಳಗಾಗಿ ಆನ್ ಲೈನ್ ಮೂಲಕ ಕಲಿಕಾ ಪರೀಕ್ಷೆ ತೆಗೆದುಕೊಂಡು ಪ್ರಕ್ರಿಯೆ ಪೂರ್ಣಗೊಳಿಸಬೇಕು.

2026ನೇ ಜನವರಿ 01 ರಿಂದ ಸಾರ್ವಜನಿಕರು ಕಲಿಕಾ ಚಾಲನಾ ಅನುಜ್ಞಾ ಪತ್ರ (ಎಲ್‍ಎಲ್) ಸೇವೆ ಕೋರಿ ಅರ್ಜಿ ಸಲ್ಲಿಸಿ ಪ್ರಕ್ರಿಯೆ ಪೂರ್ಣಗೊಳಿಸಿದ 7 ದಿನಗಳೊಳಗಾಗಿ ಆನ್ ಲೈನ್ ಮೂಲಕ ಕಡ್ಡಾಯವಾಗಿ ಕಲಿಕಾ ಪರೀಕ್ಷೆ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ಅರ್ಜಿ ಕೇಂದ್ರ ಮೋಟಾರು ವಾಹನ ನಿಯಮಾವಳಿ, 1989ರ ನಿಮಯ 11(3)ರನ್ವಯ ಅರ್ಜಿಯು ಸ್ವಯಂ ರದ್ದುಗೊಳ್ಳಲಿದೆ ಎಂದು ಬಳ್ಳಾರಿ ಪ್ರಾದೇಶಿಕ ಸಾರಿಗೆ ಅಧಿಕಾರಿಯವರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande