
ಗದಗ, 11 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಯುವಸ್ಪಂಧನ ಕೇಂದ್ರದಲ್ಲಿ ನರಗುಂದ ತಾಲೂಕು-01, ಶಿರಹಟ್ಟಿ ತಾಲೂಕು-01 ಯುವಪರಿವರ್ತಕರ ಹುದ್ದೆ ಖಾಲಿ ಇದ್ದು, ಹುದ್ದೆಯಲ್ಲಿ ಕಾರ್ಯನಿರ್ವಹಿಸಲು ಪದವೀಧರರಾಗಿರಬೇಕು, ಹಾಗೂ 35 ವರ್ಷದೊಳಗಿನ ಮಹಿಳೆಯರಾಗಿರಬೇಕು, ವಾಕ್ಚಾತುರ್ಯ ಹೊಂದಿರಬೇಕು, ಕಂಪ್ಯೂಟರ ಜ್ಞಾನ ಹಾಗೂ ಟೈಪಿಂಗ್ ಕೌಶಲ್ಯ ಹೊಂದಿರಬೇಕು.
ಆಸಕ್ತ ಯುವಕ/ಯುವತಿಯರು ತಮ್ಮ ಸ್ವ ವಿವರಗಳೊಂದಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಡಿ. 17 ರೊಳಗೆ ಅರ್ಜಿಯನ್ನು ಸಲ್ಲಿಸಬಹುದು, ಹೆಚ್ಚಿನ ಮಾಹಿತಿಗಾಗಿ ಮೊ.ಸಂ 7349223455 ಕಛೇರಿ ದೂರವಾಣಿ ಸಂಖ್ಯೆ 08372-238345ಗೆ ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹಿಂದೂಸ್ತಾನ್ ಸಮಾಚಾರ್ / lalita MP