
ಹೊಸಪೇಟೆ, 11 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೇರಿದಂತೆ ಇತರೆ ಇಲಾಖೆಗಳಲ್ಲಿ ಕೆಲಸ ಖಾಲಿ ಇರುವುದಾಗಿ, ಕೆಲಸಗಳಿಗೆ ಸೇರಿಸುವುದಾಗಿ ಕೆಲವು ನಕಲಿ ಸಂಸ್ಥೆಗಳು, ಮಧ್ಯವರ್ತಿಗಳು ದೃಶ್ಯ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ದೂರವಾಣಿ ಸಂಖ್ಯೆ ನೀಡುತ್ತಿದ್ದು, ಈ ಬಗ್ಗೆ ಅಕಾಂಕ್ಷಿಗಳು ವಿಚಾರಿಸಿದಾಗ ಅವರಿಂದ ಹಣ ದೋಚಿ ಪರಾರಿಯಾಗಿರುವ ವರದಿಗಳನ್ನು ಸುದ್ದಿ ಮಾಧ್ಯಮದಲ್ಲಿ ಗಮನಿಸಲಾಗಿದೆ.
ಸಾರ್ವಜನಿಕರು ಇಂತಹ ಯಾವುದೇ ನಕಲಿ ಮತ್ತು ವಂಚನೆಗಳ ಸುದ್ದಿಗಳಿಗೆ ಕಿವಿಗೊಡಬಾರದೆಂದು ಹಾಗೂ ಆರೋಗ್ಯ ಇಲಾಖೆಯಲ್ಲಿ ಯಾರಾದರೂ ಕೆಲಸ ಕೊಡಿಸಲು ಹಣದ ಬೇಡಿಕೆ ಇಟ್ಟಲ್ಲಿ ಕೂಡಲೇ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿ ಮಾಹಿತಿ ನೀಡಬೇಕೆಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಲ್.ಆರ್.ಶಂಕರ್ ನಾಯ್ಕ ಅವರು ತಿಳಿಸಿದ್ದಾರೆ
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್