ಕೊಪ್ಪಳ : ಡಿ.16 ರಂದು ಡಾಕ್ ಅದಾಲತ್
ಕೊಪ್ಪಳ, 11 ಡಿಸೆಂಬರ್ (ಹಿ.ಸ.) : ಆ್ಯಂಕರ್ : ವಿಭಾಗೀಯ ಮಟ್ಟದ ಡಾಕ್ ಅದಾಲತ್ ಅನ್ನು ಅಂಚೆ ಕಚೇರಿಗಳ ಅಧೀಕ್ಷಕರು, ಕೊಪ್ಪಳ ವಿಭಾಗ, ಕೊಪ್ಪಳ ಇವರ ಅಧ್ಯಕ್ಷತೆಯಲ್ಲಿ ಡಿಸೆಂಬರ್ 16 ರಂದು ಬೆಳಿಗ್ಗೆ 10 ಗಂಟೆಗೆ ನಡೆಸಲಾಗುವುದು. ಸಾರ್ವಜನಿಕರು ಅಂಚೆ ಸೇವೆಗಳ ಬಗ್ಗೆ ತಮ್ಮ ದೂರುಗಳನ್ನು ಪೋ
ಕೊಪ್ಪಳ : ಡಿ.16 ರಂದು ಡಾಕ್ ಅದಾಲತ್


ಕೊಪ್ಪಳ, 11 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ವಿಭಾಗೀಯ ಮಟ್ಟದ ಡಾಕ್ ಅದಾಲತ್ ಅನ್ನು ಅಂಚೆ ಕಚೇರಿಗಳ ಅಧೀಕ್ಷಕರು, ಕೊಪ್ಪಳ ವಿಭಾಗ, ಕೊಪ್ಪಳ ಇವರ ಅಧ್ಯಕ್ಷತೆಯಲ್ಲಿ ಡಿಸೆಂಬರ್ 16 ರಂದು ಬೆಳಿಗ್ಗೆ 10 ಗಂಟೆಗೆ ನಡೆಸಲಾಗುವುದು.

ಸಾರ್ವಜನಿಕರು ಅಂಚೆ ಸೇವೆಗಳ ಬಗ್ಗೆ ತಮ್ಮ ದೂರುಗಳನ್ನು ಪೋಸ್ಟ್ ಮಾಸ್ಟರ್, ಸಬ್ ಪೋಸ್ಟ್ ಮಾಸ್ಟರ್ ಮೂಲಕ ಡಾಕ್ ಅದಾಲತ್, ಅಂಚೆ ಕಚೇರಿಗಳ ಅಧೀಕ್ಷಕರು, ಕೊಪ್ಪಳ ವಿಭಾಗ, ಕೊಪ್ಪಳ-583231 ವಿಳಾಸಕ್ಕೆ ಡಿಸೆಂಬರ್ 14 ರ ಬೆಳಿಗ್ಗೆ 10 ಗಂಟೆಯೊಳಗೆ ಸಲ್ಲಿಸಬೇಕು ಎಂದು ಕೊಪ್ಪಳ ವಿಭಾಗೀಯ ಅಂಚೆ ಕಚೇರಿಗಳ ಅಧೀಕ್ಷಕರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande