
ಬಳ್ಳಾರಿ, 11 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಬಳ್ಳಾರಿ ಗ್ರಾಮೀಣ ಜೆಸ್ಕಾಂ ಉಪವಿಭಾಗ ವ್ಯಾಪ್ತಿಯ 11 ಕೆ.ವಿ ಮಾರ್ಗದ ರಸ್ತೆ ಪಕ್ಕದ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವ ಕಾಮಗಾರಿ ಕೈಗೊಳ್ಳುತ್ತಿರುವುರಿಂದ ಡಿ.13 ರಂದು ಬೆಳಿಗ್ಗೆ 09 ರಿಂದ ಸಂಜೆ 05 ಗಂಟೆಯವರೆಗೆ ಎಫ್-54, ಎಫ್-55 ಮತ್ತು ಎಫ್-56 ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
*ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು:*
ಎಫ್-54 ಬಿಸಲಹಳ್ಳಿ ಎನ್‍ಜೆವೈ ಮಾರ್ಗದ ಬಿಸಲಹಳ್ಳಿ, ಜನತಾನಗರ, ಟಿ.ಬೂದಿಹಾಳ್, ಕುಡಿಯುವ ನೀರಿನ ಸ್ಥಾವರ ಗ್ರಾಮಗಳು. ಎಫ್-55 ಅಸುಂಡಿ ಐಪಿ ಮಾರ್ಗದ ಬಿಸಲಹಳ್ಳಿ, ಜನತಾನಗರ, ತಗ್ಗಿನಬೂದಿಹಾಳ್, ಅಮರಾಪುರ, ಬೇವಿನಹಳ್ಳಿ, ಅಸುಂಡಿ, ಗೋಡೆಹಾಳ್, ಕಕ್ಕಬೇವಿನಹಳ್ಳಿ ಕೃಷಿ ಪ್ರದೇಶಗಳು.
ಎಫ್-56 ಕಮ್ಮರಚೇಡು ಎನ್.ಜೆ.ವೈ ಮಾರ್ಗದ ಬೇವಿನಹಳ್ಳಿ, ಕಕ್ಕಬೇವಿನಹಳ್ಳಿ, ಅಮರಾಪುರ, ಗೋಡೆಹಾಳ್, ತಗ್ಗಿನಬೂದಿಹಾಳ್, ಅಸುಂಡಿ ಗ್ರಾಮಗಳು ಸೇರಿದಂತೆ ಮುಂತಾದ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಮತ್ತು ವಿದ್ಯುತ್ ಗ್ರಾಹಕರು ಸಹಕರಿಸಬೇಕು ಎಂದು ಸಹಾಯಕ ಕಾರ್ಯನಿರ್ವಹಕ ಅಭಿಯಂತರರು ಕೋರಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್