ನಾಳೆ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಒಡಿಶಾ ಪ್ರವಾಸ
ನವದೆಹಲಿ, 09 ನವೆಂಬರ್ (ಹಿ.ಸ.) : ಆ್ಯಂಕರ್ : ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ನಾಳೆ ಒಡಿಶಾಗೆ ತೆರಳಲಿದ್ದಾರೆ. ಅವರು ಭುವನೇಶ್ವರದಲ್ಲಿ ನಡೆಯುವ ‘ಮಂಡಿಯಾ ದಿವಸ್’ (ರಾಗಿ ದಿನ) ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ ರೈತರ ಆ
Chawan


ನವದೆಹಲಿ, 09 ನವೆಂಬರ್ (ಹಿ.ಸ.) :

ಆ್ಯಂಕರ್ : ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ನಾಳೆ ಒಡಿಶಾಗೆ ತೆರಳಲಿದ್ದಾರೆ. ಅವರು ಭುವನೇಶ್ವರದಲ್ಲಿ ನಡೆಯುವ ‘ಮಂಡಿಯಾ ದಿವಸ್’ (ರಾಗಿ ದಿನ) ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.

ಈ ಸಂದರ್ಭದಲ್ಲಿ ರೈತರ ಆದಾಯವರ್ಧನೆ, ನೈಸರ್ಗಿಕ ಕೃಷಿ ಪ್ರೋತ್ಸಾಹ ಮತ್ತು ಪೌಷ್ಠಿಕ ಧಾನ್ಯಗಳ ಉತ್ಪಾದನೆ ಕುರಿತು ಮಾತನಾಡಲಿದ್ದಾರೆ. ನಂತರ ಅವರು ಕಟಕ್ ಜಿಲ್ಲೆಯ ಹೊಲಗಳಿಗೆ ಭೇಟಿ ನೀಡಿ ರೈತರೊಂದಿಗೆ ಸಂವಾದ ನಡೆಸಲಿದ್ದಾರೆ.

ಕೇಂದ್ರೀಯ ಅಕ್ಕಿ ಸಂಶೋಧನಾ ಸಂಸ್ಥೆಯಲ್ಲಿ ಸಭೆ ನಡೆಸಿ ಕೃಷಿ ಯೋಜನೆಗಳ ಅನುಷ್ಠಾನದ ಕುರಿತು ವಿಮರ್ಶೆ ಮಾಡಲಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande