ಗುಜರಾತನಲ್ಲಿ ಮೂವರು ಶಂಕಿತ ಐಸಿಸ್ ಭಯೋತ್ಪಾದಕರ ಬಂಧನ
ಗಾಂಧಿನಗರ, 09 ನವೆಂಬರ್ (ಹಿ.ಸ.) : ಆ್ಯಂಕರ್ : ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ರಾಜ್ಯದ ರಾಜಧಾನಿ ಗಾಂಧಿನಗರದ ಅದಲಾಜ್ ಪ್ರದೇಶದಲ್ಲಿ ನಡೆಸಿದ ಸಮಗ್ರ ತಪಾಸಣಾ ಕಾರ್ಯಾಚರಣೆಯಲ್ಲಿ ಮೂವರು ಶಂಕಿತ ಭಯೋತ್ಪಾದಕರನ್ನು ಬಂಧಿಸಿದೆ. ಇವರು ಅಂತರರಾಷ್ಟ್ರೀಯ ಉಗ್ರ ಸಂಘಟನೆ ಐಸಿಸ್ ನೊಂದಿಗೆ ಸಂಪರ್ಕ
Arrest


ಗಾಂಧಿನಗರ, 09 ನವೆಂಬರ್ (ಹಿ.ಸ.) :

ಆ್ಯಂಕರ್ : ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ರಾಜ್ಯದ ರಾಜಧಾನಿ ಗಾಂಧಿನಗರದ ಅದಲಾಜ್ ಪ್ರದೇಶದಲ್ಲಿ ನಡೆಸಿದ ಸಮಗ್ರ ತಪಾಸಣಾ ಕಾರ್ಯಾಚರಣೆಯಲ್ಲಿ ಮೂವರು ಶಂಕಿತ ಭಯೋತ್ಪಾದಕರನ್ನು ಬಂಧಿಸಿದೆ. ಇವರು ಅಂತರರಾಷ್ಟ್ರೀಯ ಉಗ್ರ ಸಂಘಟನೆ ಐಸಿಸ್ ನೊಂದಿಗೆ ಸಂಪರ್ಕ ಹೊಂದಿದ್ದಾರೆಂಬ ಗಂಭೀರ ಆರೋಪ ಎದುರಿಸುತ್ತಿದ್ದಾರೆ.

ಎಟಿಎಸ್ ಮೂಲಗಳ ಪ್ರಕಾರ, ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿರುವ ಕೆಲವು ಶಂಕಿತ ವ್ಯಕ್ತಿಗಳ ಸಂಚು ಕುರಿತು ಗುಪ್ತಚರ ಮಾಹಿತಿ ಲಭ್ಯವಾದ ನಂತರ, ವಿಶೇಷ ತಂಡವು ಅವರ ಮೇಲೆ ನಿಗಾ ಇಟ್ಟು ಕಾರ್ಯಾಚರಣೆ ನಡೆಸಿತು. ಬಂಧಿತರಿಂದ ದೇಶದ ಅನೇಕ ನಗರಗಳಲ್ಲಿ ದಾಳಿ ನಡೆಸುವ ಯೋಜನೆ ಕುರಿತು ಸುಳಿವುಗಳು ಸಿಕ್ಕಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೂವರು ಶಂಕಿತರು ಶಸ್ತ್ರಾಸ್ತ್ರಗಳ ವಿನಿಮಯ ಹಾಗೂ ದಾಳಿ ತಂತ್ರ ರೂಪಿಸುವ ಉದ್ದೇಶದಿಂದ ಗುಜರಾತ್‌ಗೆ ಬಂದಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಅವರ ಸಂಪರ್ಕ ಜಾಲ, ಹಣಕಾಸು ಮೂಲ ಮತ್ತು ಸಂಪರ್ಕಿತ ಇತರೆ ಸಹಚರರ ಪತ್ತೆಗಾಗಿ ತನಿಖೆ ಪ್ರಾರಂಭವಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande