ಕಲಾಪ್ರತಿಭೋತ್ಸವ ನೋಂದಣಿಗೆ ನವೆಂಬರ್ 18 ಕೊನೆಯ ದಿನ
ಧಾರವಾಡ, 09 ನವೆಂಬರ್ (ಹಿ.ಸ.) : ಆ್ಯಂಕರ್ : ಮಕ್ಕಳ ಹಾಗೂ ಯುವಜನರ ಕಲಾಪ್ರತಿಭೆಯನ್ನು ಗುರುತಿಸಿ, ಉತ್ತೇಜನ ನೀಡುವ ಉದ್ದೇಶದಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕಲಾಪ್ರತಿಭೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಅರ್ಜಿಗಳನ್ನು ಸಹಾಯಕ ನಿರ್ದೇಶಕ
ಕಲಾಪ್ರತಿಭೋತ್ಸವ ನೋಂದಣಿಗೆ ನವೆಂಬರ್ 18 ಕೊನೆಯ ದಿನ


ಧಾರವಾಡ, 09 ನವೆಂಬರ್ (ಹಿ.ಸ.) :

ಆ್ಯಂಕರ್ : ಮಕ್ಕಳ ಹಾಗೂ ಯುವಜನರ ಕಲಾಪ್ರತಿಭೆಯನ್ನು ಗುರುತಿಸಿ, ಉತ್ತೇಜನ ನೀಡುವ ಉದ್ದೇಶದಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕಲಾಪ್ರತಿಭೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ.

ಆಸಕ್ತ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಅರ್ಜಿಗಳನ್ನು ಸಹಾಯಕ ನಿರ್ದೇಶಕರ ಕಚೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸುವರ್ಣ ಸಾಂಸ್ಕೃತಿಕ ಸಮುಚ್ಛಯ, ಕಾಲೇಜು ರಸ್ತೆ, ಧಾರವಾಡ, (ದೂರವಾಣಿ: 0836–2442909) ಗೆ ಅಂಚೆ ಮೂಲಕ ಅಥವಾ ಖುದ್ದಾಗಿ ನವೆಂಬರ್ 18ರೊಳಗೆ ಸಲ್ಲಿಸಬೇಕಾಗಿದೆ ಎಂದು ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಿದೆ.

ವಯೋಮಿತಿ:

ಬಾಲ ಪ್ರತಿಭೆ ಸ್ಪರ್ಧೆಗೆ 8–14 ವರ್ಷ, ಕಿಶೋರ ಪ್ರತಿಭೆ ಸ್ಪರ್ಧೆಗೆ 14–18 ವರ್ಷ ಹಾಗೂ ಯುವ ಪ್ರತಿಭೆ ಸ್ಪರ್ಧೆಗೆ 18–30 ವರ್ಷದವರೇ ಅರ್ಹರು. ವಯೋಮಿತಿಯ ದೃಢೀಕರಣಕ್ಕಾಗಿ ಶಾಲಾ ಪ್ರಮಾಣ ಪತ್ರ ಅಥವಾ ಪಂಚಾಯಿತಿ/ಪುರಸಭೆ ಪ್ರಮಾಣ ಪತ್ರವನ್ನು ಸಲ್ಲಿಸುವುದು ಕಡ್ಡಾಯವಾಗಿದೆ.

ಏಕವ್ಯಕ್ತಿ ಸ್ಪರ್ಧೆಗಳು:

ಬಾಲ, ಕಿಶೋರ ಮತ್ತು ಯುವ ಪ್ರತಿಭೆ ವಿಭಾಗಗಳಲ್ಲಿ ಶಾಸ್ತ್ರೀಯ ನೃತ್ಯ (10 ನಿಮಿಷ), ಸುಗಮ ಸಂಗೀತ (7 ನಿಮಿಷ), ಜಾನಪದ ಗೀತೆ (7 ನಿಮಿಷ), ಶಾಸ್ತ್ರೀಯ ಸಂಗೀತ ಗಾಯನ ಅಥವಾ ವಾದ್ಯ (7 ನಿಮಿಷ), ಚಿತ್ರಕಲೆ (120 ನಿಮಿಷ) ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಯುವ ಪ್ರತಿಭೆ ವಿಭಾಗದಲ್ಲಿ “ನನ್ನ ಮೆಚ್ಚಿನ ಸಾಹಿತಿ” ವಿಷಯದ ಆಶುಭಾಷಣ ಸ್ಪರ್ಧೆಯೂ ಇರುತ್ತದೆ.

ಸಮೂಹ ಸ್ಪರ್ಧೆ:

ಯುವ ಪ್ರತಿಭೆಗಳಿಗಾಗಿ ನಾಟಕ ಸ್ಪರ್ಧೆ ಆಯೋಜಿಸಲಾಗಿದ್ದು, ತಂಡದ ಸದಸ್ಯರ ಸಂಖ್ಯೆ ಕನಿಷ್ಠ 10 ಹಾಗೂ ಗರಿಷ್ಠ 15ರೊಳಗಿರಬೇಕು. ನಾಟಕದ ಅವಧಿ ಗರಿಷ್ಠ 45 ನಿಮಿಷವಾಗಿರುತ್ತದೆ.

ಬಹುಮಾನಗಳು:

ಜಿಲ್ಲಾ ಮತ್ತು ಬೆಳಗಾವಿ ವಲಯ ಮಟ್ಟದ ಸ್ಪರ್ಧಾರ್ಥಿಗಳಿಗೆ ಪ್ರಮಾಣಪತ್ರ ನೀಡಲಾಗುತ್ತದೆ. ರಾಜ್ಯ ಮಟ್ಟದಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದವರಿಗೆ ಕ್ರಮವಾಗಿ ರೂ.15,000, ರೂ.10,000 ಹಾಗೂ ರೂ.7,500 (ಏಕವ್ಯಕ್ತಿ ವಿಭಾಗ) ನಗದು ಬಹುಮಾನ ಹಾಗೂ ಪ್ರಮಾಣಪತ್ರ ನೀಡಲಾಗುತ್ತದೆ. ಸಮೂಹ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ತಂಡಕ್ಕೆ ರೂ.50,000, ದ್ವಿತೀಯ ಸ್ಥಾನಕ್ಕೆ ರೂ.40,000 ಮತ್ತು ತೃತೀಯ ಸ್ಥಾನಕ್ಕೆ ರೂ.30,000 ನಗದು ಬಹುಮಾನ ನೀಡಲಾಗುವುದು.

ರಾಜ್ಯ ಮಟ್ಟದ ಸ್ಪರ್ಧೆಗಳಿಗೆ ಆಗಮಿಸುವ ನಾಟಕ ನಿರ್ದೇಶಕರು, ಪಕ್ಕವಾದ್ಯಗಾರರು ಹಾಗೂ ಸಹ ಕಲಾವಿದರಿಗೆ ವಾಸ್ತವಿಕ ಪ್ರಯಾಣ ವೆಚ್ಚ, ಊಟ, ವಸತಿ ಹಾಗೂ ಪ್ರಮಾಣಪತ್ರ ನೀಡಲಾಗುತ್ತದೆ ಎಂದು ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande