
ಚಿತ್ರದುರ್ಗ, 09 ನವೆಂಬರ್ (ಹಿ.ಸ.) :
ಆ್ಯಂಕರ್ : ಕರ್ನಾಟಕ ಮೇದಾರ ಪರಿಶಿಷ್ಟ ಪಂಗಡದ ಅಲೆಮಾರಿ ಅಭಿವೃದ್ಧಿ ನಿಗಮದ ಯೋಜನೆಗಳ ಹಾಗೂ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಚಿತ್ರದುರ್ಗ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಮೇಲುಸ್ತುವಾರಿ ಸಮಿತಿ ರಚನೆ ಮಾಡಲಾಗುವುದು. ಸಮಿತಿಗೆ ಮೇದ, ಮೇದಾರಿ, ಮೇದಾರ, ಬುರುಡ ಮತ್ತು ಗೌರಿಗ ಸಮುದಾಯದ 05 ಪ್ರತಿನಿಧಿಗಳನ್ನು ನಾಮ ನಿರ್ದೇಶನ ನೀಡಲು ಅವಕಾಶವಿದೆ. ಈಗಾಗಲೇ 03 ಅರ್ಹ ಪ್ರತಿನಿಧಿಗಳು ನಾಮ ನಿರ್ದೇಶನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಇನ್ನೂ 02 ಅರ್ಹ ಪ್ರತಿನಿಧಿಗಳಿಗಾಗಿ ಮೇಲೆ ಸೂಚಿಸಿದ ಜಾತಿಯ ಆಸಕ್ತರು ನ.12 ರ ಒಳಗಾಗಿ ನಗರದ ಜೆ.ಸಿ.ಆರ್. ಬಡಾವಣೆ ಗಣೇಶ ದೇವಸ್ಥಾನದ ಹತ್ತಿರದ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಕಚೇರಿಗೆ ಅರ್ಜಿ ಸಲ್ಲಿಸುವಂತೆ ಪ್ರಕಟಣೆ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa