
ಬೆಂಗಳೂರು, 09 ನವೆಂಬರ್ (ಹಿ.ಸ.) :
ಆ್ಯಂಕರ್ : ಬಾಲ ಭವನ ಸೊಸೈಟಿ, ಬೆಂಗಳೂರು ವತಿಯಿಂದ ಮಕ್ಕಳ ದಿನಾಚರಣೆ ಅಂಗವಾಗಿ 2025ನೇ ಸಾಲಿನ ರಾಜ್ಯ ಮಟ್ಟದ ಮಕ್ಕಳ ಕಲಾಶ್ರೀ ಪ್ರಶಸ್ತಿಗಾಗಿ ಆಯ್ಕೆ ಶಿಬಿರವನ್ನು ಸೃಜನಾತ್ಮಕ ಪ್ರದರ್ಶನ ಕಲೆ, ಸೃಜನಾತ್ಮ ಕಲೆ, ಸೃಜನಾತ್ಮಕ ಬರವಣೆಗೆ ಮತ್ತು ವಿಜ್ಞಾನದಲ್ಲಿ ನೂತನ ಅವಿಷ್ಕಾರ ಪ್ರಕಾರಗಳಲ್ಲಿ ನಡೆಸಲು ಉದ್ದೇಶಿದೆ. ಬೆಂಗಳೂರು ನಗರ ಜಿಲ್ಲೆಯ 09-16 ವರ್ಷದೊಳಗಿನ ಮಕ್ಕಳಿಗಾಗಿ ನವೆಂಬರ್ 14, 2025 ರಂದು ಸ್ಥಳೀಯ ಮಟ್ಟದ ಆಯ್ಕೆ ಶಿಬಿರವನ್ನು ಏರ್ಪಡಿಸಲಾಗಿದೆ.
ಈ ಪ್ರಕಾರಗಳಲ್ಲಿ ಪ್ರಾವೀಣ್ಯತೆ ಹೊಂಡಿರುವ 09-16 ವರ್ಷದ ಮಕ್ಕಳ ಸ್ಥಳೀಯ ಮಟ್ಟದ ಆಯ್ಕೆಯಲ್ಲಿ ಪಾಲ್ಗೊಂಡು, ಆಯ್ಕೆಯಾದಲ್ಲಿ ರಾಜ್ಯ ಮಟ್ಟದ ಶಿಬಿರದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗುವುದು. ಅಂಗವಿಕಲ / ಬುಡಕಟ್ಟು ಪ್ರದೇಶ ಮಕ್ಕಳ ಯಾವುದೇ ಪ್ರಕಾರದಲ್ಲಿ ಪ್ರತಿಭಾವಂತ 02 ಸ್ಪರ್ಧಿಗಳಲ್ಲಿ ಭಾಗವಹಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಹಾಗೂ ನೋಂದಣಿಗಾಗಿ ಕಾರ್ಯದರ್ಶಿ, ಬಾಲ ಭವನ ಸೊಸೈಟಿ, ಕಬ್ಬನ್ ಉದ್ಯಾನವನ, ಬೆಂಗಳೂರು-1 ಇಲ್ಲಿ ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ 080-22864189 ಗೆ ಸಂಪರ್ಕಿಸಬಹುದು ಎಂದು ಬೆಂಗಳೂರು ಬಾಲ ಭವನ ಸೊಸೈಟಿಯ ಕಾರ್ಯದರ್ಶಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa