
ವಿಜಯಪುರ, 06 ನವೆಂಬರ್ (ಹಿ.ಸ.) :
ಆ್ಯಂಕರ್ : ವಿಜಯಪುರ ಅಪರ ಜಿಲ್ಲಾಧಿಕಾರಿಗಳು ವಿಜಯಪುರ ಇವರ ಅಧ್ಯಕ್ಷತೆಯಲ್ಲಿ ಆಧಾರ ದಾಖಲಾತಿಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಜಿಲ್ಲಾ ಆಧಾರ ಉಸ್ತುವಾರಿ ಸಮಿತಿ ಸಭೆಯಲ್ಲಿ ಚರ್ಚಿಸಿದಂತೆ ಶಾಲೆಯಲ್ಲಿರುವ ಮಕ್ಕಳ ಆಧಾರ ತಿದ್ದುಪಡಿ ಶಾಲಾ ದಾಖಲಾತಿಯಂತೆ ಹಾಗೂ 05 ರಿಂದ 07 ವರ್ಷ ಹಾಗೂ 15 ರಿಂದ 17 ವರ್ಷ ಪೂರೈಸಿದ ಮಕ್ಕಳ ಕಡ್ಡಾಯ ಜೈವಿಕ ಅಪಡೇಟ್ 03 ತಿಂಗಳಲ್ಲಿ ಕಾಲೋಚಿತಗೊಳಿಸಬೇಕು.
ಜಿಲ್ಲೆಯಲ್ಲಿ 05 ರಿಂದ 18 ವರ್ಷದ ಮಕ್ಕಳ ಒಟ್ಟು 6,87,558 ಆಧಾರ ಸೃಜನೆಯಾಗಿದ್ದು, ಅದರಲ್ಲಿ 05 ರಿಂದ 07 ವರ್ಷದ ಮಕ್ಕಳ 1,69,312 ಹಾಗೂ 15 ರಿಂದ 17 ವರ್ಷದ ಮಕ್ಕಳ 1,20,505 ಒಟ್ಟು 2,89,817 ಕಡ್ಡಾಯ ಜೈವಿಕ ಕಾಲೋಚಿತಗೊಳಿಸುವುದು ಬಾಕಿ ಇರುವುದರಿಂದ ಪಾಲಕರು ಹತ್ತಿರದ ಆಧಾರ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಕಡ್ಡಾಯ ಜೈವಿಕ ಅಪಡೇಟ್ ಮಾಡಿಕೊಳ್ಳಬಹುದಾಗಿದೆ.10 ವರ್ಷಗಳ ಹಿಂದೆ ಆಧಾರ ಸೃಜಿಸಲಾದ ಸಾರ್ವಜನಿಕರು ತಮ್ಮ ಗುರುತಿನ ಹಾಗೂ ವಿಳಾಸದ ಪುರಾವೆಗಳನ್ನು ಕಾಲೋಚಿತಗೊಳಿಸಲು ಯುಐಡಿಎಐ ಹೊಸದಾಗಿ ಪರಿಚಯಿಸಿದ ಪಿಒಐ-ಪಿಒಎ ಅಪಡೇಟ್ ಮಾಡಿಕೊಳ್ಳಲು ತಿಳಿಸಿದೆ. ಜಿಲ್ಲೆಯಲ್ಲಿ 2,14,964 ಆಧಾರ ಸಂಖ್ಯೆಗಳ ಮೊಬೈಲ್ ನಂಬರ್ ಕಾಲೋಚಿತಗೊಳಿಸಲು ಬಾಕಿ ಇದ್ದು ಈ ಸೇವೆಯನ್ನು ಸಾರ್ವಜನಿಕರು ಆಧಾರ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಕಾಲೋಚಿತಗೊಳಿಸಿಕೊಳ್ಳುವಂತೆ ಅಪರ ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / jyothi deshpande