ಸಚಿವ ಎನ್.ಎಸ್.ಬೋಸರಾಜು ರಾಯಚೂರು ಜಿಲ್ಲಾ ಪ್ರವಾಸ
ರಾಯಚೂರು, 06 ನವೆಂಬರ್ (ಹಿ.ಸ.) : ಆ್ಯಂಕರ್ : ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು ಹಾಗೂ ಕರ್ನಾಟಕ ವಿಧಾನ ಪರಿಷತ್ತಿನ ಸಭಾ ನಾಯಕರಾದ ಎನ್.ಎಸ್.ಬೋಸರಾಜು ಅವರು ನವೆಂಬರ್ 7 ಹಾಗೂ 8 ರಂದು ರಾಯಚೂರು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ನವೆಂಬರ್ 7ರ ಬೆಳಿಗ್ಗೆ 11.30ಕ್ಕೆ ಜಿ
ಸಚಿವ ಎನ್.ಎಸ್.ಬೋಸರಾಜು ರಾಯಚೂರು ಜಿಲ್ಲಾ ಪ್ರವಾಸ


ರಾಯಚೂರು, 06 ನವೆಂಬರ್ (ಹಿ.ಸ.) :

ಆ್ಯಂಕರ್ : ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು ಹಾಗೂ ಕರ್ನಾಟಕ ವಿಧಾನ ಪರಿಷತ್ತಿನ ಸಭಾ ನಾಯಕರಾದ ಎನ್.ಎಸ್.ಬೋಸರಾಜು ಅವರು ನವೆಂಬರ್ 7 ಹಾಗೂ 8 ರಂದು ರಾಯಚೂರು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.

ನವೆಂಬರ್ 7ರ ಬೆಳಿಗ್ಗೆ 11.30ಕ್ಕೆ ಜಿಲ್ಲೆಯ ಮಾನವಿ ತಾಲೂಕಿನ ಸುಕ್ಷೇತ್ರ ಕರೆಗುಡ್ಡದ ಶ್ರೀಮಹಾಂತೇಶ್ವರ ಸಂಸ್ಥಾನ ಮಠದ ಕಾರ್ಯಕ್ರಮಗಳಲ್ಲಿ ಭಾಗಿಯಾಗುವರು.

ಮಧ್ಯಾಹ್ನ 1.15ಕ್ಕೆ ಮಾನವಿ ಶಾಸಕರೊಂದಿಗೆ ಮಾನವಿ ವಿಧಾನಸಭಾ ಕ್ಷೇತ್ರದ ಬಾಗಲವಾಡ ಮತ್ತು ನಡುಗಡ್ಡೆ ಕ್ಯಾಂಪ್‌ಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ಹಾಗೂ ಉದ್ಘಾಟನೆ ಕಾರ್ಯಕ್ರಮಗಳಲ್ಲಿ ಭಾಗಿಯಾಗುವರು.

ಮಧ್ಯಾಹ್ನ 3 ಗಂಟೆಗೆ ರಾಜ್ಯ ಹೆದ್ದಾರಿ-128ಕ್ಕೆ ಸೇರುವ ಕರೇಗುಡ್ಡ ಕ್ರಾಸ್‌ನಿಂದ 76 ವಿತರಣಾ ಕಾಲುವೆಯವರೆಗೆ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಮಾನವಿ ಶಾಸಕರೊಂದಿಗೆ ಭಾಗಿಯಾಗಿಯಾಗುವರು.

ಸಂಜೆ 4 ಗಂಟೆಗೆ ಮಾನವಿ ಶಾಸಕರೊಂದಿಗೆ ಮಾನವಿ ಪಟ್ಟಣದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ಹಾಗೂ ಉದ್ಘಾಟನೆ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಸಂಜೆ 6 ಗಂಟೆಗೆ ರಾಯಚೂರಿನ ಆಗಮಿಸಿ ವಾಸ್ತವ್ಯ ಹೂಡಲಿದ್ದಾರೆ.

ನವೆಂಬರ್ 8ರ ಬೆಳಿಗ್ಗೆ 9 ಗಂಟೆಗೆ ಜಿಲ್ಲಾಡಳಿತದ ವತಿಯಿಂದ ಆಯೋಜಿಸಿರುವ ಸಂತಕವಿ ಶ್ರೀ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸುವವರು.

ಬೆಳಿಗ್ಗೆ 11 ಗಂಟೆಗೆ ಅತ್ತನೂರು-ಮಾನವಿ ತಾಲ್ಲೂಕಿನ ರಾಷ್ಟೀಯ ಹೆದ್ದಾರಿ-127, ಯರಗೇರಾ (ಅತ್ತನೂರು ಬೊಮ್ಮನಾಳ) ರಸ್ತೆಯವರೆಗೆ ಮರುಡಾಂಬರೀಕರಣ ಕಾಮಗಾರಿಗೆ ಭೂಮಿಪೂಜೆಯಲ್ಲಿ ಭಾಗಿಯಾಗುವರು. ಬೆಳಿಗ್ಗೆ 11.30ಕ್ಕೆ ಮಾನವಿ ವಿಧಾನ ಸಭಾ ಕ್ಷೇತ್ರದ ಸಿರವಾರ ಪಟ್ಟಣದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ಹಾಗೂ ಉದ್ಘಾಟನೆ ಕಾರ್ಯಕ್ರಮಗಳಲ್ಲಿ ಮಾನವಿ ಶಾಸಕರೊಂದಿಗೆ ಭಾಗಿಯಾಗುವರು.

ಮಧ್ಯಾಹ್ನ 1 ಗಂಟೆಗೆ ಕವಿತಾಳ ಪಟ್ಟಣದ 30 ಹಾಸಿಗೆಗಳ ಸಮುದಾಯ ಆರೋಗ್ಯ ಕೇಂದ್ರವನ್ನು 50 ಹಾಸಿಗೆಗಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸುವ ಹಾಗೂ ಮಾನವಿ ವಿಧಾನ ಸಭಾ ಕ್ಷೇತ್ರದ ರಾಜ್ಯ ಹೆದ್ದಾರಿ-20 ಕವಿತಾಳದಿಂದ ಬಸ್ಸಾಪೂರುವರೆಗೆ ರಸ್ತೆ ಡಾಂಬರೀಕರಣ ಕಾಮಗಾರಿಗೆ ಭೂಮಿಪೂಜೆ ಕಾರ್ಯಕ್ರಮಗಳಲ್ಲಿ ಮಾನವಿ ಶಾಸಕರೊಂದಿಗೆ ಭಾಗವಹಿಸುವರು.

ಬಳಿಕ ಪೋತ್ನಾಳ, ಸಿಂಧನೂರು ಹಾಗೂ ಗಂಗಾವತಿ ಮಾರ್ಗವಾಗಿ ಹೊಸಪೇಟೆಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಸಚಿವರ ಆಪ್ತ ಕಾರ್ಯದರ್ಶಿಗಳಾದ ವೀರಭದ್ರ ಹಂಚಿನಾಳ ಅವರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande