ಕುರುಗೋಡು ಪುರಸಭೆ : ಆಕ್ಷೇಪಣೆಗಳಿಗೆ ಆಹ್ವಾನ
ಕುರುಗೋಡು, 06 ನವೆಂಬರ್ (ಹಿ.ಸ.) : ಆ್ಯಂಕರ್ : ಕುರುಗೋಡು ಪಟ್ಟಣದ ಮುಖ್ಯ ವೃತ್ತದಲ್ಲಿನ ಈಶ್ವರ ಪಾರ್ಕ್ ಕುರುಗೋಡು ಪುರಸಭೆ ಖಾತೆಯ ಕೆಎಮ್‌ಎಫ್-24 ಡಿಮ್ಯಾಂಡ್ ಪುಸ್ತಕದಲ್ಲಿ ನೋಂದಣಿ ಇರುವುದನ್ನು ತಿದ್ದುಪಡಿ ಮಾಡು ಪುರಸಭೆಯ ಖಾಲಿ ನಿವೇಶನ ಎಂದು ನಮೂದಿಸಿ ಈಶ್ವರ ಪಾರ್ಕ್ ಅನ್
ಕುರುಗೋಡು ಪುರಸಭೆ : ಆಕ್ಷೇಪಣೆಗಳಿಗೆ ಆಹ್ವಾನ


ಕುರುಗೋಡು, 06 ನವೆಂಬರ್ (ಹಿ.ಸ.) :

ಆ್ಯಂಕರ್ : ಕುರುಗೋಡು ಪಟ್ಟಣದ ಮುಖ್ಯ ವೃತ್ತದಲ್ಲಿನ ಈಶ್ವರ ಪಾರ್ಕ್ ಕುರುಗೋಡು ಪುರಸಭೆ ಖಾತೆಯ ಕೆಎಮ್‌ಎಫ್-24 ಡಿಮ್ಯಾಂಡ್ ಪುಸ್ತಕದಲ್ಲಿ ನೋಂದಣಿ ಇರುವುದನ್ನು ತಿದ್ದುಪಡಿ ಮಾಡು ಪುರಸಭೆಯ ಖಾಲಿ ನಿವೇಶನ ಎಂದು ನಮೂದಿಸಿ ಈಶ್ವರ ಪಾರ್ಕ್ ಅನ್ನು ಬಸ್ ತಂಗುದಾಣವಾಗಿ ನಿರ್ಮಿಸಲು ಮತ್ತು ಈ ಜಾಗವನ್ನು ಕೆಕೆಆರ್‌ಟಿಸಿ ಇಲಾಖೆಗೆ ಹಸ್ತಾಂತರಿಸಲಾಗುತ್ತಿದ್ದು, ಈ ಆಸ್ತಿಯ ಕುರಿತು ಕುರುಗೋಡು ಪಟ್ಟಣದ ಸಾರ್ವಜನಿಕರಿಂದ ಯಾವುದೇ ರೀತಿಯ ತಂಟೆ-ತಕರಾರು ಇದ್ದಲ್ಲಿ ನ.10 ರೊಳಗಾಗಿ ಕುರುಗೋಡು ಪುರಸಭೆ ಕಚೇರಿಗೆ ಅರ್ಜಿಯ ಮೂಲಕ ಲಿಖಿತವಾಗಿ ಆಕ್ಷೇಪಣೆ ಸಲ್ಲಿಸಬಹುದು ಎಂದು ಕುರುಗೋಡು ಪುರಸಭೆಯ ಮುಖ್ಯಾಧಿಕಾರಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande