
ಬಳ್ಳಾರಿ, 06 ನವೆಂಬರ್ (ಹಿ.ಸ.) :
ಆ್ಯಂಕರ್ : ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) ಸೂಚನೆಯಂತೆ ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ ( ಜೆಸ್ಕಾಂ) ವ್ಯಾಪ್ತಿಯ ವಿದ್ಯುತ್ ದರ ಪರಿಷ್ಕರಣೆಯ ಸಾರ್ವಜನಿಕ ಸಭೆಯು ನವೆಂಬರ್ 12 ರಂದು ನಿಗಮ ಕಚೇರಿಯಲ್ಲಿ (ಮೀಟಿಂಗ್ ಹಾಲ್ ನೆಲ ಮಹಡಿ, ಕಲಬುರಗಿ) ಬೆಳಗ್ಗೆ 11 ಗಂಟೆಗೆ ನಡೆಯಲಿದೆ ಎಂದು ಜೆಸ್ಕಾಂ ತಿಳಿಸಿದೆ.
ಸಾರ್ವಜನಿಕ ಅಹವಾಲುಗಳ ಸಭೆಯಲ್ ಗ್ರಾಹಕರು ಭೌತಿಕವಾಗಿ ಅಥವಾ ಆನ್‌ಲೈನ್ ಮೂಲಕ ಭಾಗವಹಿಸಬಹುದು. ತಮ್ಮ ಹೆಸರು, ಇಮೇಲ್ ಐಡಿ ಮತ್ತು ಫೋನ್ ಸಂಖ್ಯೆಗಳನ್ನು, ಆಯೋಗದ ಇ-ಮೇಲ್ ಐಡಿ asst.secykerc@gmail.comಗೆ ನವೆಂಬರ್ 10, ಬೆಳಗ್ಗೆ 11 ರಿಂದ ಸಂಜೆ 5ರ ಒಳಗಾಗಿ ನೋಂದಾಯಿಸಬೇಕು.
ಆಸಕ್ತ ಗ್ರಾಹಕರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು ಸಭೆಯಲ್ಲಿ ಪಾಲ್ಗೊಂಡು ತಮ್ಮ ಅಭಿಪ್ರಾಯಗಳನ್ನು ಆಯೋಗದ ಮುಂದೆ ಮಂಡಿಸಬಹುದು ಎಂದು ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್