
ವಿಜಯಪುರ, 06 ನವೆಂಬರ್ (ಹಿ.ಸ.) :
ಆ್ಯಂಕರ್ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಮೂಲಕ ಮಕ್ಕಳ ಮತ್ತು ಯುವಜನರ ಕಲಾಪ್ರತಿಭೆಯನ್ನು ಗುರುತಿಸಿ ಅವರಿಗೆ ಉತ್ತೇಜನ ನೀಡುವ ಹಾಗೂ ತಮ್ಮ ಕಲಾ ನೈಪುಣ್ಯವನ್ನು ವೃದ್ಧಿಗೊಳಿಸುವಂತೆ ಪ್ರೋತ್ಸಾಹಿಸಲು ಕಲಾ ಪ್ರತಿಭೋತ್ಸವ ಕಾರ್ಯಕ್ರಮಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಬಾಲ ಪ್ರತಿಭೆ ಸ್ಪರ್ಧೆಗಳಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ 8 ವರ್ಷ ಮೇಲ್ಪಟ್ಟು 14 ವರ್ಷಕ್ಕಿಂತ ಕಡಿಮೆ ವಯೋಮಾನ ಹೊಂದಿರುವವರು ಏಕ ವ್ಯಕ್ತಿ ಸ್ಪರ್ಧೆಗಳಲ್ಲಿ ಬಾಲ ಪ್ರತಿಭೆ ಸ್ಪರ್ಧೆಯಲ್ಲಿ ಶಾಸ್ತ್ರೀಯ ನೃತ್ಯಕ್ಕೆ 10 ನಿಮಿಷ, ಸುಗಮ ಸಂಗೀತಕ್ಕೆ 7 ನಿಮಿಷ, ಚಿತ್ರಕಲೆಗೆ 120 ನಿಮಿಷ, ಜಾನಪದ ಗೀತಗಾಯನಕ್ಕೆ 7 ನಿಮಿಷ, ಹಿಂದೂಸ್ಥಾನಿ-ಕರ್ನಾಟಕ ವಾದ್ಯ ಸಂಗೀತಕ್ಕೆ 7 ನಿಮಿಷ ಹಾಗೂ ಹಿಂದೂಸ್ಥಾನಿ-ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ 7 ನಿಮಿಷ ಅವಧಿ ನಿಗದಿಪಡಿಸಲಾಗಿದೆ.
ಕಿಶೋರ ಪ್ರತಿಭೆ ಸ್ಪರ್ಧೆಗಳಲ್ಲಿ ಭಾಗವಹಿಸುವವರು 14 ವರ್ಷತುಂಬಿರಬೇಕು, 18 ವರ್ಷಕ್ಕಿಂತ ಕಡಿಮೆ ವಯೋಮಾನದವರಿರಬೇಕು. ಏಕ ವ್ಯಕ್ತಿ ಸ್ಪರ್ಧೆಗಳಲ್ಲಿ ಕಿಶೋರ ಪ್ರತಿಭೆ ವಿಭಾಗದ ಸ್ಪರ್ಧೆ ಕಲಾಪ್ರಕಾರಗಳಾದ ಶಾಸ್ತ್ರೀಯ ನೃತ್ಯ-10 ನಿಮಿಷ, ಸುಗಮ ಸಂಗೀತ-7 ಚಿತ್ರಕಲೆ-120 ಜಾನಪದ ಗೀತ-7 ನಿಮಿಷ,ಹಿಂದೂಸ್ಥಾನಿ-ಕರ್ನಾಟಕವಾದ್ಯ ಸಂಗೀತ-7 ಹಾಗೂ ಹಿಂದೂಸ್ಥಾನಿ-ಕರ್ನಾಟಕ ಶಾಸ್ತ್ರೀಯ ಸಂಗೀತ-7 ನಿಮಿಷದ ಅವಧಿ ನಿಗದಿಪಡಿಸಲಾಗಿದೆ.
ಯುವ ಪ್ರತಿಭೆ ಸ್ಪರ್ಧೆಗಳಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ 18 ವರ್ಷತುಂಬಿರಬೇಕು, 30 ವರ್ಷಕ್ಕಿಂತ ಕಡಿಮೆಯಿರಬೇಕು. ಏಕ ವ್ಯಕ್ತಿಸ್ಪರ್ಧೆಗಳಲ್ಲಿ ಯುವ ಪ್ರತಿಭೆ ವಿಭಾಗದ ಸ್ಪರ್ಧೆ ನನ್ನ ಮೆಚ್ಚಿನ ಸಾಹಿತಿ ಆಶುಭಾಷಣ 7 ನಿಮಿಷ, ಶಾಸ್ತ್ರೀಯ ನೃತ್ಯ 10 ನಿಮಿಷ, ಸುಗಮಸಂಗೀತ 7, ಹಿಂದೂಸ್ಥಾನಿ-ಕರ್ನಾಟಕ ಶಾಸ್ತ್ರೀಯ ಸಂಗೀತ 7, ಚಿತ್ರಕಲೆ-120 ಹಾಗೂ ಹಿಂದೂಸ್ಥಾನಿ-ಕರ್ನಾಟಕವಾದ್ಯ ಸಂಗೀತ 7 ನಿಮಿಷ ನಿಗದಿಪಡಿಸಲಾಗಿದೆ ಹಾಗೂ ಯುವ ಪ್ರತಿಭೆಗಳ ಸಮೂಹ ಸ್ಪರ್ಧೆ ನಾಟಕ-45 ನಿಮಿಷ ತಂಡದಲ್ಲಿ ಕನಿಷ್ಠ 10 ಗರಿಷ್ಟ 15 ಜನ ಸದಸ್ಯರು ಒಳಗೊಂಡಿರಬೇಕು.
ಈ ಎಲ್ಲ ಸ್ಪರ್ಧೆಗಳಲ್ಲಿ ಭಾಗವಹಿಸುವವರು ವಯೋಮಿತಿಯ ದೃಢೀಕರಣಕ್ಕಾಗಿ ಶಾಲೆಯಿಂದ ಪಡೆದ ಪ್ರಮಾಣ ಪತ್ರವನ್ನು ಸಲ್ಲಿಸಬೇಕು. ಅವರ ಶಾಲಾ ದಾಖಲೆ ಒದಗಿಸದೇ ಇರುವವರು ವಯಸ್ಸಿನ ಬಗ್ಗೆ ಪಂಚಾಯಿತಿ, ನಗರಸಭೆ, ಪುರಸಭೆ,ಪಾಲಿಕೆ ಕಚೇರಿಯಿಂದ ದೃಢೀಕರಣ ಪತ್ರ ಪಡೆದು ಸಲ್ಲಿಸಬೇಕು.
ಬಾಲಪ್ರತಿಭೆ-ಕಿಶೋರಪ್ರತಿಭೆ-ಯುವ ಪ್ರತಿಭೆ ಸ್ಪರ್ಧೆಯ ಎಲ್ಲಾ ಸ್ಪರ್ಧಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ನೀಡುವುದು ಆದರೆ ಜಿಲ್ಲಾ ಮಟ್ಟದಲ್ಲಿ ಹಾಗೂ ವಲಯ ಮಟ್ಟದಲ್ಲಿ ಯಾವುದೇ ನಗದು ಬಹುಮಾನ ಇರುವುದಿಲ್ಲ.
ರಾಜ್ಯ ಮಟ್ಟದಲ್ಲಿ ಪ್ರಥಮ,ದ್ವೀತಿಯ, ತೃತೀಯ ಸ್ಥಾನ ಪಡೆದ ಅಭ್ಯರ್ಥಿಗಳಿಗೆ ಕ್ರಮವಾಗಿ ರೂ.15 ಸಾವಿರ, 10 ಸಾವಿರ ಹಾಗೂ 7,500 ಬಹುಮಾನ ಹಾಗೂ ಪ್ರಮಾಣಪತ್ರ ನೀಡಲಾಗುವುದು.
ಸಮೂಹ ಕಲಾ ಪ್ರಕಾರಗಳಲ್ಲಿ ಭಾಗವಹಿಸುವ ತಂಡದ ಸದಸ್ಯರು ಸಂಖ್ಯೆ 10 ಗರಿಷ್ಠ 15 ಮೀರಿರಬಾರದು.
ವಲಯ ಹಾಗೂ ರಾಜ್ಯಮಟ್ಟದಲ್ಲಿ ಸ್ಪರ್ಧೆಗಳೊಂದಿಗೆ ಆಗಮಿಸುವ ನಾಟಕ ನಿರ್ದೇಶಕ, ಪಕ್ಕವಾದ್ಯ, ಸಹಕಲಾವಿದರಿಗೆ ವಾಸ್ತವಿಕ ಪ್ರಯಾಣ ವೆಚ್ಚ ಊಟ,ವಸತಿ ಹಾಗೂ ಪ್ರಮಾಣ ಪತ್ರವನು ನೀಡಲಾಗುವುದು.
ರಾಜ್ಯ ಮಟ್ಟದಲ್ಲಿ ಪ್ರಥಮ, ದ್ವೀತಿಯ ಹಾಗೂ ತೃತೀಯ ಸ್ಥಾನ ಪಡೆದ ಅಭ್ಯರ್ಥಿಗಳಿಗೆ ಕ್ರಮವಾಗಿ ರೂ.50ಸಾವಿರ,40 ಸಾವಿರ ಹಾಗೂ 30 ಸಾವಿರ ನಗದು ಬಹುಮಾನವನ್ನು ನೀಡಲಾಗುವುದು.
ಕಲಾ ಪ್ರತಿಭೋತ್ಸವದಲ್ಲಿ ಒಬ್ಬ ಸ್ಪರ್ಧಿಯು ಒಂದಕ್ಕಿ0ತ ಹೆಚ್ಚಿನ ಸ್ಪರ್ಧೆಗಳಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲ.
ಕಲಾವಿದರು-ಅಭ್ಯರ್ಥಿಗಳು ತಮ್ಮ ಸ್ವವಿವರಗಳೊಂದಿಗೆ ಅರ್ಜಿಯಲ್ಲಿ ಕಲಾಪ್ರಕಾರದ ವಿವರವನ್ನು ಸ್ಪಷ್ಟವಾಗಿ ನಮೂದಿಸಿ ಅರ್ಜಿಯನ್ನು ಸಹಾಯಕ ನಿರ್ದೇಶಕರ ಕಚೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕಂದಗಲ್ ಶ್ರೀ ಹನುಮಂತರಾಯ ರಂಗಮ0ದಿರ, ಸ್ಟೇಷನ್ ರಸ್ತೆ, ವಿಜಯಪುರ ಇಲ್ಲಿಗೆ ಖುದ್ದಾಗಿ ದಿನಾಂಕ:13-11-2025ರಒಳಗಾಗಿ ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬಹುದಾಗಿದೆ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಹಾಯಕ ನಿರ್ದೇಶರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರನ್ನು ಸಂಪರ್ಕಿಸಬಹುದಾಗಿ ಎಂದು ಪ್ರಕಟಣೆ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / jyothi deshpande