ಬಳ್ಳಾರಿ : ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೆಜಿಬಿ ಸಿಬ್ಬಂದಿ ಪ್ರತಿಭಟನೆ
ನಾನಾ
ಬಳ್ಳಾರಿ : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೆಜಿಬಿ ಅಧಿಕಾರಿಗಳ ಮತ್ತು ಸಿಬ್ಬಂದಿಯ ಪ್ರತಿಭಟನೆ


ಬಳ್ಳಾರಿ, 06 ನವೆಂಬರ್ (ಹಿ.ಸ.) :

ಆ್ಯಂಕರ್ : ನಾನಾ ಬೇಡಿಕೆಗಳ ಈಡೇರಿಕೆಗಾಗಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ಅಧಿಕಾರಿಗಳ ಫೆಡರೇಶನ್ ಮತ್ತು ಕರ್ನಾಟಕ ಗ್ರಾಮೀಣ ಬ್ಯಾಂಕ್ ನೌಕರರ ಫೆಡರೇಶನ್‍ನ ಜಂಟಿ ಆಶ್ರಯದಲ್ಲಿ ಕೇಂದ್ರ ಕಚೇರಿಯ ಮುಂದೆ ಎರೆಡು ದಿನಗಳ ಪ್ರತಿಭಟನೆಯನ್ನು ಗುರುವಾರದಿಂದ ಆರಂಭಿಸಿದ್ದಾರೆ.

ಕರ್ನಾಟಕ ಗ್ರಾಮೀಣ ಬ್ಯಾಂಕ್ ಅಧಿಕಾರಿಗಳ ಫೆಡರೇಷನ್‍ನ ಅಧ್ಯಕ್ಷ ಲಿಂಗರಾಜ್ ರೊಡ್ಡನವರ ಅವರು ಪ್ರತಿಭಟನೆಯ ನೇತೃತ್ವವಹಿಸಿ, ಗ್ರಾಮೀಣ ಬ್ಯಾಂಕುಗಳ ವಿಲೀನದಿಂದಾಗಿ ಸಿಬ್ಬಂದಿಗಳ ಕಾರ್ಯದಕ್ಷತೆ ಮತ್ತು ಬ್ಯಾಂಕಿಂಗ್ ಸೇವೆಗಳ ಮೇಲೆ ಪರಿಣಾಮ ಬೀರುತ್ತಿದೆ. ಈ ಸಮಸ್ಯೆಗಳಿಗೆ ಕನಿಷ್ಠ ಪರಿಹಾರವನ್ನು ತರಲು ಎರೆಡು ಸುತ್ತಿನ ಸಭೆಗಳಲ್ಲೂ ಬ್ಯಾಂಕ್ ಆಡಳಿತ ಮಂಡಳಿ ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.

ಸಿಬ್ಬಂದಿ ಮತ್ತು ಗ್ರಾಹಕರ ಸೇವೆಯ ಮೇಲೆ ಪರಿಣಾಮ ಬೀರುವ ಸಾಫ್ಟವೇರ್ ಸಮಸ್ಯೆಗಳು, ಅವೈಜ್ಞಾನಿಕ ಕೆಲಸದ ಒತ್ತಡ, ತಡರಾತ್ರಿಯ ಕೆಲಸ ಮತ್ತು ಸುರಕ್ಷತಾ ಕಾಳಜಿಗಳು, ವಿಶೇಷವಾಗಿ ಮಹಿಳಾ ಸಿಬ್ಬಂದಿಗಳ ಸುರಕ್ಷತೆಯ ಪ್ರಶ್ನಗಳಿಗೆ ಉತ್ತರವೇ ಇಲ್ಲವಾಗಿದೆ. ಬಹುತೇಕ ಶಾಖೆಗಳಲ್ಲಿ ಸಿಬ್ಬಂದಿ ಕೊರತೆ ಇದೆ.

ಸಿಬ್ಬಂದಿಗೆ ರಚನಾತ್ಮಕ ತರಬೇತಿ ಮತ್ತು ಬೆಂಬಲ ತಂಡಗಳ ಕೊರತೆ ಸಾಕಷ್ಟಿದೆ. ಮಾನವ ಸಂಪನ್ಮೂಲದ ಸದ್ಭಳಕೆ ಆಗುತ್ತಿಲ್ಲ. ಸಿಬ್ಬಂದಿ ಕಲ್ಯಾಣದ ಕಡ್ಢಾಯವಾದ ನೀತಿಗಳನ್ನು ಜಾರಿಗೊಳಿಸಲು ಮೀನಮೇಷ ಎಣಿಸುತ್ತಿರುವುದು ಆಡಳಿತ ಮಂಡಳಿಯ ವ್ಯವಸ್ಥೆಯ ವಿರೋಧಿ ನಿಲುವು ಸ್ಪಷ್ಟವಾಗಿದೆ.

ಸಿಬ್ಬಂದಿ ಘನತೆ ಮತ್ತು ಸುರಕ್ಷತೆ ಇಲ್ಲದ ಕಾರಣ ಗ್ರಾಹಕ ಸೇವಾ ಗುಣಮಟ್ಟದಲ್ಲಿ ಕುಸಿತವಾಗುತ್ತಿದೆ. ಕಾರಣ ಆಡಳಿತ ಮಂಡಳಿಯು ತಕ್ಷಣವೇ ಜಂಟಿ ಸಮಿತಿಗಳನ್ನು ಮತ್ತೊಂದು ಸುತ್ತಿನ ಸಭೆಯನ್ನು ನಡೆಸುವ ಮೂಲಕ ತಮ್ಮ ಬೇಡಿಕೆಗಳನ್ನು ತಕ್ಷಣವೇ ಈಡೇರಿಸಬೇಕು ಎಂದು ಅವರು ಕೋರಿದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande