

ಕೊಪ್ಪಳ, 06 ನವೆಂಬರ್ (ಹಿ.ಸ.)
ಆ್ಯಂಕರ್ : ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯರಾದ ನ್ಯಾ. ಎಸ್.ಕೆ.ವಂಟಿಗೋಡಿ ಅವರು ನಾಳೆ ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
ಅವರು ನಾಳೆ ಬೆಳಿಗ್ಗೆ 10.30 ಗಂಟೆಗೆ ಕೊಪ್ಪಳಕ್ಕೆ ಆಗಮಿಸಿ, ನಗರದ ಸರ್ಕಾರಿ ಪ್ರವಾಸಿ ಮಂದಿರಕ್ಕೆ ತೆರಳುವರು. ಬೆಳಿಗ್ಗೆ 11 ಗಂಟೆಯಿ0ದ ಮಧ್ಯಾಹ್ನ 12.30 ಗಂಟೆಯವರೆಗೆ ಮಾನವ ಹಕ್ಕುಗಳ ಆಯೋಗದಲ್ಲಿ ದಾಖಲಾದ ಪ್ರಕರಣ ಸಂಖ್ಯೆ: 3095/10/24/2025(ಎಫ್‌ಬಿ) ಗೆ ಕೊಪ್ಪಳ ನಗರದ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯಕ್ಕೆ ಭೇಟಿ ನೀಡುವರು. ಮತ್ತು ತಹಶೀಲ್ದಾರ ಹಾಗೂ ಅಧಿಕಾರಿಗಳೊಂದಿಗೆ ಪ್ರಕರಣದ ಬಗ್ಗೆ ಸಭೆ ನಡೆಸುವರು.
ಮಧ್ಯಾಹ್ನ 12.30 ಕ್ಕೆ ಕೊಪ್ಪಳದಿಂದ ನಿರ್ಗಮಿಸಿ 1.30 ಕ್ಕೆ ಗಂಗಾವತಿಗೆ ತೆರಳುವರು. ಗಂಗಾವತಿ ಸರ್ಕಾರಿ ಪ್ರವಾಸಿ ಮಂದಿರದಲ್ಲಿ ಮಧ್ಯಾಹ್ನದ ಊಟದ ನಂತರ ಮಾನವ ಹಕ್ಕುಗಳ ಆಯೋಗದಲ್ಲಿ ದಾಖಲಾದ ಸ್ವಯಂ ಪ್ರೇರಿತ ದೂರು ಸಂಖ್ಯೆ: 3950/10/24/2024(ಎಫ್‌ಬಿ) ಗೆ ಗಂಗಾವತಿ ತಾಲ್ಲೂಕಿನ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವರು. ಮತ್ತು ತಹಶೀಲ್ದಾರ ಹಾಗೂ ಅಧಿಕಾರಿಗಳೊಂದಿಗೆ ಪ್ರಕರಣದ ಬಗ್ಗೆ ಸಭೆ ನಡೆಸುವರು.
ನಾಳೆ ಸಂಜೆ 6 ಗಂಟೆಗೆ ಗಂಗಾವತಿಯಿ0ದ ನಿರ್ಗಮಿಸಿ 7.30 ಕ್ಕೆ ವಿಜಯನಗರದ ವೈಕುಂಠ ಅತಿಥಿಗೃಹಕ್ಕೆ ತೆರಳಿ ವಾಸ್ತವ್ಯ ಮಾಡುವರು ಎಂದು ಸದಸ್ಯರ ಆಪ್ತ ಸಹಾಯಕರಾದ ರೂಪಾ ಕೆ. ಅವರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್