ರಾಯಚೂರು : ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ನೇರ ಸಂದರ್ಶನ
ರಾಯಚೂರು, 06 ನವೆಂಬರ್ (ಹಿ.ಸ.) : ಆ್ಯಂಕರ್ : ಕರ್ನಾಟಕ ಮಿದುಳಿನ ಆರೋಗ್ಯ ಉಪಕ್ರಮ (ಕೆ.ಎ.ಬಿ.ಹೆಚ್.ಐ) ಕಾರ್ಯಕ್ರಮದಡಿ ಸಾರ್ವಜನಿಕ ಹಿತದೃಷ್ಠಿಯಿಂದ ಗುತ್ತಿಗೆ ಆಧಾರದ ಮೇಲೆ ಖಾಲಿಯಿರುವ ಎರಡು ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ನೇರ ಸಂದರ್ಶನಕ್ಕೆ ಅರ್ಜಿ ಆ
ರಾಯಚೂರು : ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ನೇರ ಸಂದರ್ಶನ


ರಾಯಚೂರು, 06 ನವೆಂಬರ್ (ಹಿ.ಸ.) :

ಆ್ಯಂಕರ್ : ಕರ್ನಾಟಕ ಮಿದುಳಿನ ಆರೋಗ್ಯ ಉಪಕ್ರಮ (ಕೆ.ಎ.ಬಿ.ಹೆಚ್.ಐ) ಕಾರ್ಯಕ್ರಮದಡಿ ಸಾರ್ವಜನಿಕ ಹಿತದೃಷ್ಠಿಯಿಂದ ಗುತ್ತಿಗೆ ಆಧಾರದ ಮೇಲೆ ಖಾಲಿಯಿರುವ ಎರಡು ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ನೇರ ಸಂದರ್ಶನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ಸ್ಪೀಚ್ ಥೆರಪಿಸ್ಟ್ (ಸ್ಪೀಚ್ ಲ್ಯಾಂಗ್ವೇಜ್ ಪ್ಯಾಥಾಲೋಜಿಸ್ಟ್) 01 ಹುದ್ದೆಗೆ ಬ್ಯಾಚುಲರ್ ಇನ್ ಆಡಿಯೋಲಾಜಿ ಮತ್ತು ಸ್ಪೀಚ್ ಲ್ಯಾಂಗ್ವೇಜ್ ಪ್ಯಾಥಾಲೋಜಿ ವಿದ್ಯಾರ್ಹತೆ ಹೊಂದಿರಬೇಕು. ಅಲ್ಲದೆ ಅರ್ಜಿದಾರರು ಸರಳವಾಗಿ ಕನ್ನಡ ಭಾಷೆಯನ್ನು ಓದುವುದು, ಬರೆಯುವುದು ಮತ್ತು ಮಾತನಾಡಬೇಕು. ನ್ಯೂರಾಲಾಜಿಕಲ್ ಡಿಸ್ ಆರ್ಡರ್ ರೋಗಿಗಳ ಮೌಲ್ಯಮಾಪನ ಹಾಗೂ ಸಮಾಲೋಚನೆಯಲ್ಲಿ ಒಂದು ವರ್ಷದ ಅನುಭವ ಇರುವ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು. ವಯೋಮಿತಿ 45 ವರ್ಷದೊಳಗಿರಬೇಕು. 30 ಸಾವಿರ ರೂ.ಗಳ ಮಾಸಿಕ ಸಂಭಾವನೆ ನೀಡಲಾಗುವುದು.

ಕ್ಲಿನಿಕಲ್ ಸೈಕಾಲಜಿಸ್ಟ್-01 ಹುದ್ದೆಗೆ ಎಂ.ಫಿಲ್ ಇನ್ ಮೆಂಟಲ್ ಹೇಲ್ಥ್ ಮತ್ತು ಸೋಷಿಯಲ್ ಸೈಕಾಲೋಜಿ ಪದವಿಯಲ್ಲಿ 2 ವರ್ಷಗಳ ಪೂರ್ಣಾವಧಿ ಕೋರ್ಸ್ (ರೆಗುಲರ್) ಪೂರ್ಣಗೊಳಿಸಿದ ನಂತರ ಆರ್.ಸಿ.ಐ ನಿಂದ ಅನುಮೋದಿಸಲ್ಪಟ್ಟ ಮತ್ತು ಗುರುತಿಸಲ್ಪಟ್ಟ ಮನೋವೈಜ್ಞಾನಿಕ ಹಾಗೂ ಸಾಮಾಜಿಕ ಮನೋವೈಜ್ಞಾನದಲ್ಲಿ ತರಬೇತಿ ಹೊಂದಿರಬೇಕು. (ಅಥವಾ) ಸೈಕಾಲೋಜಿ/ ಅಪ್ಲೈಡ್ ಸೈಕಾಲೋಜಿ/ ಮೆಡಿಕಲ್ ಮತ್ತು ಸೋಷಿಯಲ್ ಸೈಕಾಲೋಜಿಯಲ್ಲಿ ಸ್ನಾತಕೊತ್ತರ ಪದವಿ ಹೊಂದಿರಬೇಕು. ಹಾಗೂ ಅರ್ಜಿದಾರರು ಸರಳವಾಗಿ ಕನ್ನಡ ಭಾಷೆಯನ್ನು ಓದುವುದು, ಬರೆಯುವುದು ಮತ್ತು ಮಾತನಾಡಬೇಕು.

ನ್ಯೂರಾಲಾಜಿಕಲ್ ಡಿಸ್ ಆರ್ಡರ್ ರೋಗಿಗಳ ಮೌಲ್ಯಮಾಪನ ಹಾಗೂ ಸಮಾಲೋಚನೆಯಲ್ಲಿ ಒಂದು ವರ್ಷದ ಅನುಭವ ಇರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು. ಅಭ್ಯರ್ಥಿಗಳು 45 ವರ್ಷದೊಳಗಿರಬೇಕು. 26,250 ರೂ.ಗಳನ್ನು ಮಾಸಿಕ ಸಂಭಾವನೆ ನೀಡಲಾಗುವುದು.

ಈ ಎರಡು ಹುದ್ದೆಗಳನ್ನು ನೇರ ಸಂದರ್ಶನದ ಮೂಲಕ ಭರ್ತಿ ಮಾಡಲು ನವೆಂಬರ್ 12ರ ಬೆಳಿಗ್ಗೆ 10.30 ಗಂಟೆಗೆ ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಗಳ ಕಚೇರಿ, ಜಿಲ್ಲಾ ಕುಷ್ಠರೋಗ ನಿವಾರಣ ಅಧಿಕಾರಿಗಳ ಕಾರ್ಯಾಲಯ ವಿಭಾಗ ರಾಯಚೂರು ಇಲ್ಲಿ ನೇರ ಸಂದರ್ಶನ ನಡೆಯಲಿದೆ.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 8151896578ಗೆ ಸಂಪರ್ಕ ಮಾಡಬಹುದಾಗಿದೆ. ಅಥವಾ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಾಲಯ ವಿಭಾಗಕ್ಕೆ ಸಂಪರ್ಕ ಮಾಡಬಹುದಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande