



ಬಳ್ಳಾರಿ, 06 ನವೆಂಬರ್ (ಹಿ.ಸ.) :
ಆ್ಯಂಕರ್ : ತಮ್ಮ ಜನ್ಮ ದಿನದ ಸಂಭ್ರಮಾಚರಣೆಯ ಹಿನ್ನಲೆಯಲ್ಲಿ ಬಳ್ಳಾರಿ ನಗರ ಶಾಸಕ ನಾರಾ ಭರತರೆಡ್ಡಿ ಅವರು ಹಮ್ಮಿಕೊಂಡಿರುವ `ಮನೆ ಮನೆಗೂ ಭರತ್' ಅಭಿಯಾನವು ಗುರುವಾರವು ಬಳ್ಳಾರಿಯ 11ನೇ ವಾರ್ಡ್‍ನಲ್ಲಿ ನಡೆಯಿತು.
ನಗರದ 11ನೇ ವಾರ್ಡ್‍ನ ನ ಸುಂಕ್ಲಮ್ಮ ದೇವಿ ದೇವಸ್ಥಾನದಿಂದ ಗುರುವಾರ ಬೆಳಗ್ಗೆಯಿಂದ ಸಂಚಾರ ನಡೆಸಿದ ಶಾಸಕ ನಾರಾ ಭರತರೆಡ್ಡಿ ಅವರು, ಮನೆ ಮನೆಗೂ ಕಿಚನ್ ಕಿಟ್ ಹಂಚಿಕೆ ಮಾಡಿ, ಸ್ಥಳೀಯ ನಾಗರೀಕರ ಮೂಲಭೂತ ಸೌಲಭ್ಯಗಳು, ಸಮಸ್ಯೆಗಳನ್ನು ಆಲಿಸಿದರು.
ಸ್ಥಳೀಯ ಮುಖಂಡರಾದ ಲೋಕೇಶ್, ಸೋಮಪ್ಪ, ಮಡಿವಾಳಪ್ಪ, ಎಂ. ಪ್ರಭಂಜನ ಕುಮಾರ್, ಮಹೇಶ್, ಕಾಂಗ್ರೆಸ್ ವಕ್ತಾರ ವೆಂಕಟೇಶ ಹೆಗಡೆ, ಪಾಲಿಕೆಯ ಸದಸ್ಯರಾದ ನೂರ್ ಮೊಹಮ್ಮದ್, ಮಿಂಚು ಶ್ರೀನಿವಾಸ, ಕಾಂಗ್ರೆಸ್ ಮುಖಂಡರಾದ ಹೊನ್ನಪ್ಪ, ಹಗರಿ ಗೋವಿಂದ, ಸುಬ್ಬರಾಯುಡು, ಚಾನಾಳ್ ಶೇಖರ್, ಥಿಯೇಟರ್ ಶಿವು, ಕಪ್ಪೆ ಶಿವು, ರಘು, ಭರತ್, ಪದ್ಮಾ, ಕವಿತಾ, ಗೌತಮ್, ಧರ್ಮಶ್ರೀ ಸೇರಿದಂತೆ ಹಲವರು ಹಾಜರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್