
ವಿಜಯಪುರ, 05 ನವೆಂಬರ್ (ಹಿ.ಸ.) :
ಆ್ಯಂಕರ್ : ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಜನ್ಮದಿನೋತ್ಸವವನ್ನು ವಿಜಯಪುರ ಬಿಜೆಪಿ ಕಾರ್ಯಕರ್ತರು ಸಮಾಜಮುಖಿಯಾಗಿ ಆಚರಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ನೇತೃತ್ವದಲ್ಲಿ ಅನೇಕ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಸಂಘಟಿಸಲಾಗಿತ್ತು.
ಸ್ವಪ್ನಾ ವಾಕ್ ಮತ್ತು ಶ್ರವಣ ದೋಷವುಳ್ಳ ಮಕ್ಕಳ ವಸತಿ ಶಾಲೆಯ ಮಕ್ಕಳೊಂದಿಗೆ ಜನ್ಮದಿನೋತ್ಸವ ಆಚರಣೆ ನಡೆಯಿತು. ಅಲ್ಲಿರುವ ಮಕ್ಕಳಿಗೆ ಸಿಹಿ ವಿತರಿಸಲಾಯಿತು.
ನಂತರ ಬಿಜೆಪಿ ಯುವ ಮೋರ್ಚಾ ವತಿಯಿಂದ ಸಸಿಗಳನ್ನು ನೆಡಲಾಯಿತು. ಅಲ್-ಅಮೀನ್ ಬಳಿ ಇರುವ ವೃದ್ಧಾಶ್ರಮದಲ್ಲಿರುವ ಹಿರಿಯರಿಗೆ ಬಟ್ಟೆಗಳನ್ನು ವಿತರಿಸಲಾಯಿತು.
ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಮಾತನಾಡಿ, ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ಬಿ.ವೈ. ವಿಜಯೇಂದ್ರ ಉತ್ಸಾಹಿ ರಾಜ್ಯಾಧ್ಯಕ್ಷರು, ಪಕ್ಷದ ಸಂಘಟನೆಗೆ ೨೪x೭ ದುಡಿಯುವ ಅವರು ಬಿ.ಎಸ್. ಯಡಿಯೂರಪ್ಪ ಅವರ ಹಾದಿಯಲ್ಲಿ ಸಾಗಿ ಎಲ್ಲ ವರ್ಗಗಳ ನಾಯಕರಾಗಿ ಮುನ್ನಡೆಯುತ್ತಿದ್ದಾರೆ, ಅವರಿಗೆ ದೇವರು ಇನ್ನಷ್ಟೂ ಉನ್ನತ ಆರೋಗ್ಯ, ಉನ್ನತ ಹುದ್ದೆ ಕರುಣಿಸಲಿ ಎಂದು ಹಾರೈಸುವೆ ಎಂದರು.
ಮೇಯರ್ ಎಂ.ಎಸ್. ಕರಡಿ, ಯುವಮೋರ್ಚಾ ಜಿಲ್ಲಾಧ್ಯಕ್ಷ ರಾಘವೇಂದ್ರ ಕಾಪಸೆ, ಬಿಜೆಪಿ ಹಿರಿಯ ಮುಖಂಡರಾದ ಚಂದ್ರಶೇಖರ್ ಕವಟಗಿ, ಸ್ವಪ್ನಾ ಕಣಮುಚನಾಳ, ಸಂಜೀವ ಐಹೊಳೆ, ಸಿದ್ಧಗೊಂಡ ಬಿರಾದಾರ, ಭೀಮಾಶಂಕರ ಹದನೂರ, ಮಳ್ಳುಗೌಡ ಪಾಟೀಲ್, ರಾಜಕುಮಾರ ಸಗಾಯಿ, ಭರತ ಕೋಳಿ, ಮಹೀಂದ್ರ ಚ್ಚಿದಾನಂದ ಚಲವಾದಿ ನಾಯಕ,ರಾಜಶೇಖರ್ ಡೂಳ್ಳಿ, ಮಲ್ಲನಗೌಡ ಬಿರಾದಾರ್, ಭೀಮಸಿಂಗ್ ರಾಥೋಡ್ ರಮೇಶ್ ಬಿದನೂರ, ಅಶೋಕ ರಾಠೋಡ, ರವಿ ಖಾನಾಪುರ, ಜಗದೀಶ್ ಮುಚ್ಚಂಡಿ, ರವಿ ಬಿರಾದಾರ, ನಾಗೇಶ್ ಶಿಂದೆ, ವಿಕಾಸ ಕಿಟ್ಟಾ, ಮಂಥನ ಗಾಯಕವಾಡ, ವಿನೋದ,ಸ್ವರೂಪ, ಶ್ರೀಧರ್ ಬಿಜ್ಜರಗಿ, ಅಮರ ಮೊದಲಾದವರು ಪಾಲ್ಗೊಂಡಿದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande