
ತೋರಣಗಲ್ಲು, 05 ನವೆಂಬರ್ (ಹಿ.ಸ.) :
ಆ್ಯಂಕರ್ : ತೋರಣಗಲ್ಲು 110/33/11 ಕೆ.ವಿ ವಿದ್ಯುತ್ ವಿತರಣಾ ಕೇಂದ್ರ ವ್ಯಾಪ್ತಿಯಲ್ಲಿ ನವೆಂಬರ್ 6 ರಂದು ಬೆಳಗ್ಗೆ 8 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಈ ಮಾರ್ಗದಲ್ಲಿ ದ ಉನ್ನತಿಕರಣ, ತೋರಣಗಲ್ಲು ರಾಷ್ಟ್ರೀಯ ಹೆದ್ದಾರಿ-67 ಟವರ್ ಲೈನ್‌ನ ಮಾರ್ಗದ ವಿದ್ಯುತ್ ವಾಹಕದ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಟಿಎಲ್‌ಎಮ್ ಮುನಿರಬಾದ ರವರು ಮಾರ್ಗಮುಕ್ತತೆ ಕೋರಿರುವ ಕಾರಣ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ತೋರಣಗಲ್ಲು ರೈಲ್ವೆ ನಿಲ್ದಾಣ ವ್ಯಾಪ್ತಿಗೆ ಒಳಪಡುವ ಪಂಚಾಯತಿಗಳಾದ ವಡ್ಡು, ತಾಳೂರು, ಬನ್ನಿಗಟ್ಟಿ, ತಾರನಗರ, ಕುರೆಕುಪ್ಪಾ ಟೌನ್, ತೋರಣಗಲ್ಲು ಗ್ರಾಮ ಮತ್ತು ತೋರಣಗಲ್ಲು ರೈನಿ ಹಾಗೂ 33/11ಕೆವಿ ವಿಠಲಾಪುರ ವಿದ್ಯುತ್ ವಿತರಣ ಕೇಂದ್ರಕ್ಕೆ ಒಳಪಡುವ ವಿಠಲಾಪುರ, ಅಂತಾಪುರ, ಮೆಟ್ರಿಕಿ, ರಾಜಪುರ, ಸುಲ್ತಾನ್‌ಪುರ ಗ್ರಾಮಗಳಲ್ಲಿ ಎನ್‌ಜೆವೈ ಮತ್ತು ಐಪಿಸೆಟ್ ಗ್ರಾಹಕರಿಗೆ, ಎನ್‌ಎಮ್‌ಡಿಸಿ ವಾಟರ್‌ವರ್ಕ್ಸ್ ಹಾಗೂ ಎನ್‌ಇಒ ಇಂಡಸ್ಟ್ರೀಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಜೆಸ್ಕಾಂ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್