
ರಾಯಚೂರು, 05 ನವೆಂಬರ್ (ಹಿ.ಸ.) :
ಆ್ಯಂಕರ್ : ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ವತಿಯಿಂದ ಪ್ರತಿ ವರ್ಷವು ನವೆಂಬರ್ ತಿಂಗಳನ್ನು ಅಂತಾರಾಷ್ಟ್ರೀಯ ದತ್ತು ಮಾಸಾಚರಣೆಯನ್ನಾಗಿ ಆಚರಿಸಲಾಗುತ್ತಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಾದ ಅಮರೇಶ ಹರಿವಿ ಅವರು ತಿಳಿಸಿದ್ದಾರೆ.
ಘಟಕದ ವತಿಯಿಂದ 0-18 ವರ್ಷದೊಳಗಿನ ಮಕ್ಕಳ ಪೋಷಣೆ ಮತ್ತು ರಕ್ಷಣೆಗಾಗಿ ಕಾರ್ಯನಿರ್ವಹಿಸುತ್ತಿದೆ. ಅದರಂತೆ ಬಾಲನ್ಯಾಯ ಕಾಯ್ದೆ-2025 ಹಾಗೂ ದತ್ತು ಮಾರ್ಗಸೂಚಿಯನ್ವಯ ಮಕ್ಕಳ ಕಲ್ಯಾಣ ಸಮಿತಿ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಕಾನೂನಿನಾತ್ಮಕವಾಗಿ ದತ್ತು ಪ್ರಕ್ರಿಯೆ ಮೂಲಕ ಮಕ್ಕಳನ್ನು ಕಾನೂನಿನಾತ್ಮಕ ದತ್ತು ನೀಡಲಾಗುತ್ತದೆ.
ಕೌಟುಂಬಿಕ ವ್ಯವಸ್ಥೆಯಲ್ಲಿ ಬೆಳೆಯುವುದು ಪ್ರತಿಯೊಂದು ಮಗುವಿನ ಹಕ್ಕು, ಮಗುವಿಗೆ ಅವಶ್ಯವಿರುವ ಪ್ರೀತಿ ಮತ್ತು ಆರೈಕೆಯನ್ನು ಕುಟುಂಬದ ವಾತವರಣವು ಕಲ್ಪಿಸುತ್ತದೆ. ಈ ನಿಟ್ಟಿನಲ್ಲಿ ದತ್ತು ಪ್ರಕ್ರಿಯೆಯು ಅನಾಥ, ಪರಿತ್ಯಕ್ತ ಮತ್ತು ಒಪ್ಪಿಸಲ್ಪಟ್ಟ ಮಕ್ಕಳ ಪುರ್ನವಸತಿಗೆ ನೆರವಾಗುವುದು ಮಕ್ಕಳ ರಕ್ಷಣಾ ಯೋಜನೆಯ ಉದ್ದೇಶವಾಗಿರುತ್ತದೆ.
ಮಕ್ಕಳ ರಕ್ಷಣಾ ನಿರ್ದೇಶನಾಲಯದ ಅಡಿಯಲ್ಲಿ ಪ್ರತಿ ವರ್ಷವು ನವೆಂಬರ್ ತಿಂಗಳನ್ನು “ಅಂತರಾಷ್ಟ್ರೀಯ ದತ್ತು ಮಾಸಾಚರಣೆ-2025ರ ಈ ಬಾರಿಯ ಘೋಷವಾಕ್ಯ ವಿಶೇಷ ಅಗತ್ಯವಿರುವ ಮಕ್ಕಳನ್ನು ದತ್ತು ಪಡೆಯುವುದೊಂದಿಗೆ ಆಚರಿಸಲಾಗುತ್ತಿದ್ದು, ಯಾವುದೇ ವ್ಯಕ್ತಿ ಕಾನೂನು ಬಾಹಿರವಾಗಿ, ಯಾವುದೇ ಮಗುವನ್ನು ಅನಧಿಕೃತವಾಗಿ ದತ್ತು ಪಡೆಯುವುದು ಅಥವಾ ಮಾರಾಟ ಮಾಡುವುದು ಬಾಲನ್ಯಾಯ (ಪೋಷಣೆ ಮತ್ತು ರಕ್ಷಣೆ) ಕಾಯ್ದೆ-2015ರ ಸೆಕ್ಷನ್ 81ರನ್ವಯ 05 ವರ್ಷಗಳವರೆಗಿನ ಕಠಿಣ ಕಾರಗೃಹ ಶಿಕ್ಷೆ ಮತ್ತು 01 ಲಕ್ಷ ರೂ.ದಂಡದವರೆಗೆ ಶಿಕ್ಡಗೆ ಒಳಪಡುತ್ತಾರೆ.
ಮಕ್ಕಳನ್ನು ಕಾನೂನಿನಾತ್ಮಕ ದತ್ತು ಪಡೆಯಲು ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕಾರ್ಯಾಲಯ ಮನೆ. ಸಂಖ್ಯೆ. 1-9-138 ಪಶ್ಚಿಮ ಪೊಲೀಸ್ ಠಾಣೆ ಹಿಂದೆ, ಮಾರೆಮ್ಮ ದೇವಸ್ಥಾನ ಎದುರುಗಡೆ, ಗೋಲ್ ಮಾರ್ಕೆಟ್, ಆಜಾದನಗರ ರಾಯಚೂರು-584101 ಅಥವಾ ದೂರವಾಣಿ ಸಂಖ್ಯೆ: 08532-226226ಗೆ ಸಂಪರ್ಕ ಮಾಡಬಹುದಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್