
ರಾಯಚೂರು, 05 ನವೆಂಬರ್ (ಹಿ.ಸ.) :
ಆ್ಯಂಕರ್ : ಕಾರ್ಮಿಕ ಇಲಾಖೆಯ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಸುರಕ್ಷತಾ ಕಿಟ್‌ಗಳ ಸೌಲಭ್ಯಕ್ಕೆ ಅರ್ಹ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಂದ ಅರ್ಜಿ ಆಹ್ವಾನಿಸಲಾಗಿದೆ.
ಜಿಲ್ಲೆಯ ತಾಲೂಕಗಳಲ್ಲಿ ಮೇಸನ್, ಎಲೆಕ್ಟ್ರಿಷಿಯನ್, ವೇಲ್ಡರ್, ಕಾರ್ಪೆಂಟರ್, ಪೇಂಟರ್ ಹಾಗೂ ಪ್ಲಂಬರ್ ಸೇಪ್ಟಿ ಕಿಟ್‌ಗಳನ್ನು ಕಾರ್ಮಿಕರು ಚಾಲ್ತಿಯಲ್ಲಿರುವ ಆಧಾರ್ ಕಾರ್ಡ್, ಗುರುತಿನ ಚೀಟಿ ಹಾಗೂ ಮೊಬೈಲ್ ಸಂಖ್ಯೆಯೊ0ದಿಗೆ ಈ ಹಿಂದೆ ಯಾವುದಾದರು ಕಿಟ್ ಈ ಕಚೇರಿಯಿಂದ ಪಡೆಯದಿರುವ ಕುರಿತು ಸ್ವಯಂ ಘೋಷಣಾ ಪತ್ರದೊಂದಿಗೆ ಅರ್ಜಿಯನ್ನು ನವೆಂಬರ್ 25 ರೊಳಗಾಗಿ ಅಯಾ ತಾಲೂಕಿನ ಕಾರ್ಮಿಕ ನಿರೀಕ್ಷಕರ ಕಚೇರಿಯಲ್ಲಿ ಸಲ್ಲಿಸಬಹುದಾಗಿದೆ.
ಅರ್ಜಿಗಳನ್ನು ನಿಯಾಮಾನುಸಾರ ಮತ್ತು ಜೇಷ್ಠತೆ ಆಧಾರಾದ ಮೇಲೆ ಆಯ್ಕೆ ಮಾಡಿ ಕಿಟ್‌ಗಳನ್ನು ಹಂಚಿಕೆ ಮಾಡಲಾಗುವುದು ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿಗಳು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್