ಮಾನವಿ : ಪಿಎಂ ಸ್ವನಿಧಿ ನವೆಂಬರ್ 28 ರವರೆಗೆ ಅರ್ಜಿ ಸಲ್ಲಿಸಲು ಅವಕಾಶ
ಮಾನವಿ, 05 ನವೆಂಬರ್ (ಹಿ.ಸ.) : ಆ್ಯಂಕರ್ : ಮಾನವಿ ಪುರಸಭೆಯಿಂದ ಕೇಂದ್ರ ಸರಕಾರದ ಪ್ರಧಾನಮಂತ್ರಿ ಬೀದಿ ಬದಿಗಳ ವ್ಯಾಪಾರಿಗಳ ಆತ್ಮ ನಿರ್ಭರ ನಿಧಿ (ಪಿಎಂ ಸ್ವನಿಧಿ 2.0) ಯೋಜನೆಯಡಿ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿಯ ಅವಧಿಯನ್ನು ನವೆಂಬರ್ 28ರವರೆಗೆ ಅವಧಿ ವಿಸ್ತರಿಸಲಾಗಿದೆ.
ಮಾನವಿ : ಪಿಎಂ ಸ್ವನಿಧಿ ನವೆಂಬರ್ 28 ರವರೆಗೆ ಅರ್ಜಿ ಸಲ್ಲಿಸಲು ಅವಕಾಶ


ಮಾನವಿ, 05 ನವೆಂಬರ್ (ಹಿ.ಸ.) :

ಆ್ಯಂಕರ್ : ಮಾನವಿ ಪುರಸಭೆಯಿಂದ ಕೇಂದ್ರ ಸರಕಾರದ ಪ್ರಧಾನಮಂತ್ರಿ ಬೀದಿ ಬದಿಗಳ ವ್ಯಾಪಾರಿಗಳ ಆತ್ಮ ನಿರ್ಭರ ನಿಧಿ (ಪಿಎಂ ಸ್ವನಿಧಿ 2.0) ಯೋಜನೆಯಡಿ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿಯ ಅವಧಿಯನ್ನು ನವೆಂಬರ್ 28ರವರೆಗೆ ಅವಧಿ ವಿಸ್ತರಿಸಲಾಗಿದೆ.

ಪುರಸಭೆಯ ವ್ಯಾಪ್ತಿಯ ಮಾರುಕಟ್ಟೆ, ರಸ್ತೆ ಪಕ್ಕ, ನೆಲದ ಮೇಲೆ, ತಳ್ಳುಬಂಡಿ, ತಲೆಮೇಲೆ ಒತ್ತು ಮಾರುವವರು. ಹೊಸದಾಗಿ ಬೀದಿ ಬದಿ ವ್ಯಾಪಾರ ಆರಂಭಿಸುವವರು ವಿಶೇಷ ಕಿರುಸಾಲ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಮೊದಲನೇ ಹಂತದಲ್ಲಿ 15 ಸಾವಿರ, ಎರಡನೇ ಹಂತದಲ್ಲಿ 25 ಸಾವಿರ ಹಾಗೂ ಮೂರನೇ ಹಂತದಲ್ಲಿ 50 ಸಾವಿರ ರೂ.ಗಳನ್ನು ಬ್ಯಾಂಕ್‍ಗಳ ಮೂಲಕ ಸಾಲ ನೀಡಲಾಗುತ್ತಿದ್ದು, ಅರ್ಹ ವ್ಯಾಪಾರಸ್ಥರು ಅಗತ್ಯ ದಾಖಲೆಗಳಾದ ಗುರುತಿನ ಚೀಟಿ, ರೇಷನ್ ಕಾರ್ಡ್, ಆಧಾರ ಕಾರ್ಡ್, ಬ್ಯಾಂಕ್ ಪಾಸ್‍ಬುಕ್, ಕುಟುಂಬದ ಫೆÇೀಟೋ, ವ್ಯಾಪಾರದ ಫೆಟೋ, ಜಾತಿ ಮತ್ತು ಅದಾಯ ಪ್ರಮಾಣ ಪತ್ರ ಹಾಗೂ ಇತರ ಅಗತ್ಯ ದಾಖಲೆಗಳೊಂದಿಗೆ ನವೆಂಬರ್ 28ರ ಸಂಜೆ 5ಗಂಟೆಯೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.

ಸಾಲ ಪಡೆದು ಆರ್ಥಿಕವಾಗಿ ಸದೃಢರಾಗಿ ಮತ್ತು ಡಿಜಿಟಲ್ ಪಾವತಿಯಿಂದ ಕ್ಯಾಶ್‍ಬ್ಯಾಕ್ ಪೆÇ್ರೀತ್ಸಾಹಧನ, ಎರಡನೇ ಕಂತಿನ ಸಾಲ ಪಡೆದು ಮರುಪಾವತಿಸಿದ ನಂತರ 30 ಸಾವಿರ ರೂಗಳ ಕ್ರೆಡಿಟ್ ಪಡೆದುಕೊಳ್ಳಬಹುದು. ನಿಗದಿತ ಕಾಲಾವಧಿಯಲ್ಲಿ ಕಂತುಗಳನ್ನು ಪಾವತಿಸಿದರೆ ಮಾತ್ರ ಬಡ್ಡಿ ಸಹಾಯಧನ ಸಿಗಲಿದೆ.

ಹೆಚ್ಚಿನ ಮಾಹಿತಿಗೆ ಡೇ-ನಲ್ಡ್ ಶಾಖೆಯ ಸಮುದಾಯ ಸಂಘಟನಾಧಿಕಾರಿ ಈರಣ್ಣ ಅವರನ್ನು ಸಂಪರ್ಕಿಸುವಂತೆ ಮಾನವಿ ಪುರಸಭೆಯ ಮುಖ್ಯಾಧಿಕಾರಿಗಳು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande