ಶಾಸಕ ಎಚ್.ವೈ.ಮೇಟಿ. ಅಂತ್ಯ ಸಂಸ್ಕಾರ ; ಗಣ್ಯರ ಅಂತಿಮ ನಮನ
ವಿಜಯಪುರ, 05 ನವೆಂಬರ್ (ಹಿ.ಸ.) : ಆ್ಯಂಕರ್ : ವಯೋ ಸಹಜ ಕಾಯಿಲೆಯಿಂದ ಕೊನೆಯೂಸಿರಿಳೆದ ಶಾಸಕ ಎಚ್.ವೈ.ಮೇಟಿ ಅವರ ಅಂತ್ಯ ಸಂಸ್ಕಾರ ಹುಟ್ಟೂರಿನಲ್ಲಿ ಬುಧವಾರ ನಡೆಯಿತು. ಸಕಲ ಸರ್ಕಾರಿ ಗೌರವಗಳೊಂದಿಗೆ ಹಿಂದು ಕುರುಬ ಸಂಪ್ರದಾಯದಂತೆ ಬಾಗಲಕೋಟೆಯ ತಿಮ್ಮಾಪುರ ಗ್ರಾಮದಲ್ಲಿರುವ ತೋಟದ ಆವರಣದಲ್ಲಿ ಅಂತಿಮ ವಿ
ಮೇಟಿ


ವಿಜಯಪುರ, 05 ನವೆಂಬರ್ (ಹಿ.ಸ.) :

ಆ್ಯಂಕರ್ : ವಯೋ ಸಹಜ ಕಾಯಿಲೆಯಿಂದ ಕೊನೆಯೂಸಿರಿಳೆದ ಶಾಸಕ ಎಚ್.ವೈ.ಮೇಟಿ ಅವರ ಅಂತ್ಯ ಸಂಸ್ಕಾರ ಹುಟ್ಟೂರಿನಲ್ಲಿ ಬುಧವಾರ ನಡೆಯಿತು.

ಸಕಲ ಸರ್ಕಾರಿ ಗೌರವಗಳೊಂದಿಗೆ ಹಿಂದು ಕುರುಬ ಸಂಪ್ರದಾಯದಂತೆ ಬಾಗಲಕೋಟೆಯ ತಿಮ್ಮಾಪುರ ಗ್ರಾಮದಲ್ಲಿರುವ ತೋಟದ ಆವರಣದಲ್ಲಿ ಅಂತಿಮ ವಿಧಿವಿಧಾನ ನೆರವೇರಿತು.

ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಂಪುಟ ಸಚಿವರು, ಮಾಜಿ ಸಚಿವರು. ಶಾಸಕರು, ಪ್ರತಿ ಪಕ್ಷದ ನಾಯಕರು ಸಹಸ್ರಾರರು ಕಾರ್ಯಕರ್ತರು, ಅಭಿಮಾನಿಗಳು ಅಂತಿಮ ನಮನ ಸಲ್ಲಿಸಿದರು.

ರಾಜಕೀಯ ನಾಯಕರು ತಮ್ಮಜೊತೆಗೆ ಮೇಟಿ ಒಡನಾಟದ ಬಗ್ಗೆ ಮೇಲಕು ಹಾಕಿದರು. ನಗರ ಹಾಗೂ ಗ್ರಾಮೀಣ ಭಾಗದಿಂದ ಸಾವಿರಾರು ಜನರು ಅಂತಿಮ ಯಾತ್ರೆಯಲ್ಲಿ ಭಾಗವಹಿಸಿದ್ದರು. ಭಾವುಕರಾಗಿ ಮೇಟಿ ಸಾವುಕಾರ, ಮೇಟಿ ಮುತ್ಯಾ ಎನ್ನುತ್ತಲೆ ಕಣ್ಣಾಲೆಗಳು ತೇವಗೊಂಡವು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande