ಬಳ್ಳಾರಿ : ನ.13 ರಿಂದ 18 ರವರೆಗೆ ಅಗ್ನಿವೀರ್ ಸೇನಾ ನೇಮಕಾತಿ ರ‍್ಯಾಲಿ
ಬಳ್ಳಾರಿ, 05 ನವೆಂಬರ್ (ಹಿ.ಸ.) : ಆ್ಯಂಕರ್ : ಬೆಂಗಳೂರು ಪ್ರಧಾನ ಕಚೇರಿ ನೇಮಕಾತಿ ವಲಯದಿಂದ ಬಳ್ಳಾರಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನವೆಂಬರ್ 13 ರಿಂದ 18 ರವರೆಗೆ ಅಗ್ನಿವೀರ್ ನೇಮಕಾತಿ ರ‍್ಯಾಲಿ ನಡೆಯಲಿದೆ ಎಂದು ಸೇನಾ ನೇಮಕಾತಿಯ ಅಧಿಕಾರಿ ಕರ್ನಲ್ ವಿವೇಕ್ ಜಮಿಂದಾರ್ ಅವರು ತಿಳಿಸಿದ್ದಾರೆ
ಬಳ್ಳಾರಿ : ನ.13 ರಿಂದ 18 ರವರೆಗೆ ಅಗ್ನಿವೀರ್ ಸೇನಾ ನೇಮಕಾತಿ ರ‍್ಯಾಲಿ


ಬಳ್ಳಾರಿ, 05 ನವೆಂಬರ್ (ಹಿ.ಸ.) :

ಆ್ಯಂಕರ್ : ಬೆಂಗಳೂರು ಪ್ರಧಾನ ಕಚೇರಿ ನೇಮಕಾತಿ ವಲಯದಿಂದ ಬಳ್ಳಾರಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನವೆಂಬರ್ 13 ರಿಂದ 18 ರವರೆಗೆ ಅಗ್ನಿವೀರ್ ನೇಮಕಾತಿ ರ‍್ಯಾಲಿ ನಡೆಯಲಿದೆ ಎಂದು ಸೇನಾ ನೇಮಕಾತಿಯ ಅಧಿಕಾರಿ ಕರ್ನಲ್ ವಿವೇಕ್ ಜಮಿಂದಾರ್ ಅವರು ತಿಳಿಸಿದ್ದಾರೆ.

ಕರ್ನಾಟಕದ ಅಗ್ನಿವೀರ್ ವಿಭಾಗಗಳ ಅರ್ಜಿದಾರರು 30 ಜೂನ್ 2025 ರಿಂದ 10 ಜುಲೈ 2025 ರವರೆಗೆ ನಡೆಸಲಾದ ಆನ್‌ಲೈನ್ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳನ್ನು ಶಾರ್ಟ್ಲಿಸ್ಟ್ ಮಾಡಿ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ.

ಅಗ್ನಿವೀರ್ ಜನರಲ್ ಡ್ಯೂಟಿ, ಅಗ್ನಿವೀರ್ ಟೆಕ್ನಿಕಲ್, ಅಗ್ನಿವೀರ್ ಕ್ಲರ್ಕ್/ಸ್ಟೋರ್ ಕೀಪರ್ ಟೆಕ್ನಿಕಲ್, ಅಗ್ನಿವೀರ್ ಟ್ರೇಡ್ಸ್ಮನ್ (10 ನೇ ಪಾಸ್), ಅಗ್ನಿವೀರ್ ಟ್ರೇಡ್ಸ್ಮನ್ (8 ನೇ ಪಾಸ್) ಮತ್ತು ಬಹು ವಿಭಾಗಗಳಲ್ಲಿ ಅರ್ಜಿ ಸಲ್ಲಿಸಿ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಕರ್ನಾಟಕ ರಾಜ್ಯದ ಬೆಂಗಳೂರು ಗ್ರಾಮೀಣ, ತುಮಕೂರು, ಮಂಡ್ಯ, ಮೈಸೂರು, ಬಳ್ಳಾರಿ, ಚಾಮರಾಜನಗರ, ರಾಮನಗರ, ಕೊಡಗು, ಕೋಲಾರ, ಚಿಕ್ಕಬಳ್ಳಾಪುರ, ಹಾಸನ, ಚಿತ್ರದುರ್ಗ ಮತ್ತು ವಿಜಯನಗರ ಜಿಲ್ಲೆಗಳ ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ.

ಸೇನೆಯಲ್ಲಿ ನಿರ್ದಿಷ್ಟಪಡಿಸಿದ ಅಗ್ನಿವೀರ್ ವಿಭಾಗಗಳಿಗೆ ಅಭ್ಯರ್ಥಿಗಳ ದಾಖಲಾತಿಗಾಗಿ ದಾಖಲಾತಿಗಾಗಿ ವಯಸ್ಸು, ಶಿಕ್ಷಣ ಅರ್ಹತೆ ಇತರ ಮಾನದಂಡಗಳ ವಿವರಗಳನ್ನು ಆನ್‌ಲೈನ್ ಜೆಐಎ ವೆಬ್‌ಸೈಟ್‌ನಲ್ಲಿ 2025 ರ ಮಾ.12 ರಂದು ಪ್ರಕಟಿಸಲಾಗಿದೆ.

ಸೇನಾ ನೇಮಕಾತಿಯ ಆನ್‌ಲೈನ್ ವೆಬ್‌ಸೈಟ್ www.joinindianarmy.nic.in ನಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆಯ ಫಲಿತಾಂಶ ಮತ್ತು ಪ್ರವೇಶ ಕಾರ್ಡ್ಗಳನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು.

ಶಾರ್ಟ್ಲಿಸ್ಟ್ ಮಾಡಿದ ಅಭ್ಯರ್ಥಿಗಳಿಗೆ ಈಗಾಗಲೇ ಅವರ ಇಮೇಲ್ ಗೆ ರವಾನಿಸಲಾಗಿದೆ. ಅಭ್ಯರ್ಥಿಗಳು ವೈಯಕ್ತಿಕ ಖಾತೆ ಮತ್ತು ನೋಂದಾಯಿತ ಇಮೇಲ್ ಐಡಿಯನ್ನು ಲಾಗಿನ್ ಮಾಡುವ ಮೂಲಕ ಪಡೆದುಕೊಳ್ಳಬಹುದು. ಈ ಹಿಂದೆ ಪ್ರಕಟಿಸಲಾದ ಪ್ರಕಟಣೆಗಳು ರದ್ದಾಗಿದ್ದು, ಈ ಪ್ರಕಟಣೆಯು ಅಧಿಕೃತವಾಗಿದೆ.

ನ.05 ರಂದು ಶಾರ್ಟ್ಲಿಸ್ಟ್ ಮಾಡಿದ ಅಭ್ಯರ್ಥಿಗಳಿಗೆ ಹೊಸ ಪ್ರವೇಶ ಕಾರ್ಡ್ಗಳನ್ನು ನೀಡಲಾಗಿದೆ. ಅಭ್ಯರ್ಥಿಗಳು ತಮ್ಮ ಇಮೇಲ್‌ಗಳಲ್ಲಿ ಲಭ್ಯವಿರುವ ಹೊಸ ಪ್ರವೇಶ ಕಾರ್ಡ್ಗಳಲ್ಲಿ ಮುದ್ರಿಸಲಾದ ನಿರ್ದಿಷ್ಠ ದಿನಾಂಕಗಳAದು ನಡೆಯುವ ರ‍್ಯಾಲಿಯಲ್ಲಿ ವರದಿ ಮಾಡಿಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.

ಕರ್ನಾಟಕ ರಾಜ್ಯದ ವಿಜಯಪುರ, ಬಾಗಲಕೋಟೆ, ಗದಗ, ಧಾರವಾಡ, ಉತ್ತರ ಕನ್ನಡ, ಹಾವೇರಿ, ದಾವಣಗೆರೆ, ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಸೇರಿದ ಶಾರ್ಟ್ಲಿಸ್ಟ್ ಮಾಡಿದ ಅಭ್ಯರ್ಥಿಗಳಿಗೆ ನೇಮಕಾತಿ ರ‍್ಯಾಲಿಯನ್ನು ಪ್ರತ್ಯೇಕವಾಗಿ ನಡೆಸಲಾಗುವುದು. ದಿನಾಂಕಗಳನ್ನು ನಂತರ ತಿಳಿಸಲಾಗುವುದು.

ಹಾಗಾಗಿ ಅಭ್ಯರ್ಥಿಗಳು ಯಾವುದೇ ಮಧ್ಯವರ್ತಿಗಳಿಗೆ ಕಿವಿಗೊಡಬಾರದು. ಆನ್‌ಲೈನ್ ಸಾಮಾನ್ಯ ಪ್ರವೇಶ ಪರೀಕ್ಷೆ, ಅಭ್ಯರ್ಥಿಗಳ ಕಾರ್ಯಕ್ಷಮತೆ, ನೇಮಕಾತಿ ರ‍್ಯಾಲಿಯ ಸಮಯದಲ್ಲಿ ನಡೆಸಿದ ಶಾರೀರಿಕ, ವೈದ್ಯಕೀಯ ಪರೀಕ್ಷೆಗಳು ಮತ್ತು ಅಂತಿಮ ಅರ್ಹತೆಯ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.

ಮಾಹಿತಿಗಾಗಿ ಬೆಂಗಳೂರು ಪ್ರಧಾನ ಕಚೇರಿಯ ನೇಮಕಾತಿ ಅಧಿಕಾರಿಗಳ ಕಚೇರಿಯ ದೂ.080-29516517, ಮೊ.9596605198, 9675299174 ಮತ್ತು ಮಂಗಳೂರು ಎಆರ್‌ಓ ಕಚೇರಿಯ ದೂ.0824-2951276 ಗೆ ಸಂಪರ್ಕಿಸಬಹುದು ಎಂದು ಸೇನಾ ನೇಮಕಾತಿಯ ಅಧಿಕಾರಿ ಕರ್ನಲ್ ವಿವೇಕ್ ಜಮಿಂದಾರ್ ಅವರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande