
ರಾಯಚೂರು, 05 ನವೆಂಬರ್ (ಹಿ.ಸ.) :
ಆ್ಯಂಕರ್ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಮಾಜ ಸೇವೆಯ ನಿಟ್ಟಿನಲ್ಲಿ ರೂಪಿಸಲಾದ ಅಕ್ಕ ಪಡೆ ಯೋಜನೆಯಡಿ ಗುತ್ತಿಗೆ ಆಧಾರದ ಮೇಲೆ 05 ಮಹಿಳಾ ಎನ್ಸಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಸಂಕಷ್ಠದಲ್ಲಿರುವ ದುರ್ಬಲ ಮಹಿಳೆಯರು ಮತ್ತು ಮಕ್ಕಳಿಗೆ ತಕ್ಷಣದ ರಕ್ಷಣೆ ನೀಡುವುದು ಅಕ್ಕ ಪಡೆ ಯೋಜನೆಯ ಪ್ರಾಥಮಿಕ ಉದ್ದೇಶವಾಗಿದೆ. ಸಹಾನುಭೂತಿ ಮತ್ತು ಸಮುದಾಯ ಸೇವೆಯಲ್ಲಿ ಚಾಲಿತವಾಗಿರುವ ಅಕ್ಕ ಪಡೆ ಸಮಾಜದಲ್ಲಿ ಸ್ಪಂದಿಸುವ ಸುರಕ್ಷತ ಘಟಕವಾಗಿ ಮತ್ತು ಶೈಕ್ಷಣಿಕ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತಿದೆ.
ಆಯ್ಕೆ ಮಾನದಂಡಗಳು: ಎನ್ಸಿಸಿ “ಸಿ” ಪ್ರಮಾಣ ಪತ್ರ ಹೊಂದಿರುವ 35 ರಿಂದ 45 ವಯೋಮಿತಿಯ ಮಹಿಳಾ ಅಭ್ಯರ್ಥಿ ಆಗಿರಬೇಕು. ಅಭ್ಯರ್ಥಿಗಳು ದೈಹಿಕ ಸಧೃಡತೆ ಮತ್ತು ಸ್ಥಳೀಯ ನಿವಾಸಿ ಆಗಿರಬೇಕು. ಅಭ್ಯರ್ಥಿಗಳು ಬೆಳಿಗ್ಗೆ 7 ರಿಂದ ರಾತ್ರಿ 8 ಗಂಟೆಯವರೆಗೆ ಶಿಪ್ಟ್ ಕೆಲಸ ನಿರ್ವಹಿಸಲು ಬದ್ಧರಿರಬೇಕು. ಉತ್ತಮ ನಡುವಳಿಕೆ ಸಂವಾಹನ, ಕಲೆ, ಕಾರ್ಯದಕ್ಷತೆ ಉಳ್ಳವರಾಗಿರಬೇಕು. ಗುತ್ತಿಗೆ ಅವಧಿ 11 ತಿಂಗಳಿಗೆ ಸೀಮಿತವಾಗಿದ್ದು, ಕರ್ತವ್ಯನಿರ್ವಹಣೆ ತೃಪ್ತಿಕರವಾಗಿದ್ದಲ್ಲಿ ಸೇವೆಯನ್ನು ಮುಂದುವರಿಸಲಾಗುವುದು.
ದಾಖಲಾತಿಗಳು: ನಿಗದಿತ ನಮೂನೆ ಭರ್ತಿ ಮಾಡಿದ ಅರ್ಜಿ, ಎನ್ಸಿಸಿ “ಸಿ” ಪ್ರಮಾಣಪತ್ರ, ಸೇವಾ ಪ್ರಮಾಣ ಪತ್ರ, ಆಧಾರ ಕಾರ್ಡ, ವಾಸಸ್ಥಳ ಪ್ರಮಾಣ ಪತ್ರ, ದೈಹಿಕ ಸದೃಡತೆ ಪ್ರಮಾಣ ಪತ್ರದೊಂದಿಗೆ ನವೆಂಬರ್ 12ರೊಳಗಾಗಿ ಉಪ ನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಂತ್ರಾಲಯ ರೋಡ್ ಐ.ಡಿ.ಎಸ್.ಎಮ್.ಟಿಲೇಔಟ್ ಎದುರುಗಡೆ ರಾಯಚೂರು ಇಲ್ಲಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ದೂರವಾಣಿ ಸಂಖ್ಯೆ: 08532295646ಗೆ ಕಚೇರಿಯ ಸಮಯದಲ್ಲಿ ಸಂಪರ್ಕ ಮಾಡಬಹುದಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್