ದೇಶದಲ್ಲಿ ಪ್ರಥಮವಾಗಿ ಸ್ವಾತಂತ್ರ‍್ಯದ ಕಿಚ್ಚನ್ನ ಹಚ್ಚಿದ್ದು ಕಿತ್ತೂರು ರಾಣಿ ಚನ್ನಮ್ಮ : ಶಾಸಕ ಕೆ.ರಾಘವೇಂದ್ರ ಹಿಟ್ನಾಳ್
ಕೊಪ್ಪಳ, 03 ನವೆಂಬರ್ (ಹಿ.ಸ.) : ಆ್ಯಂಕರ್ : ಭಾರತದಲ್ಲಿ ಸಾವಿರಾರು ರಾಜ ಸಂಸ್ಥಾನಗಳಿದ್ದರೂ ಮೊಟ್ಟಮೊದಲ ಬಾರಿಗೆ ಸ್ವಾತಂತ್ರ‍್ಯದ ಕಿಚ್ಚನ್ನ ಹಚ್ಚಿದ ಕೆಚ್ಚೆದೆಯ ಕನ್ನಡತಿ ಕಿತ್ತೂರು ರಾಣಿ ಚನ್ನಮ್ಮ ಆಗಿದ್ದಾರೆಂದು ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಹೇಳಿದರು. ಅವರು ಸೋಮವಾ
ದೇಶದಲ್ಲಿ ಪ್ರಥಮವಾಗಿ ಸ್ವಾತಂತ್ರ‍್ಯದ ಕಿಚ್ಚನ್ನ ಹಚ್ಚಿದ್ದು ಕಿತ್ತೂರು ರಾಣಿ ಚನ್ನಮ್ಮ: ಶಾಸಕ ಕೆ.ರಾಘವೇಂದ್ರ ಹಿಟ್ನಾಳ್


ದೇಶದಲ್ಲಿ ಪ್ರಥಮವಾಗಿ ಸ್ವಾತಂತ್ರ‍್ಯದ ಕಿಚ್ಚನ್ನ ಹಚ್ಚಿದ್ದು ಕಿತ್ತೂರು ರಾಣಿ ಚನ್ನಮ್ಮ: ಶಾಸಕ ಕೆ.ರಾಘವೇಂದ್ರ ಹಿಟ್ನಾಳ್


ದೇಶದಲ್ಲಿ ಪ್ರಥಮವಾಗಿ ಸ್ವಾತಂತ್ರ‍್ಯದ ಕಿಚ್ಚನ್ನ ಹಚ್ಚಿದ್ದು ಕಿತ್ತೂರು ರಾಣಿ ಚನ್ನಮ್ಮ: ಶಾಸಕ ಕೆ.ರಾಘವೇಂದ್ರ ಹಿಟ್ನಾಳ್


ದೇಶದಲ್ಲಿ ಪ್ರಥಮವಾಗಿ ಸ್ವಾತಂತ್ರ‍್ಯದ ಕಿಚ್ಚನ್ನ ಹಚ್ಚಿದ್ದು ಕಿತ್ತೂರು ರಾಣಿ ಚನ್ನಮ್ಮ: ಶಾಸಕ ಕೆ.ರಾಘವೇಂದ್ರ ಹಿಟ್ನಾಳ್


ದೇಶದಲ್ಲಿ ಪ್ರಥಮವಾಗಿ ಸ್ವಾತಂತ್ರ‍್ಯದ ಕಿಚ್ಚನ್ನ ಹಚ್ಚಿದ್ದು ಕಿತ್ತೂರು ರಾಣಿ ಚನ್ನಮ್ಮ: ಶಾಸಕ ಕೆ.ರಾಘವೇಂದ್ರ ಹಿಟ್ನಾಳ್


ಕೊಪ್ಪಳ, 03 ನವೆಂಬರ್ (ಹಿ.ಸ.) :

ಆ್ಯಂಕರ್ : ಭಾರತದಲ್ಲಿ ಸಾವಿರಾರು ರಾಜ ಸಂಸ್ಥಾನಗಳಿದ್ದರೂ ಮೊಟ್ಟಮೊದಲ ಬಾರಿಗೆ ಸ್ವಾತಂತ್ರ‍್ಯದ ಕಿಚ್ಚನ್ನ ಹಚ್ಚಿದ ಕೆಚ್ಚೆದೆಯ ಕನ್ನಡತಿ ಕಿತ್ತೂರು ರಾಣಿ ಚನ್ನಮ್ಮ ಆಗಿದ್ದಾರೆಂದು ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಹೇಳಿದರು.

ಅವರು ಸೋಮವಾರ ಕೊಪ್ಪಳ ನಗರದ ಸಾಹಿತ್ಯ ಭವನದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಕಿತ್ತೂರು ರಾಣಿ ಚೆನ್ನಮ್ಮನವರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.

ಸ್ವಾತಂತ್ರ‍್ಯ ಸಂಗ್ರಾಮದಲ್ಲಿ ಕರ್ನಾಟಕದ ಅನೇಕ ರಾಜಮನೆತನಗಳು ಭಾಗಿಯಾಗಿರುವುದನ್ನು ನಾವು ಕಾಣಬಹುದು. ಅದರಲ್ಲೂ ತುಂಬಾ ವಿಶೇಷವಾಗಿ ನಮ್ಮ ಕಿತ್ತೂರು ಸಂಸ್ಥಾನ ಪ್ರಥಮವಾಗಿ ಬ್ರಿಟಿಷರ ವಿರುದ್ಧ ಹೋರಾಡಿ ಮೊದಲ ಯುದ್ದದಲ್ಲಿ ವಿಜಯವನ್ನು ಸಾಧಿಸಿರುವುದನ್ನು ನಾವು ಕಾಣುತ್ತೇವೆ. ಕಿತ್ತೂರು ರಾಣಿ ಚನ್ನಮ್ಮ ಅವರ ಜೊತೆಗೆ ಅವರ ಬಲಗೈ ಬಂಟನಾದ ಸಂಗೊಳ್ಳಿ ರಾಯಣ್ಣನವರ ಸಾಹಸವನ್ನು ಸಹ ನಾವು ಸ್ಮರಿಸಬೇಕಿದೆ. ಹಾಗಾಗಿ ನಮ್ಮ ಸರ್ಕಾರ ಕಿತ್ತೂರು ಮತ್ತು ಸಂಗೊಳ್ಳಿ ಅಭಿವೃದ್ಧಿ ಗೋಸ್ಕರ ಸುಮಾರು 34 ಕೋಟಿ ರೂ. ಅನುದಾನವನ್ನು ನೀಡಿದೆ ಎಂದರು.

ಕಿತ್ತೂರು ರಾಣಿ ಚನ್ನಮ್ಮ ಒಬ್ಬ ಮಹಿಳೆಯಾಗಿ ಹೋರಾಟದಲ್ಲಿ ಪಾಲ್ಗೊಂಡು ಇಡೀ ವಿಶ್ವಕ್ಕೆ ಮಹಿಳೆಯರು ಕೂಡಾ ಹೋರಾಟದಲ್ಲಿ ಭಾಗವಹಿಸಿ ಕೆಚ್ಚೆದೆಯಿಂದ ಹೋರಾಡಬಲ್ಲರು ಎಂದು ತೋರಿಸಿ ಕೊಟ್ಟರು. 2017ರಲ್ಲಿ ನಮ್ಮ ಸರ್ಕಾರ ರಾಣಿ ಚನ್ನಮ್ಮನ ಜಯಂತಿಯನ್ನು ಆಚರಣೆ ಮಾಡಬೇಕು ಎಂದು ಆದೇಶವನ್ನು ಹೋರಡಿಸಿತು. ಕಿತ್ತೂರು ರಾಣಿ ಚನ್ನಮ್ಮರಂತಹ ಸಾಹಸಿಗರು ಕೇವಲ ಒಂದು ಸಮುದಾಯಕ್ಕೆ ಮಾತ್ರ ಸೀಮಿತವಲ್ಲ, ಬದಲಾಗಿ ಇಡೀ ನಮ್ಮ ದೇಶಕ್ಕೆ ಸಂಬಂಧಿಸಿದವರು ಎಂದು ಹೇಳಿದರು.

ಕಾರ್ಯಕ್ರಮದ ಸಾನಿಧ್ಯವಹಿಸಿದ್ದ ಪಂಚಮಸಾಲಿ ಜಗದ್ಗುರು ಪೀಠ ಹರಿಹರದ ವಚನಾನಂದ ಸ್ವಾಮಿಗಳು ಅವರು ಮಾತನಾಡಿ, ಸ್ವಾತಂತ್ಯ ಪೂರ್ವ ನಮ್ಮ ದೇಶದಲ್ಲಿದ್ದ ಸುಮಾರು 500ಕ್ಕೂ ಅಧಿಕ ರಾಜ ಸಂಸ್ಥಾನಗಳಲ್ಲಿ ಬ್ರಿಟಿಷರ ವಿರುದ್ಧ ಮೊದಲು ಹೋರಾಟ ಮಾಡಿದ್ದು ಕಿತ್ತೂರು ರಾಣಿ ಚೆನ್ನಮ. ಆಗ ಅನೇಕ ರಾಜರುಗಳು ಬ್ರೀಟಿಷರ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿದ್ದರು. ಆದರೆ ಕಿತ್ತೂರು ರಾಣಿ ಚನ್ನಮ್ಮ ಬ್ರಿಟೀಷರೊಂದಿಗೆ ರಾಜಿ ಆಗದೆ, ಸ್ವಾತಂತ್ರ‍್ಯವನ್ನು ಬಯಸಿ, ಅವರ ವಿರುದ್ಧ ಹೋರಾಡಿದರು. ಚನ್ನಮ್ಮನ ಖಡ್ಗ ಹುಡುಕುವ ಕೆಲಸ ಆಗಬೇಕು. ಚನ್ನಮ್ಮನ ಚಿತ್ರವಿರುವ ಸ್ಮಾರಕ ನಾಣ್ಯವಿದ್ದು, ಅದು ಚಲಾವಣೆಯ ನಾಣ್ಯದಲ್ಲು ಬರಬೇಕು ಎಂದರು.

ಮಾಜಿ ಸಂಸದರಾದ ಕರಡಿ ಸಂಗಣ್ಣ ಅವರು ಮಾತನಾಡಿ, ಕಿತ್ತೂರು ರಾಣಿ ಚೆನ್ನಮ ಅವರು ದೇಶಕ್ಕೆ ಸ್ವಾತಂತ್ರö್ಯ ತರಬೇಕೆಂದು ಮೊದಲ ಧ್ವನಿ ಎತ್ತಿದವರು. ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿ ಕಿತ್ತೂರು ರಾಣಿ ಚನ್ನಮ್ಮ ಮೂರ್ತಿ ಪ್ರತಿಷ್ಠಾಪಿಸಬೇಕು ಹಾಗೂ ಮೀಸಲಾತಿ ಕುರಿತಂತೆ ಇರುವ ಸಮಾಜದ ಬೇಡಿಕೆಯನ್ನು ಈಡೇರಿಸಲು ಶಾಸಕರು ನಮ್ಮ ಸಮಾಜದ ಪರವಾಗಿ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಬೇಕು ಎಂದು ಹೇಳಿದರು.

ಕೊಪ್ಪಳ ಜಿಲ್ಲೆಯ ಹಿರಿಯ ಪತ್ರಕರ್ತರಾದ ಶರಣಪ್ಪ ಬಾಚಲಾಪೂರ ಅವರು ಕಿತ್ತೂರ ಚನ್ನಮ್ಮರ ಕುರಿತು ವಿಶೇಷ ಉಪನ್ಯಾಸ ನೀಡಿ ಮತನಾಡಿ, ಒಂದು ಹುಡುಗಿ ಅಥವಾ ಮಹಿಳೆ ಸಾಹಸದ ಕೆಲಸ ಮಾಡಿದಾಗ ಜನ ಸಾಮಾನ್ಯವಾಗಿ ಬರುವ ಮಾತು, ಕಿತ್ತೂರು ಚನ್ನಮ್ಮ ಆಗೀಯೇನು ಎಂಬುವುದು. ಕನ್ನಡ ನಾಡಿನ ವೀರ, ಸಾಧಕ ಮಹಿಳೆಯರ ಪಟ್ಟಿ ಮಾಡಿದಾಗ ಮೊದಲು ಕೇಳಿ ಬರುವ ಹೆಸರು ಕಿತ್ತೂರ ಚನ್ನಮ್ಮ. ಸ್ವಾತಂತ್ರ‍್ಯ ಸಂಗ್ರಾಮಕ್ಕೆ ಮುನ್ನುಡಿ ಅಂದ್ರೆ ಪ್ರಥಮ ಸ್ವಾತಂತ್ರ‍್ಯ ಸಂಗ್ರಾಮದ ಮೊದಲು ಬ್ರಿಟಿಷರ ವಿರುದ್ಧ ದೇಶದಾದ್ಯಂತ ಸ್ವಾತಂತ್ರ‍್ಯ ಚಳುವಳಿಗೆ ಓಂನಾಮ ಅಕ್ಷರ ಹಾಕಿದ್ದು, ವೀರರಾಣಿ ಚನ್ನಮ್ಮ ಅವರಾಗಿದ್ದಾರೆ. ಈ ಮೊದಲು ಚನ್ನಮ್ಮನ ಪತಿ ಮಲ್ಲಸರ್ಜ ಎಂದರೆ ತಪ್ಪಾಗಲಿಕ್ಕಿಲ್ಲ. ವೀರರಾಣಿ ಚನ್ನಮ್ಮನ ಇತಿಹಾಸವು ಪುಸ್ತಕದ ದಾಖಲೆಗಳಗಿಂತ ಜನಪದ ಹಾಡುಗಳಲ್ಲಿ, ಕಥೆಗಳನ್ನು ದಾಖಲಾಗಿ ಎಲ್ಲಾ ಜನಾಂಗ, ಎಲ್ಲಾ ವರ್ಗದವರ ಮನೆ ಮಾತಾಗಿರುವುದು ಕಿತ್ತೂರ ಚನ್ನಮ್ಮ. ಇಲ್ಲಿ ಜಾತಿ ಮತ ಭೇದವಿಲ್ಲದೆ ಎಲ್ಲರೂ ಚನ್ನಮ್ಮನ್ನು ಆರಾಧಿಸುತ್ತಿದ್ದಾರೆ. ವೀರರಾಣಿ ಕಿತ್ತೂರ ಚನ್ನಮ್ಮ ಅಕ್ಟೋಬರ್ 23 ರಂದು ಬ್ರಿಟೀಷ ಅಧಿಕಾರಿಯನ್ನು ಕೊಂದು ಬ್ರಿಟೀಷರ ವಿರುದ್ಧ ಹೋರಾಟ ಮಾಡಿದ ತಕ್ಷಣವೇ ಆಚರಿಸಿದ್ದು ವಿಜಯೋತ್ಸವ. ಹಾಗಾಗಿ ವಿಜಯೋತ್ಸವವನ್ನಾಗಿ ಆಚರಿಸಬೇಕು ಎಂದರು.

ಬ್ರೀಟಿಷರ ಸರಕಾರ ಒಂದು ಕಾಲದಲ್ಲಿ ಸೂರ್ಯನು ಮುಳಗದ ಸಾಮ್ರಾಜ್ಯ ಎಂಬ ಖ್ಯಾತಿ ಹೊಂದಿತ್ತು. ಅಂದರೆ ಜಗತ್ತಿನಲ್ಲಿ ಒಂದು ಕಡೆ ರಾತ್ರಿಯಾಗಿದ್ದರೆ ಇನ್ನೊಂದ ಕಡೆ ಹಗಲು ಇರುತ್ತೆ. ಆಗಿನ ಕಾಲದಲ್ಲಿ ಬ್ರೀಟಿಷ ಸರಕಾರ ಇಡೀ ಜಗತ್ತಿನಲ್ಲಿ ಬಹಳಷ್ಟು ರಾಷ್ಟ್ರಗಳಲ್ಲಿ ತನ್ನ ಸಾಮ್ರಾಜ್ಯ ಹೊಂದಿತ್ತು. ಈ ಕಾರಣಕ್ಕಾಗಿ ಬ್ರಿಟಿಷರ ಸರಕಾರವನ್ನು ಸೂರ್ಯ ಸಾಮ್ರಾಜ್ಯ ಎಂಬ ಖ್ಯಾತಿ ಹೊಂದಿತ್ತು. ಸಾಮಾನ್ಯವಾಗಿ ಬಲಾಢ್ಯರ ವಿರುದ್ದ ಯಾರಾದರೂ ಮಾತನಾಡಲು ಹಿಂಜರಿಯುತ್ತಾರೆ. ಅವರನ್ನು ಎದುರು ಹಾಕಿಕೊಳ್ಳದೆ ಅವರು ಹೇಳಿದಂತೆ ಕೇಳಿಕೊಂಡು ಇರುವ ಸ್ಥಿತಿ ಇದೆ. ಆದರೆ ನಾಡಿಗಾಗಿ ಬ್ರಿಟಿಷರಿಗೆ ತಲೆ ಬಾಗದೇ ಸೋಲಿನ ಅರಿವು ಇದ್ದರೂ ಕೊನೆಯವರೆಗೂ ಹೋರಾಡಿದ ದಿಟ್ಟ ಮಹಿಳೆ ರಾಣಿ ಚನ್ನಮ್ಮ. 1857 ಪ್ರಥಮ ಸ್ವತಂತ್ರ ಸಂಗ್ರಾಮ ಆರಂಭವಾಗುತ್ತದೆ. ಸ್ವತಂತ್ರ ಸಂಗ್ರಾಮದ ಮುನ್ನ 33 ವರ್ಷ ಹಿಂದೆ ಬ್ರಿಟಿಷರಿಂದ ಮುಕ್ತಿ ಪಡೆಯಲು ಚನ್ನಮ್ಮ ಹೋರಾಟ ಮಾಡಿದರು. ಅವರ ಹಾಕಿಕೊಟ್ಟ ಹಾದಿ ಮುಂದೆ ದೊಡ್ಡ ಹೋರಾಟಕ್ಕೆ ನಾಂದಿಯಾಯಿತು. ಸ್ವತಂತ್ರಯ ಸಂಗ್ರಾಮ ಅವಧಿಯಲ್ಲಿ ದೇಶದ ಜನತೆ ಝಾನ್ಸಿ ರಾಣಿ ಲಕ್ಷ್ಮಿಬಾಯಿಯನ್ನು ಗುರುತಿಸುತ್ತಾರೆ ಆದರೆ ಈ ಮೊದಲು ಹೋರಾಟ ಮಾಡಿದ ಚನ್ನಮ್ಮ ಕನ್ನಡ ನಾಡಿಗೆ ಮಾತ್ರ ಸೀಮಿತವಾಗಿದ್ದಾರೆ. ಇದಕ್ಕೆ ಕಾರಣ ಚನ್ನಮ್ಮ ಇತಿಹಾಸ ಕನ್ನಡ ನಾಡಿನ ಹೊರಗಡೆ ಪ್ರಚಾರವಾಗದೆ ಇರುವುದು. ಕಿತ್ತೂರು ಚನ್ನಮ್ಮ ಸೇರಿ ನಾಡಿನ ಎಲ್ಲಾ ಇತಿಹಾಸ ಪುರುಷರು, ದಾರ್ಶನಿಕರನ್ನು ಒಂದೊಂದು ಸಮಾಜ, ವರ್ಗ ಜಾತಿಗೆ ಮೀಸಲಿಡುವುದು ಸಂಕೋಚಿತ ಭಾವನೆಯಾಗುತ್ತದೆ ಎಂದು ವಿವರವಾಗಿ ಮತನಾಡಿದರು.

ಕಾರ್ಯಕ್ರಮದಲ್ಲಿ ಕೊಪ್ಪಳ ನಗರಸಭೆ ಸದಸ್ಯರಾದ ಮುತ್ತೂರಾಜ ಕುಷ್ಟಗಿ, ಉಪ ತಹಶಿಲ್ದಾರ ಗವಿಸಿದ್ದಪ್ಪ ಮಣ್ಣೂರ, ಪಂಚಮಸಾಲಿ ಸಮಾಜದ ರಾಜ್ಯ ಅಧ್ಯಕ್ಷರಾದ ಸೋಮನಗೌಡ ಪಾಟೀಲ, ಶಾಲ ಶಿಕ್ಷಕರ ಸಂಘದ ರಾಜ್ಯ ಅಧ್ಯಕ್ಷರಾದ ಶಂಭುಲಿಂಗನಗೌಡ ಪಾಟೀಲ, ಕೊಪ್ಪಳ ಪಂಚಮಸಾಲಿ ಸಮಾಜದ ಜಿಲ್ಲಾ ಅಧ್ಯಕ್ಷರಾದ ಬಸವನಗೌಡ ತೊಂಡಿಹಾಳ, ಮುಖಂಡರಾದ ಡಾ. ಬಸವರಾಜ ಕ್ಯಾವಡ್ಕರ್, ಕರಿಯಪ್ಪ ಮೇಟಿ, ಸುಮಂಗಲ ಹಂಚಿನಾಳ, ಪ್ರತಿಮಾ ಪಟ್ಟಣಶೆಟ್ಟಿ, ಸುಜಾತ ಪಟ್ಟಣಶೆಟ್ಟಿ, ಬಿ.ಎಸ್.ಪಾಟೀಲ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande