ಜೀವನದಲ್ಲಿ ಎಲ್ಲರು ಓದುವಂತೆ ಬರೆಯಬೇಕು
ವಿಜಯಪುರ, 03 ನವೆಂಬರ್ (ಹಿ.ಸ.) : ಆ್ಯಂಕರ್ : ಸಾವಿರಾರು ಎಕರೆ ಬಂಜರು ಭೂಮಿಯನ್ನು ನೀರಾವರಿ ಮೂಲಕ ನಂದನವನವನ್ನಾಗಿ ಮಾಡಿರುವ ಸಚಿವ ಎಂ.ಬಿ. ಪಾಟೀಲರು ಜನೋಪಯೋಗಿಯಾಗಿ ಬದುಕಬೇಕು ಎಂಬ ಸಿದ್ಧಾಂತದಡಿ ಕಾಯಕ ಮಾಡುತ್ತಿದ್ದಾರೆ ಎಂದು ಸುಕ್ಷೇತ್ರ ಮಣಕವಾಡ- ಹಿರೇವಡ್ಡಟ್ಟಿ ಅನ್ನದಾನೀಶ್ವರ ದೇವಮಂದಿರ ಮಹಾಮಠದ
ಶ್ರೀ


ವಿಜಯಪುರ, 03 ನವೆಂಬರ್ (ಹಿ.ಸ.) :

ಆ್ಯಂಕರ್ : ಸಾವಿರಾರು ಎಕರೆ ಬಂಜರು ಭೂಮಿಯನ್ನು ನೀರಾವರಿ ಮೂಲಕ ನಂದನವನವನ್ನಾಗಿ ಮಾಡಿರುವ ಸಚಿವ ಎಂ.ಬಿ. ಪಾಟೀಲರು ಜನೋಪಯೋಗಿಯಾಗಿ ಬದುಕಬೇಕು ಎಂಬ ಸಿದ್ಧಾಂತದಡಿ ಕಾಯಕ ಮಾಡುತ್ತಿದ್ದಾರೆ ಎಂದು ಸುಕ್ಷೇತ್ರ ಮಣಕವಾಡ- ಹಿರೇವಡ್ಡಟ್ಟಿ ಅನ್ನದಾನೀಶ್ವರ ದೇವಮಂದಿರ ಮಹಾಮಠದ ಶ್ರೀಗುರು ಅಭಿನವ ಮೃತ್ಯುಂಜಯ ಮಹಾಸ್ವಾಮಿಗಳು ಹೇಳಿದ್ದಾರೆ.

ನಗರದ ಆಶ್ರಮ ರಸ್ತೆಯ ಆನಂದ ನಗರದಲ್ಲಿ ಶ್ರೀ ದಾನಮ್ಮದೇವಿ ದೇವಸ್ಥಾನದ 15ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಲಾಗಿರುವ ಪ್ರವಚನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜೀವನದಲ್ಲಿ ಎಲ್ಲರು ಓದುವಂತೆ ಏನಾದರನ್ನೂ ಬರೆಯಬೇಕು ಅಥವಾ ನಮ್ಮ ಕೆಲಸ ಕಾರ್ಯಗಳು ಬೇರೆಯವರು ನಮ್ಮ ಬಗ್ಗೆ ಬರೆಯುವಂತೆ ಬದುಕಬೇಕು. ಎಲ್ಲರೂ ಯೋಗಿ ಆಗದಿದ್ದರೂ ಪರವಾಗಿಲ್ಲ. ಆದರೆ ನಾಲ್ಕು ಜನರಿಗೆ ಜನ ಉಪಯೋಗಿ ಬದುಕಬೇಕು ಎಂಬ ಸಿದ್ದಾಂತವನ್ನು ಸಚಿವರು ಹೊಂದಿದ್ದಾರೆ. ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ಆಶಯದಂತೆ ಕೆಲಸ ಮಾಡುತ್ತಿರುವ ಅವರು, ಐದಾರು ವರ್ಷಗಳ ಹಿಂದೆ ನಮ್ಮ ಮಹಾಮಠದ ಬಳಿ ಸುಮಾರು 20 ಎಕರೆ ಭೂಮಿ ಖರೀದಿಸಿ ಜನಸೇವೆ ಕಾರ್ಯ ಮಾಡಲು ನಿರ್ಧರಿಸಿದ್ದೆ. ಅಂದು ಗೃಹ ಸಚಿವರಾಗಿದ್ದ ಎಂ. ಬಿ. ಪಾಟೀಲ ಅವರನ್ನು ಆಹ್ವಾನಿಸಿ ಭೂಮಿ ಪೂಜೆ ಮಾಡಿಸಲಾಗಿತ್ತು. ಇಂದು ಅವರ ಕೈಗುಣದಿಂದಾಗಿ ಅಲ್ಲಿ ರೂ. 40 ಕೋ. ವೆಚ್ಚದಲ್ಲಿ ನಾನಾ ಕಾಮಗಾರಿಗಳು ಪೂರ್ಣಗೊಂಡು ವಿದ್ಯಾರ್ಥಿಗಳಿಗೆ ಶಿಕ್ಷಣ, ಭಕ್ತರಿಗೆ ದಾಸೋಹದಂಥ ಸಮಾಜಮುಖಿ ಕಾರ್ಯಗಳು ನಡೆಯುತ್ತಿವೆ. ಈಗ ಮತ್ತೋಮ್ಮೆ ಭೇಟಿ ನೀಡುವಂತೆ ಎಂ. ಬಿ. ಪಾಟೀಲ ಅವರನ್ನು ಮಹಾಸ್ವಾಮೀಜಿ ಆಹ್ವಾನ ನೀಡಿದರು.

ಸಚಿವ ಎಂ. ಬಿ. ಪಾಟೀಲ ಅವರು ಮಾತನಾಡಿ, ಸ್ವಾಮೀಜಿಗಳು ಪ್ರಾರಂಭಿಸಿರುವ ಶಿಕ್ಷಣ ಸಂಸ್ಥೆಯಲ್ಲಿ ಸಾವಿರಾರು ಮಕ್ಕಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. ಬಸವನಾಡು ವಿಜಯಪುರ ಜಿಲ್ಲೆಯ ಮಕ್ಕಳೂ ಅಲಿಲ ಓದುತ್ತಿದ್ದಾರೆ. ಯಾವುದೇ ಸಂಸ್ಥೆ ಬೆಳೆಯಬೇಕಾದರೆ ಅದರ ಹಿಂದಿರುವ ವ್ಯಕ್ತಿ ಮುಖ್ಯವಾಗುತ್ತಾರೆ. ಅದೇ ರೀತಿ. ಸುಕ್ಷೇತ್ರ ಮಣಕವಾಡ- ಹಿರೇವಡ್ಡಟ್ಟಿ ಅನ್ನದಾನೀಶ್ವರ ದೇವಮಂದಿರ ಮಹಾಮಠದ ಶ್ರೀಗುರು ಅಭಿನವ ಮೃತ್ಯುಂಜಯ ಮಹಾಸ್ವಾಮಿಗಳು ಶ್ರಮದಿಂದಾಗಿ ಅಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗಿವೆ. ಆನಂದ ನಗರದಲ್ಲಿ ಶ್ರೀ ದಾನಮ್ಮದೇವಿ ಟ್ರಸ್ಟ್ ನವರ ಶ್ರದ್ಧಾಭಕ್ತಿಯಿಂದ ದೇವಸ್ಥಾನ ಅಭಿವೃದ್ಧಿಯಾಗಿದೆ. ತಾಯಿ ದಾನಮ್ಮದೇವಿ ಎಲ್ಲರಿಗೂ ಆಯುಷ್ಯ, ಆರೋಗ್ಯ ಸಮೃದ್ಧಿಯನ್ನು ನೀಡಲಿ ಎಂದು ಹೇಳಿದರು.

ಇದೇ ವೇಳೆ ಸಚಿವರನ್ನು ಸ್ವಾಮೀಜಿಗಳು ಸನ್ಮಾನಿಸಿ ಆಶೀರ್ವದಿಸಿದರು.

ಈ ಸಂದರ್ಭದಲ್ಲಿ ಕೋಡಿಮಠದ ಉತ್ತರಾಧಿಕಾರಿ ಶ್ರೀಗಳಾದ ಚೇತನ ಮಹಾಸ್ವಾಮಿಗಳು, ತೆಲಸಂಗದ ವೀರೇಶ ದೇವರು, ಶಿವಲಿಂಗದೇವರು, ಸಚ್ಚಿದಾನಂದ ದೇವರು, ಅಖಿಲ ಭಾರತ ವೀರಶೈವ ಮಹಾಸಭೆ ಜಿಲ್ಲಾಧ್ಯಕ್ಷ ವಿ. ಸಿ. ನಾಗಠಾಣ, ದೇವಸ್ಥಾನ ಟ್ರಸ್ಟ್ ಸಮಿತಿ ಅಧ್ಯಕ್ಷ ಅಪ್ಪು ಇಟ್ಟಂಗಿ, ಮುಖಂಡರಾದ ಎಂ. ಬಿ. ಮೂಲಿಮನಿ, ರವೀಂದ್ರ ಬಾವೂರ, ಎಸ್. ಎಸ್. ಪಾಟೀಲ ಕನ್ನೂರ, ಎಂ. ಎಸ್. ಮೇಟಿ, ರುದ್ರಗೌಡ ಪಾಟೀಲ, ಸಿದ್ದು ಖ್ಯಾತಪ್ಪನವರ, ಡಿ. ಐ. ದುರ್ಗದ, ಪ್ರೇಮಾ ನಂದಿ, ಎಚ್. ಎಂ. ಬೋರಾವತ, ಬಸವರಾಜ ಮರನೂರ, ಶ್ರೀದಾನಮ್ಮದೇವಿ ಭಕ್ತರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande