ಗ್ಯಾರಂಟಿ ಯೋಜನೆಯಿಂದ ಬಡವರ ಜೀವನ ಸುಧಾರಣೆ : ಸಚಿವ ಚಲುವರಾಯಸ್ವಾಮಿ
ಮಂಡ್ಯ, 03 ನವೆಂಬರ್ (ಹಿ.ಸ.) : ಆ್ಯಂಕರ್ : ಗ್ಯಾರಂಟಿ ಯೋಜನೆಯನ್ನು ರಾಜ್ಯ ಸರ್ಕಾರವು ಬಡವರ ಜೀವನ ಸುಧಾರಣೆಗಾಗಿ ಜಾರಿಗೆ ತಂದಿದ್ದು ಇತರೆ ರಾಜ್ಯಗಳಿಗೂ ಸ್ಫೂರ್ತಿಯಾಗಿದೆ. ಇದರ ಫಲವಾಗಿ ದೇಶದಲ್ಲಿಯೇ ಕರ್ನಾಟಕದ ತಲಾ ಆದಾಯ ಅಗ್ರ ಸ್ಥಾನ ಪಡೆದಿದೆ. ಪಂಚ ಗ್ಯಾರಂಟಿ ಯೋಜನೆಯ ಸೌಲಭ್ಯವನ್ನು ನಾಡಿನ ಮನೆಮ
ಗ್ಯಾರಂಟಿ ಯೋಜನೆಯಿಂದ ಬಡವರ ಜೀವನ ಸುಧಾರಣೆ : ಸಚಿವ ಚಲುವರಾಯಸ್ವಾಮಿ


ಮಂಡ್ಯ, 03 ನವೆಂಬರ್ (ಹಿ.ಸ.) :

ಆ್ಯಂಕರ್ : ಗ್ಯಾರಂಟಿ ಯೋಜನೆಯನ್ನು ರಾಜ್ಯ ಸರ್ಕಾರವು ಬಡವರ ಜೀವನ ಸುಧಾರಣೆಗಾಗಿ ಜಾರಿಗೆ ತಂದಿದ್ದು ಇತರೆ ರಾಜ್ಯಗಳಿಗೂ ಸ್ಫೂರ್ತಿಯಾಗಿದೆ. ಇದರ ಫಲವಾಗಿ ದೇಶದಲ್ಲಿಯೇ ಕರ್ನಾಟಕದ ತಲಾ ಆದಾಯ ಅಗ್ರ ಸ್ಥಾನ ಪಡೆದಿದೆ. ಪಂಚ ಗ್ಯಾರಂಟಿ ಯೋಜನೆಯ ಸೌಲಭ್ಯವನ್ನು ನಾಡಿನ ಮನೆಮನೆಗೂ ತಲುಪಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಕೆಲಸ ನಿರ್ವಹಿಸುತ್ತದೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದರು.

ಮಂಡ್ಯದಲ್ಲಿ ಆಯೋಜಿಸಲಾದ ಗ್ಯಾರಂಟಿ ಯೋಜನೆ ಕುರಿತ ಕಾರ್ಯಾಗಾರ ಹಾಗೂ ಪ್ರಗತಿ ಸಭೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಗೃಹಲಕ್ಷ್ಮಿ ಹಣದಿಂದ ಸರ್ಕಾರಿ ಶಾಲೆಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿರುವ ಶ್ರೀರಂಗಟ್ಟಣ ತಾಲ್ಲೂಕಿನ ವಿಜಯಲಕ್ಷ್ಮಿ ಅವರನ್ನು ಸನ್ಮಾನಿಸಿ ಗೌರವಿಸಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande