ತಾತ್ಕಾಲಿಕ ಗರ್ಭನಿರೋಧಕ ; ‘ಅಂತರ’ ಉಪಯುಕ್ತ : ವೈದ್ಯರ ಸಲಹೆ
ರಾಯಚೂರು, 25 ನವೆಂಬರ್ (ಹಿ.ಸ.) : ಆ್ಯಂಕರ್: ‘ಅಂತರ’ ಎಂಬ ಹೆಸರಿನಿಂದ ಕರೆಯುವ ತಾತ್ಕಾಲಿಕ ಗರ್ಭನಿರೋಧಕ ವಿಧಾನವಾದ ಅಂತರ ಚುಚ್ಚುಮದ್ದು ಅತ್ಯಂತ ಸರಳವಾಗಿದೆ. ಯಾವುದೇ ಅನನೂಕೂಲತೆಯಾಗದಂತೆ ದಂಪತಿಯ ನಿರ್ಧಾರದ ಮೇರೆಗೆ ಮೊದಲ ಹೆರಿಗೆ ನಂತರ ಮಗುವಿನ ತಾಯಿಯು ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ಪಡೆಯಬ
ತಾತ್ಕಾಲಿಕ ಗರ್ಭನಿರೋಧಕ : ‘ಅಂತರ’ ಉಪಯುಕ್ತ: ವೈದ್ಯರ ಸಲಹೆ


ತಾತ್ಕಾಲಿಕ ಗರ್ಭನಿರೋಧಕ : ‘ಅಂತರ’ ಉಪಯುಕ್ತ: ವೈದ್ಯರ ಸಲಹೆ


ತಾತ್ಕಾಲಿಕ ಗರ್ಭನಿರೋಧಕ : ‘ಅಂತರ’ ಉಪಯುಕ್ತ: ವೈದ್ಯರ ಸಲಹೆ


ರಾಯಚೂರು, 25 ನವೆಂಬರ್ (ಹಿ.ಸ.) :

ಆ್ಯಂಕರ್: ‘ಅಂತರ’ ಎಂಬ ಹೆಸರಿನಿಂದ ಕರೆಯುವ ತಾತ್ಕಾಲಿಕ ಗರ್ಭನಿರೋಧಕ ವಿಧಾನವಾದ ಅಂತರ ಚುಚ್ಚುಮದ್ದು ಅತ್ಯಂತ ಸರಳವಾಗಿದೆ. ಯಾವುದೇ ಅನನೂಕೂಲತೆಯಾಗದಂತೆ ದಂಪತಿಯ ನಿರ್ಧಾರದ ಮೇರೆಗೆ ಮೊದಲ ಹೆರಿಗೆ ನಂತರ ಮಗುವಿನ ತಾಯಿಯು ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ಪಡೆಯಬಹುದಾದ ಚುಚ್ವುಮದ್ದನ್ನು ಸದುಪಯೋಗ ಪಡೆದುಕೊಳ್ಳಬಹುದಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಹಾಗೂ ಜಿಲ್ಲಾ ಕುಟುಂಬ ಕಲ್ಯಾಣ ಕಾರ್ಯಕ್ರಮ ಅಧಿಕಾರಿಗಳು ತಿಳಿಸಿದ್ದಾರೆ.

ಅಂತರ ಗರ್ಭನಿರೋಧಕ ಚುಚ್ಚುಮದ್ದನ್ನು ರಾಯಚೂರು ಜಿಲ್ಲೆಯ ಎಲ್ಲ ತಾಲೂಕಿನ ತಾಲೂಕು ಸಾರ್ವಜನಿಕ ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳು, ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೇರಿದಂತೆ ವಿವಿಧ ಸರ್ಕಾರಿ ಆರೋಗ್ಯ ಕೇಂದ್ರಗಳು ಹಾಗೂ ರೀಮ್ಸ್ನಲ್ಲಿ ಅಂತರ ಚುಚ್ಚುಮದ್ದನ್ನು ಉಚಿತವಾಗಿ ಒದಗಿಸಲಾಗುತ್ತದೆ.

ಒಂದು ಡೋಸ್ ಮೂಲಕ ಮೂರು ತಿಂಗಳವರೆಗೆ ಗರ್ಭಧಾರಣೆ ತಡೆಯಬಹುದಾಗಿದೆ. ಇದು ಭಾರತ ಸರ್ಕಾರದ ಕುಟುಂಬ ಯೋಜನಾ ಕಾರ್ಯಕ್ರಮದ ಭಾಗವಾಗಿ ರಾಜ್ಯ ಸರಕಾರದ ಮಾರ್ಗದರ್ಶನದಲ್ಲಿ ರಾಯಚೂರು ಜಿಲ್ಲೆಯ ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಸಾರ್ವಜನಿಕರಿಗೆ ಲಭ್ಯವಿದೆ.

ಅಂತರ ಎಂಬುದು ಸರಕಾರ ಸೂಚಿತ ಅಧಿಕೃತ ಹೆಸರಾಗಿದೆ. ಇದು ಹೆಚ್ಚು ಪರಿಣಾಮಕಾರಿ, ದೀರ್ಘಕಾಲ ಕಾರ್ಯನಿರ್ವಹಿಸುವ ರಿವರ್ಸಿಬಲ್ ಗರ್ಭನಿರೋಧಕ ವಿಧಾನವಾಗಿದ್ದು, ಅಂತರ ಇಂಜೆಕ್ಷನ್‌ನನ್ನು ಪ್ರತಿ ಮೂರು ತಿಂಗಳುಗಳಿಗೊಮ್ಮೆ ವರ್ಷದಲ್ಲಿ 4 ಸಾರಿ ಪಡೆದಲ್ಲಿ ಕನಿಷ್ಟ ಒಂದು ವರ್ಷ ಗರ್ಭಧಾರಣೆ ಮುಂದೂಡಲು ಸಹಾಯಕವಾಗುವುದು. ಪ್ರಸ್ತುತ ಏಪ್ರಿಲ್‌ನಿಂದ ಇಲ್ಲಿವರೆಗೆ 1037 ಮಹಿಳೆಯರು ಫಲಾನುಭವಿಗಳಾಗಿ ಚುಚ್ಚುಮದ್ದು ಪಡೆಯುತ್ತಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ಸುರೇಂದ್ರ ಬಾಬು ತಿಳಿಸಿದ್ದಾರೆ.

ತಪಾಸಣೆಯ ನಂತರ ಇಂಜೆಕ್ಷನ್: ಇದು ಮಾಂಸಖ0ಡದ ಒಳಗೆ ನೀಡುವ ಇಂಜೆಕ್ಷನ್ ಆಗಿದ್ದು, ಸಾಮಾನ್ಯವಾಗಿ ಮಹಿಳೆಯ ಆರೋಗ್ಯ ತಪಾಸಣೆಯ ನಂತರ ತರಬೇತಿ ಪಡೆದ ಆರೋಗ್ಯ ಸಿಬ್ಬಂದಿಯವರು ವೈದ್ಯರ ನೇತೃತ್ವದಲ್ಲಿ ತೋಳು ಅಥವಾ ತೊಡೆಯಲ್ಲಿ ಈ ಇಂಜೆಕ್ಷನ್ ನೀಡುತ್ತಾರೆ. ಗರ್ಭಧಾರಣೆಯ ಅಂತರವನ್ನು ಕಾಯ್ದುಕೊಳ್ಳಲು ಅಥವಾ ಹೆರಿಗೆಯನ್ನು ವಿಳಂಬಗೊಳಿಸಲು ಬಯಸುವ ಮಹಿಳೆಯರಿಗೆ ಇದು ಸೂಕ್ತವಾದ ಆಯ್ಕೆಯಾಗಿದೆ. ಸಾಮಾನ್ಯವಾಗಿ 6 ವಾರಗಳ ಪ್ರಸವಾನಂತರದಿ0ದ ಪ್ರಾರಂಭವಾಗುವ ಹಾಲುಣಿಸುವ ತಾಯಂದಿರಿಗೂ ಇದು ಸೂಕ್ತವಾಗಿದೆ ಎಂದು ಜಿಲ್ಲಾ ಕುಟುಂಬ ಕಲ್ಯಾಣ ಕಾರ್ಯಕ್ರಮ ಅಧಿಕಾರಿ ಡಾ ಶಿವಕುಮಾರ ಅವರು ತಿಳಿಸಿದ್ದಾರೆ.

ಪ್ರಯೋಜನಗಳು: ಗರ್ಭಧಾರಣೆಯನ್ನು ತಡೆಗಟ್ಟುವುದರ ಜೊತೆಗೆ, ಇದು ಗರ್ಭನಿರೋಧಕವಲ್ಲದ ಪ್ರಯೋಜನಗಳನ್ನು ನೀಡುತ್ತದೆ. ಸ್ತನ ಕ್ಯಾನ್ಸ್ರ ನಿಯಂತ್ರಣ, ಗರ್ಭಕೋಶ ಸಮಸ್ಯೆಗಳ ಕಡಿಮೆ ಮಾಡುವಿಕೆ, ರಕ್ತಹೀನತೆ ಅಪಾಯ ಕಡಿಮೆ ಮಾಡುವುದು, ವಿಶೇಷವಾಗಿ ಮಹಿಳೆಯರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಾಗ ಉಂಟಾಗುವ ಮುಜುಗರದಿಂದ ದೂರವಾಗಲು ಇದು ಸಹಕಾರಿ ಎಂದು ತಿಳಿಸಿದರು.

ಪುನಃ ಗರ್ಭ ಧರಿಸುವಿಕೆಗೆ ಮರಳುವಿಕೆ: ಇಂಜೆಕ್ಷನ್‌ನ್ನು ನಿಲ್ಲಿಸಿದ ನಂತರ, ಪುನಃ ಗರ್ಭಧಾರಣೆಗೆ ಮರಳುವ ಸರಾಸರಿ ಸಮಯ ಸುಮಾರು 7 ರಿಂದ 10 ತಿಂಗಳುಗಳು ಇರುತ್ತದೆ. ಆದರೆ, ಇದು ಪ್ರತಿಯೊಬ್ಬ ವ್ಯಕ್ತಿಗೆ ಬದಲಾಗಬಹುದಾಗಿದೆ.

ಪುನರಾವರ್ತಿತ ಡೋಸ್‌ಗಳು: ಪರಿಣಾಮಕಾರಿತ್ವವನ್ನು ಕಾಪಾಡಿಕೊಳ್ಳಲು, ಮುಂದಿನ ಡೋಸ್‌ನ್ನು ಪ್ರತಿ ಮೂರು ತಿಂಗಳಿಗೊಮ್ಮೆ, ಹೊಂದಿಕೊಳ್ಳುವ ಅವಧಿಯಲ್ಲಿ (ಕೊನೆಯ ಇಂಜೆಕ್ಷನ್‌ನಿ0ದ 75 ರಿಂದ 120 ದಿನಗಳು) ತೆಗೆದುಕೊಳ್ಳಬೇಕು. ಇಂಜೆಕ್ಷನ್ ಸೈಟ್ ನಿರ್ವಹಣೆಯ ನಂತರ ಮಸಾಜ್ ಮಾಡಬಾರದು ಅಥವಾ ಉಜ್ಜಬಾರದು.

ವೈಯಕ್ತಿಕ ಆರೋಗ್ಯ ಪರಿಸ್ಥಿತಿಗಳ ಆಧಾರದ ಮೇಲೆ ಅಂತರ ಸರಿಯಾದ ಗರ್ಭನಿರೋಧಕ ಆಯ್ಕೆಯಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಅಂತರ ಚುಚ್ಚುಮದ್ದು ಪ್ರಾರಂಭಿಸುವ ಮೊದಲು ಸ್ತ್ರೀರೋಗತಜ್ಞರು ಅಥವಾ ಆರೋಗ್ಯ ವೃತ್ತಿಪರರೊಂದಿಗೆ ಸಮಾಲೋಚಿಸಬೇಕು. ಸಾಮಾನ್ಯ ಅಡ್ಡಪರಿಣಾಮಗಳು ಮುಟ್ಟಿನ ಚಕ್ರದಲ್ಲಿನ ಬದಲಾವಣೆಗಳನ್ನು ಒಳಗೊಂಡಿರಬಹುದಾಗಿದೆ. ಉದಾಹರಣೆಗೆ ಅನಿಯಮಿತ ಮುಟ್ಟುಗಳು, ಅಮೆನೋರಿಯಾ (ಋತುಚಕ್ರದ ಅನುಪಸ್ಥಿತಿ) ಈ ಬದಲಾವಣೆಗಳು ಸಾಮಾನ್ಯ ಮತ್ತು ಕಾಲಾನಂತರದಲ್ಲಿ ಕಡಿಮೆಯಾಗುತ್ತವೆ ಎಂದು ಡಾ ಶಿವಕುಮಾರ ಅವರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande