ಮಂಗಳವಾರದ ರಾಶಿ ಫಲ
ಹುಬ್ಬಳ್ಳಿ, 25 ನವೆಂಬರ್ (ಹಿ.ಸ.) : ಆ್ಯಂಕರ್ : ಮಂಗಳವಾರದ ರಾಶಿ ಫಲ *ಮೇಷ ರಾಶಿ.* ಸ್ವಲ್ಪ ಅನಾರೋಗ್ಯದ ಸೂಚನೆಗಳಿವೆ. ವಿವಾದಗಳಿಗೆ ದೂರವಿರುವುದು ಒಳ್ಳೆಯದು. ವೃತ್ತಿಯಲ್ಲಿ ಅಡೆತಡೆಗಳು ಹೆಚ್ಚಾಗುತ್ತವೆ. ಉದ್ಯೋಗಗಳಿಗೆ ಹೆಚ್ಚುವರಿ ಕೆಲಸಭಾರ ಇರುತ್ತದೆ. ನಿರುದ್ಯೋಗಿಗಳು ಕಷ್ಟಕ್ಕೆ ತಕ್ಕ ಫಲಿತಾ
ಮಂಗಳವಾರದ ರಾಶಿ ಫಲ


ಹುಬ್ಬಳ್ಳಿ, 25 ನವೆಂಬರ್ (ಹಿ.ಸ.) :

ಆ್ಯಂಕರ್ : ಮಂಗಳವಾರದ ರಾಶಿ ಫಲ

*ಮೇಷ ರಾಶಿ.*

ಸ್ವಲ್ಪ ಅನಾರೋಗ್ಯದ ಸೂಚನೆಗಳಿವೆ. ವಿವಾದಗಳಿಗೆ ದೂರವಿರುವುದು ಒಳ್ಳೆಯದು. ವೃತ್ತಿಯಲ್ಲಿ ಅಡೆತಡೆಗಳು ಹೆಚ್ಚಾಗುತ್ತವೆ. ಉದ್ಯೋಗಗಳಿಗೆ ಹೆಚ್ಚುವರಿ ಕೆಲಸಭಾರ ಇರುತ್ತದೆ. ನಿರುದ್ಯೋಗಿಗಳು ಕಷ್ಟಕ್ಕೆ ತಕ್ಕ ಫಲಿತಾಂಶ ದೊರೆಯವುದಿಲ್ಲ. ಆರ್ಥಿಕವಾಗಿ ನಿರೀಕ್ಷಿಸಿದ ಫಲಿತಾಂಶಗಳು ಇರುತ್ತವೆ.

*ವೃಷಭ ರಾಶಿ.*

ಮನೆಯಲ್ಲಿ ಶುಭಕಾರ್ಯಗಳನ್ನು ನಿರ್ವಹಿಸುತ್ತೀರಿ. ಹಳೆಯ ಮಿತ್ರರು ಆಗಮನ ಸಂತಸವನ್ನು ಉಂಟುಮಾಡುತ್ತದೆ. ಆಸ್ತಿ ವ್ಯವಹಾರದಲ್ಲಿ ಹೊಸ ಒಪ್ಪಂದಗಳು ಮಾಡಿಕೊಳ್ಳುತ್ತೀರಿ. ಆಧ್ಯಾತ್ಮಿಕ ಚಿಂತನೆ ಹೆಚ್ಚಾಗುತ್ತದೆ. ವೃತ್ತಿ ವ್ಯಾಪಾರಗಳು ಲಾಭದಾಯಕವಾಗಿ ಸಾಗುತ್ತವೆ. ಉದ್ಯೋಗದಲ್ಲಿ ಸಂಬಳದ ವಿಷಯದಲ್ಲಿ ಶುಭವಾರ್ತೆಗಳು ದೊರೆಯುತ್ತವೆ.

*ಮಿಥುನ ರಾಶಿ.*

ಉದ್ಯೋಗಗಳಲ್ಲಿ ನಿಮ್ಮ ಕಾರ್ಯವೈಖರಿಗೆ ಪ್ರಶಂಸೆಗಳನ್ನು ಪಡೆಯುತ್ತೀರಿ. ಸಂಬಳದ ವಿಷಯದಲ್ಲಿ ಶುಭವಾರ್ತೆಗಳು ದೊರೆಯುತ್ತವೆ. ಸಹೋದರರೊಂದಿಗೆ ವಿವಾದಗಳು ಉಂಟಾಗುತ್ತವೆ. ಕುಟುಂಬ ಸದಸ್ಯರ ನಡವಳಿಕೆಯು ಆಶ್ಚರ್ಯವನ್ನುಂಟು ಮಾಡುತ್ತದೆ. ವೃತ್ತಿ ವ್ಯಾಪಾರಗಳಲ್ಲಿ ಅನುಕೂಲಕರ ವಾತಾವರಣ ಇರುತ್ತದೆ. ನಿರುದ್ಯೋಗಿಗಳಿಗೆ ಹೊಸ ಅವಕಾಶಗಳು ಸಿಗುತ್ತವೆ.

*ಕಟಕ ರಾಶಿ.*

ವ್ಯಾಪಾರಗಳು ಹೆಚ್ಚು ನಿರುತ್ಸಾಹಗೊಳ್ಳುತ್ತವೆ. ಕೈಗೊಂಡ ಕಾರ್ಯಕ್ರಮಗಳು ಮಂದಗತಿಯಲ್ಲಿ ಸಾಗುತ್ತವೆ . ದೂರ ಪ್ರಯಾಣಗಳನ್ನು ಮುಂದೂಡುತ್ತೀರಿ. ಕುಟುಂಬ ವ್ಯವಹಾರದಲ್ಲಿ ಆತುರದಲ್ಲಿ ನಿರ್ಧಾರ ತೆಗೆದುಕೊಳ್ಳುವುದು ಒಳ್ಳೆಯದಲ್ಲಿ. ಉದ್ಯೋಗದ ವಾತಾವರಣ ನಿಧಾನವಾಗಿರುತ್ತದೆ. ಆರ್ಥಿಕವಾಗಿ ವಾತಾವರಣ ಋಣಾತ್ಮಕವಾಗಿರುತ್ತದೆ.

*ಸಿಂಹ ರಾಶಿ.*

ಹೊಸ ಸಾಲದ ಪ್ರಯತ್ನಗಳನ್ನು ಮಾಡುತ್ತೀರಿ. ಆತ್ಮೀಯರೊಂದಿಗೆ ಭಿನ್ನಾಭಿಪ್ರಾಯಗಳಿರುತ್ತವೆ . ಖರ್ಚು ವೆಚ್ಚದ ವಿಷಯದಲ್ಲಿ ಎಚ್ಚರಿಕೆಯಿಂದ ನಿರ್ವಹಿಸಬೇಕು. ಕುಟುಂಬ ಸದಸ್ಯರ ನಡವಳಿಕೆಯು ಆತಂಕವನ್ನು ಉಂಟುಮಾಡುತ್ತದೆ. ವ್ಯಾಪಾರಸ್ಥರಿಗೆ ಆಲೋಚನೆಯಲ್ಲಿ ಸ್ಥಿರತೆ ಇರುವುದಿಲ್ಲ. ವೃತ್ತಿ ಉದ್ಯೋಗಗಳಲ್ಲಿ ಜವಾಬ್ದಾರಿ ಹೆಚ್ಚಾಗಿ , ಸಾಕಷ್ಟು ವಿಶ್ರಾಂತಿ ದೊರೆಯುವುದಿಲ್ಲ. ಸೇವಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೀರಿ.

*ಕನ್ಯಾ ರಾಶಿ.*

ಯೋಜಿತ ಕೆಲಸಗಳು ಯೋಜಿತ ರೀತಿಯಲ್ಲಿ ಪೂರ್ಣಗೊಳ್ಳುತ್ತವೆ. ಸಮಾಜದಲ್ಲಿ ಪ್ರಖ್ಯಾತಿ ಹೆಚ್ಚಾಗುತ್ತದೆ. ಆಕಸ್ಮಿಕ ಧನಲಾಭ ಉಂಟಾಗುತ್ತದೆ.ವ್ಯಾಪಾರಕ್ಕೆ ಹೊಸ ಹೂಡಿಕೆಗಳು ದೊರೆಯುತ್ತವೆ. ವೃತ್ತಿ ಉದ್ಯೋಗಗಳಲ್ಲಿ ಕೆಲಸ ಒತ್ತಡದಿಂದ ಪರಿಹಾರ ದೊರೆಯುತ್ತದೆ. ದೀರ್ಘ ಕಾಲಿದ ಸಾಲದ ಒತ್ತಡದಿಂದ ಹೊರಬರುತ್ತೀರಿ.

*ತುಲಾ ರಾಶಿ.*

ಕುಟುಂಬ ಸದಸ್ಯರ ಆರೋಗ್ಯ ವಿಚಾರದಲ್ಲಿ ವೈದ್ಯಕೀಯ ಸಮಾಲೋಚನೆ ಅಗತ್ಯ. ಇತರರ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವುದರಿಂದ ಮಾನಸಿಕ ಅಶಾಂತಿ ಉಂಟಾಗುತ್ತದೆ. ವೃತ್ತಿಪರ ವ್ಯವಹಾರಗಳಲ್ಲಿ ಲಾಭ ಗಳಿಸಲು ಹೆಚ್ಚು ಶ್ರಮಿಸಬೇಕಾಗುತ್ತದೆ. ಉದ್ಯೋಗ ವಿಚಾರಗಳಲ್ಲಿ ಆತುರದ ನಿರ್ಧಾರ ತೆಗೆದುಕೊಳ್ಳುವುದು ಒಳ್ಳೆಯದಲ್ಲ.

*ವೃಶ್ಚಿಕ ರಾಶಿ.*

ಆದಾಯ ಹೆಚ್ಚು ತೃಪ್ತಿ ತರುತ್ತದೆ. ಮನೆಯ ಹೊರಗೆ ವಾತವರಣ ಅನುಕೂಲಕರವಾಗಿರುತ್ತದೆ. ಆಪ್ತ ಸ್ನೇಹಿತರ ನೆರವಿನಿಂದ ಪ್ರಮುಖ ಕಾರ್ಯಗಳು ಪೂರ್ಣಗೊಳ್ಳುತ್ತವೆ. ವೃತ್ತಿಪರ ವ್ಯವಹಾರಗಳಲ್ಲಿ ಹೊಸ ಹೂಡಿಕೆಗಳನ್ನು ಸ್ವೀಕರಿಸಲಾಗುತ್ತದೆ. ಉದ್ಯೋಗದಲ್ಲಿ ಶ್ರಮ ಹೆಚ್ಚಾದರು, ಜವಾಬ್ದಾರಿಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತೀರಿ.

*ಧನುಸ್ಸು ರಾಶಿ.*

ಸಹೋದರರೊಂದಿಗೆ ಸ್ಥಿರಾಸ್ತಿ ವಿವಾದ ಉಂಟಾಗುತ್ತದೆ. ವೃತ್ತಿಪರ ವ್ಯವಹಾರಗಳು ಇನ್ನಷ್ಟು ನಿರುತ್ಸಾಹ ಗೊಳಿಸುತ್ತವೆ. ನಿರುದ್ಯೋಗಿಗಳು ಸಿಕ್ಕ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಆಧ್ಯಾತ್ಮಿಕ ಸೇವೆಗಳಿಗೆ ನೆರವು ನೀಡಲಾಗುತ್ತವೆ. ವಾಹನದಲ್ಲಿ ಪ್ರಯಾಣಿಸುವಾಗ ಎಚ್ಚರಿಕೆ ವಹಿಸುವುದು ಸೂಕ್ತ.

*ಮಕರ ರಾಶಿ.*

ಪ್ರಮುಖ ಕಾರ್ಯಗಳಲ್ಲಿ ಅಪ್ರಯತ್ನ ಕಾರ್ಯ ಸಿದ್ಧಿ ಉಂಟಾಗುತ್ತದೆ. ಹೊಸ ವಾಹನಗಳನ್ನು ಖರೀದಿಸಲಾಗುತ್ತದೆ. ವೃತ್ತಿಪರ ವ್ಯವಹಾರಗಳು ಮತ್ತಷ್ಟುಅಭಿವೃದ್ಧಿ ಹೊಂದುತ್ತದೆ. ಹಣಕಾಸಿನ ವ್ಯವಹಾರಗಳು ಹೆಚ್ಚು ಸಮೃದ್ಧವಾಗಿರುತ್ತದೆ. ಅಧಿಕಾರಿಗಳ ಬೆಂಬಲದಿಂದ ಉದ್ಯೋಗಿಗಳಿಗೆ ಅನುಕೂಲಕರ ಬದಲಾವಣೆಗಳು ಕಂಡುಬರುತ್ತವೆ.

*ಕುಂಭ ರಾಶಿ.*

ವೃತ್ತಿಪರ ಉದ್ಯೋಗಗಳಲ್ಲಿ ನಿರೀಕ್ಷೆಗಳು ನಿಜವಾಗುತ್ತವೆ. ಬಾಲ್ಯದ ಸ್ನೇಹಿತರಿಂದ ಶುಭ ಕಾರ್ಯಕ್ಕೆ ಆಹ್ವಾನಗಳು ಬರುತ್ತವೆ. ಭೂ ವಿವಾದಗಳು ಇತ್ಯರ್ಥದತ್ತ ಸಾಗುತ್ತದೆ. ವ್ಯಾಪಾರಗಳಲ್ಲಿ ಹೆಚ್ಚು ಉತ್ಸಾಹದಿಂದ ಕೆಲಸ ಮಾಡಿ ಲಾಭವನ್ನು ಪಡೆಯುತ್ತೀರಿ. ನಿರುದ್ಯೋಗಿಗಳಿಗೆ ಅನಿರೀಕ್ಷಿತ ಅವಕಾಶಗಳು ಅಪ್ರಯತ್ನವಾಗಿ ದೊರೆಯುತ್ತವೆ.

*ಮೀನ ರಾಶಿ.*

ಪ್ರಮುಖ ವ್ಯವಹಾರಗಳು ಮುಂದೂಡಲ್ಪಡುತ್ತವೆ. ಬಂಧು ಮಿತ್ರರಿಂದ ಟೀಕೆಗಳನ್ನು ಎದುರಿಸಬೇಕಾಗುತ್ತದೆ. ಹೊಸ ವ್ಯವಹಾರಗಳಲ್ಲಿ ಹೂಡಿಕೆ ಮಾಡಿ ನಷ್ಟ ಎದುರಿಸುತ್ತೀರಿ. ಉದ್ಯೋಗಿಗಳಿಗೆ ಸಹೋದ್ಯೋಗಿಗಳೊಂದಿಗೆ ಸಮಸ್ಯೆಗಳಿರುತ್ತವೆ. ವ್ಯರ್ಥ ಖರ್ಚುಗಳು ಹೆಚ್ಚಾಗುತ್ತವೆ. ಆಧ್ಯಾತ್ಮಿಕ ಚಿಂತನೆ ಹೆಚ್ಚಾಗುತ್ತವೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande