ಜಿಲ್ಲಾ ಪದ್ಮಶಾಲಿ ಸಂಘದ ನೂತನ ಅಧ್ಯಕ್ಷರಾಗಿ ಅವ್ವಾರು ಮಂಜುನಾಥ್ ಪುನರಾಯ್ಕೆ
ಬಳ್ಳಾರಿ, 25 ನವೆಂಬರ್ (ಹಿ.ಸ.) : ಆ್ಯಂಕರ್ : ಬಳ್ಳಾರಿ ಜಿಲ್ಲಾ ಪದ್ಮಶಾಲಿ ಸಂಘದ ನೂತನ ಅಧ್ಯಕ್ಷರಾಗಿ ಅವ್ವಾರು ಮಂಜುನಾಥ್ ಅವರು ಸರ್ವಾನುಮತದಿಂದ ಮರು ಆಯ್ಕೆಯಾಗಿದ್ದಾರೆ. ಬಳ್ಳಾರಿ ಜಿಲ್ಲಾ ಪದ್ಮಶಾಲಿ ಸಂಘದ ನೂತನ ಕಾರ್ಯಕಾರಿ ಸಮಿತಿ ಸದಸ್ಯರ ಸಭೆಯು ಸೋಮವಾರ ಸಂಜೆ ನಡೆದಿದ್ದು, ಈ ಸ
ಜಿಲ್ಲಾ ಪದ್ಮಶಾಲಿ ಸಂಘದ ನೂತನ ಅಧ್ಯಕ್ಷರಾಗಿ ಅವ್ವಾರು ಮಂಜುನಾಥ್ ಪುನರಾಯ್ಕೆ


ಬಳ್ಳಾರಿ, 25 ನವೆಂಬರ್ (ಹಿ.ಸ.) :

ಆ್ಯಂಕರ್ : ಬಳ್ಳಾರಿ ಜಿಲ್ಲಾ ಪದ್ಮಶಾಲಿ ಸಂಘದ ನೂತನ ಅಧ್ಯಕ್ಷರಾಗಿ ಅವ್ವಾರು ಮಂಜುನಾಥ್ ಅವರು ಸರ್ವಾನುಮತದಿಂದ ಮರು ಆಯ್ಕೆಯಾಗಿದ್ದಾರೆ.

ಬಳ್ಳಾರಿ ಜಿಲ್ಲಾ ಪದ್ಮಶಾಲಿ ಸಂಘದ ನೂತನ ಕಾರ್ಯಕಾರಿ ಸಮಿತಿ ಸದಸ್ಯರ ಸಭೆಯು ಸೋಮವಾರ ಸಂಜೆ ನಡೆದಿದ್ದು, ಈ ಸಭೆಯಲ್ಲಿ ಗಡ್ಡಂ ಶ್ರೀನಿವಾಸಲು ಅವರು ಗೌರವಾಧ್ಯಕ್ಷರಾಗಿ, ತಿರುವೀದುಲ ವೆಂಕಟೇಶಲು ಅವರು ಧರ್ಮಕರ್ತರಾಗಿ, ಎಸ್.ಪಿ. ವೆಂಕಟೇಶಲು, ಕೋಡಿ ನಾಗರಾಜು ಅವರು ಉಪಾಧ್ಯಕ್ಷರಾಗಿ, ಶ್ರೀರಾಂ ಸತ್ಯನಾರಾಯಣ ಅವರು ಕಾರ್ಯದರ್ಶಿಗಳಾಗಿ, ಬಂಡಾರಿ ರಾಮಾಂಜಿನೇಯಲು ಅವರು ಜಾಂಚಿಗಳಾಗಿ, ಪೆನಗೊಂಡ್ಲ ಮಂಜುನಾಥ್ ಮತ್ತು ಮೇಡಂ ಮಧುಕುಮಾರ್ ಅವರು ಜಂಟಿ ಕಾರ್ಯದರ್ಶಿಗಳಾಗಿ ಆಯ್ಕೆಯಾಗಿದ್ದಾರೆ.

ಪೋಬತ್ತಿ ಲೋಕಣ್ಣ, ಡಾ. ಎನ್. ಶ್ರೀನಿವಾಸ್, ಶ್ರೀರಾಂ ಮಂಜುನಾಥ್, ದೇವರೆಡ್ಡಿ ಪಿ. ಚಿದಾನಂದ, ಪೆನಗೊಂಡ್ಲ ಗೋವಿಂದರಾಜುಲು, ಶ್ರೀಮತಿ ಎಂ.ಎಸ್. ಮಂಜುಳಾ, ಕೋಡಿಗಂಟಿ ಗೋಪಾಲ, ಪೋಬತ್ತಿ ರಮೇಶ, ಬೂಸಾ ರಾಮಸ್ವಾಮಿ, ಎಸ್. ಅಂಬರೀಶ, ಪಲಿಮಿರಿ ಎಚ್. ರವಿ ಮತ್ತು ಸಾಂದೋಪು ತಿಮ್ಮಪ್ಪ ಅವರು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಇವರ ಅಧಿಕಾರವಧಿಯು 2027ರವರೆಗೆ ಇರಲಿದೆ.

ಬಳ್ಳಾರಿ ಜಿಲ್ಲಾ ಪದ್ಮಶಾಲಿ ಸಂಘದ ನೂತನ ಅಧ್ಯಕ್ಷರಾಗಿ ಅವ್ವಾರು ಮಂಜುನಾಥ್ ಅವರು ಬಳ್ಳಾರಿ ಜಿಲ್ಲಾ ವಾಣಿಜ್ಯ ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾಗಿ, ಬಳ್ಳಾರಿ ಜಿಲ್ಲಾ ಪದ್ಮಶಾಲಿ ಸಂಘದ ಉಪಾಧ್ಯಕ್ಷರಾಗಿರುವ ಎಸ್.ಪಿ. ವೆಂಕಟೇಶ್ ಅವರು ಬಳ್ಳಾರಿ ಜಿಲ್ಲಾ ವಾಣಿಜ್ಯ ಕೈಗಾರಿಕಾ ಸಂಸ್ಥೆಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande