ಕೊಪ್ಪಳ ನಗರಸಭೆ : ಪರಿಶಿಷ್ಟ ಜಾತಿಯವರಿಗೆ ಚಿಕಿತ್ಸೆ-ಸಹಾಯಧನಕ್ಕೆ ಅರ್ಜಿ ಆಹ್ವಾನ
ಕೊಪ್ಪಳ, 25 ನವೆಂಬರ್ (ಹಿ.ಸ.) : ಆ್ಯಂಕರ್ : ಕೊಪ್ಪಳ ನಗರಸಭೆ ವತಿಯಿಂದ 2025-26ನೇ ಸಾಲಿನ ಶೇ.24.10 ರ ಯೋಜನೆಯ ನಗರಸಭೆ ನಿಧಿ ಅನುದಾನದಡಿಯಲ್ಲಿ ಶೇ. 40ರಷ್ಟು ವ್ಯಕ್ತಿಸಂಬ0ಧಿತ ಕಾರ್ಯಕ್ರಮದಲ್ಲಿ ಪರಿಶಿಷ್ಟ ಜಾತಿಯವರಿಗೆ ಶಸ್ತಚಿಕಿತ್ಸೆಗಾಗಿ ಸಹಾಯಧನ ಒದಗಿಸಲು ಅರ್ಜಿ ಆಹ್ವಾನಿಸಲಾಗಿದೆ. ಜಿಲ್ಲಾಧಿ
ಕೊಪ್ಪಳ ನಗರಸಭೆ : ಪರಿಶಿಷ್ಟ ಜಾತಿಯವರಿಗೆ ಚಿಕಿತ್ಸೆ-ಸಹಾಯಧನಕ್ಕೆ ಅರ್ಜಿ ಆಹ್ವಾನ


ಕೊಪ್ಪಳ, 25 ನವೆಂಬರ್ (ಹಿ.ಸ.) :

ಆ್ಯಂಕರ್ : ಕೊಪ್ಪಳ ನಗರಸಭೆ ವತಿಯಿಂದ 2025-26ನೇ ಸಾಲಿನ ಶೇ.24.10 ರ ಯೋಜನೆಯ ನಗರಸಭೆ ನಿಧಿ ಅನುದಾನದಡಿಯಲ್ಲಿ ಶೇ. 40ರಷ್ಟು ವ್ಯಕ್ತಿಸಂಬ0ಧಿತ ಕಾರ್ಯಕ್ರಮದಲ್ಲಿ ಪರಿಶಿಷ್ಟ ಜಾತಿಯವರಿಗೆ ಶಸ್ತಚಿಕಿತ್ಸೆಗಾಗಿ ಸಹಾಯಧನ ಒದಗಿಸಲು ಅರ್ಜಿ ಆಹ್ವಾನಿಸಲಾಗಿದೆ.

ಜಿಲ್ಲಾಧಿಕಾರಿಗಳ ಆದೇಶದನ್ವಯ ಕೊಪ್ಪಳ ನಗರಸಭೆಯ ಸನ್ 2025-26ನೇ ಸಾಲಿನ ಶೇ. 24.10ರ ಯೋಜನೆಯ ನಗರಸಭೆ ನಿಧಿ ಅನುದಾನದಡಿಯಲ್ಲಿ ಶೇ. 40ರಷ್ಟು ವ್ಯಕ್ತಿಸಂಬ0ಧಿತ ಕಾರ್ಯಕ್ರಮದಲ್ಲಿ ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿ ಬರುವ ಪರಿಶಿಷ್ಟ ಜಾತಿ ಜನಾಂಗದವರಿಗೆ ಶಸ್ತç ಚಿಕಿತ್ಸೆಗಾಗಿ ಸಹಾಯಧನ ಒದಗಿಸಲಾಗುತ್ತಿದ್ದು, ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸುವ ಫಲಾನುಭವಿಗಳು ಕೊಪ್ಪಳ ನಗರದ ನಿವಾಸಿಯಾಗಿದ್ದು, ಪರಿಶಿಷ್ಟ ಜಾತಿಗೆ ಸೇರಿದವರಾಗಿರಬೇಕು. ಅರ್ಜಿಯೊಂದಿಗೆ ಚಾಲ್ತಿ ಸಾಲಿನ ಜಾತಿ ಮತ್ತು ಅದಾಯ ಪ್ರಮಾಣ ಪತ್ರ, ಶಸ್ತ ಚಿಕಿತ್ಸೆಗಾಗಿ ಹೊಂದಿದ ಪ್ರಮಾಣ ಪತ್ರ ಹಾಗೂ ಬಿಲ್‌ಗಳನ್ನು ಲಗತ್ತಿಸಬೇಕು.

ಇದಲ್ಲದೇ ಎರಡು ಪಾಸ್ ಪೋರ್ಟ ಅಳತೆಯ ಭಾವಚಿತ್ರ, ಆಧಾರ ಕಾರ್ಡ, ರೇಷನ್ ಕಾರ್ಡ ಮತ್ತು ಬ್ಯಾಂಕ್ ಪಾಸ್ ಪುಸ್ತಕದೊಂದಿಗೆ 2025ರ ಡಿಸೆಂಬರ್ 5 ರೊಳಗಾಗಿ ನಗರಸಭೆ ಕಾರ್ಯಾಲಯದಲ್ಲಿ ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಸಲ್ಲಿಸಬೇಕು. ಅವಧಿ ಮೀರಿ ಬಂದ ಹಾಗೂ ಅಪೂರ್ಣ ದಾಖಲಾತಿ ಲಗತ್ತಿಸಿದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಕೊಪ್ಪಳ ನಗರಸಭೆಯ ಪೌರಾಯುಕ್ತರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande