
ಕೋಲಾರ, ೨೪ ನವೆಂಬರ್ (ಹಿ.ಸ) :
ಆ್ಯಂಕರ್ : ಕೋಲಾರ ಜಿಲ್ಲಾ ಪ್ರೌಢಶಾಲಾ ವೃತ್ತಿ ಹಾಗೂ ವಿಶೇಷ ಶಿಕ್ಷಕರ ಸಂಘದ ಸಭೆಯನ್ನು ನ.೨೯ರ ಶನಿವಾರ ಮಧ್ಯಾಹ್ನ ೧ ಗಂಟೆಗೆ ನಗರದ ಡಿಡಿಪಿಐ ಕಚೇರಿಯ ಸಭಾಂಗಣದಲ್ಲಿ ಕರೆಯಲಾಗಿದೆ ಎಂದು ಜಿಲ್ಲಾ ಪ್ರೌಢಶಾಲಾ ವೃತ್ತಿಶಿಕ್ಷಕರ ಸಂಘದ ಅಧ್ಯಕ್ಷ ಆಂಜನೇಯ ತಿಳಿಸಿದ್ದಾರೆ.
ಸದರಿ ಸಭೆಯಲ್ಲಿ ಪ್ರಸ್ತುತ ೨೦೨೫-೨೬ನೇ ಸಾಲಿನ ವೃತ್ತಿ ಶಿಕ್ಷಣ ವಸ್ತು ಪ್ರದರ್ಶನ ನಡೆಸುವ ಮತ್ತು ಸಿದ್ದತೆಗಳ ಕುರಿತು ಚರ್ಚಿಸುತ್ತಿದ್ದು, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಅಲ್ಮಾಸ್ ಫರ್ವೀನ್ ತಾಜ್, ಜಿಲ್ಲಾಶಿಕ್ಷಣಾಧಿಕಾರಿಗಳಾದ ವೀಣಾ, ವಿಷಯ ಪರಿವೀಕ್ಷಕರಾದ ಬಬಿತ ಮತ್ತಿತರರು ಉಪಸ್ಥಿತರಿದ್ದು, ವಸ್ತು ಪ್ರದರ್ಶನ ನಡೆಸುವ ಕುರಿತು ಮಾರ್ಗದರ್ಶನ ನೀಡುವರು.
ಸಭೆಗೆ ಜಿಲ್ಲೆ ಎಲ್ಲಾ ಸರ್ಕಾರಿ,ಅನುದಾನಿತ,ಖಾಸಗಿ ಪ್ರೌಢಶಾಲೆಗಳ ವೃತ್ತಿಶಿಕ್ಷಕರು, ಸಂಘದ ಪದಾಧಿಕಾರಿಗಳು ವಿಶೇಷ ಶಿಕ್ಷಕರು,ಚಿತ್ರಕಲೆ,ಸಂಗೀತ ಶಿಕ್ಷಕರು ತಪ್ಪದೇ ಹಾಜರಾಗಲು ಅವರು ಕೋರಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್