
ಲಿಂಗಸುಗೂರು, 24 ನವೆಂಬರ್ (ಹಿ.ಸ.) :
ಆ್ಯಂಕರ್ : ಲಿಂಗಸುಗೂರು ತಾಲೂಕಿನ ಆಸ್ಪತ್ರೆಯಲ್ಲಿ 50 ಹಾಸಿಗೆಗಳ ಸಾಮಥ್ರ್ಯದ ಕ್ರಿಟಿಕಲ್ ಕೇರ್ ಘಟಕವನ್ನು ಕಾರ್ಯಗತಗೊಳಿಸಲು ಅವಶ್ಯವಿರುವ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಅರ್ಹತೆ ಹಾಗೂ ರೋಸ್ಟರ್ ಆಧಾರದ ಮೇಲೆ ಭರ್ತಿ ಮಾಡಲು ನೇರ ಸಂದರ್ಶನಕ್ಕೆ ಅರ್ಜಿಗಳನ್ನು ಅರ್ಹ ಅಭ್ಯರ್ಥಿಗಳಿಂದ ಆಹ್ವಾನಿಸಲಾಗಿದೆ.
45 ವಯೋಮಿತಿ ಒಳಗಿರುವ ಆಸಕ್ತ ಅಭ್ಯರ್ಥಿಗಳು, ಫಿಸಿಷಿಯನ್ ತಜ್ಞರು 01 ಹುದ್ದೆಗೆ ಎಂ.ಡಿ ಅಥವಾ ಡಿ.ಎನ್.ಬಿ ಜನರಲ್ ಮೆಡಿಸಿನ್ ಎಂ.ಬಿ.ಬಿ.ಎಸ್ ವಿದ್ಯಾಹರ್ತೆ ಹೊಂದಿರುವ ಅಭ್ಯರ್ಥಿಗಳಿಗೆ ಮಾಸಿಕ ಸಂಚಿತ ವೇತನವಾಗಿ 1,40,000 ರೂ.ಗಳು ನೀಡಲಾಗುತ್ತದೆ.
ಅರಿವಳಿಕೆ ತಜ್ಞ 01 ಹುದ್ದೆಗೆ ಅನಸ್ಥೇಸಿಯಾ ಎಂ.ಬಿ.ಬಿ.ಎಸ್, ಎಂ.ಡಿ ಅನಸ್ಥೇಸಿಯಾ ವಿದ್ಯಾಹರ್ತೆ ಹೊಂದಿರುವ ಅಭ್ಯರ್ಥಿಗಳಿಗೆ ಮಾಸಿಕ ಸಂಚಿತ ವೇತನವಾಗಿ 1,40,000 ರೂ.ಗಳು ನೀಡಲಾಗುವುದು.
ಆರ್ಥೋಪೆಡಿಷಿಯನ್ 01 ಹುದ್ದೆಗೆ ಎಂ.ಎಸ್ ಆರ್ಥೋ, ಡಿ.ಎನ್.ಬಿ ಆರ್ಥೋಪಿಡಿಕ್ಸ್, ಎಂ.ಬಿ.ಬಿ.ಎಸ್ ವಿದ್ಯಾಹರ್ತೆ ಹೊಂದಿರುವ ಅಭ್ಯರ್ಥಿಗಳಿಗೆ ಮಾಸಿಕ ಸಂಚಿತ ವೇತನವಾಗಿ 1,40,000 ರೂ.ಗಳು ನೀಡಲಾಗುತ್ತದೆ.
ರೇಡಿಯಾಲಜಿ 01 ಹುದ್ದೆಗೆ ರೇಡಿಯಾಲಜಿಯಲ್ಲಿ ಎಂ.ಡಿ ವಿದ್ಯಾಹರ್ತೆ ಹೊಂದಿರುವ ಅಭ್ಯರ್ಥಿಗಳಿಗೆ ಮಾಸಿಕ ಸಂಚಿತ ವೇತನವಾಗಿ 1,30,000 ರೂ.ಗಳು ಹಾಗೂ ಸ್ಟಾಫ್ ನರ್ಸ್ ಒಟ್ಟು 15 ಹುದ್ದೆಗೆ ಎನ್.ಎಚ್.ಎಂ ಮಾರ್ಗಸೂಚಿ ಪ್ರಕಾರ ವೇತನ ನೀಡಲಾಗುವುದು.
ಈ ಒಟ್ಟಾರೆ ಹುದ್ದೆಗಳಿಗೆ ನೇರ ಸಂದರ್ಶನ ಮೂಲಕ ಭರ್ತಿ ಮಾಡಲು ನವೆಂಬರ್ 27ರ ಬೆಳಗ್ಗೆ 10.30ಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಸಭಾಂಗಣ ರಾಯಚೂರು ಇಲ್ಲಿ ನೇರ ಸಂದರ್ಶನ ನಡೆಯಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ
ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್