
ಕುರೇಕುಪ್ಪ, 24 ನವೆಂಬರ್ (ಹಿ.ಸ.) :
ಆ್ಯಂಕರ್ : ಕುರೇಕುಪ್ಪ ಗ್ರಾಮದ ಮಲ್ಲಿಕಾರ್ಜುನ (13) ಬಾಲಕ ಬಳ್ಳಾರಿ ತಾಲ್ಲೂಕಿನ ಚೇಳ್ಳಗುರ್ಕಿಯ ಗಾಂಧಿ ತತ್ವ ಆಧಾರಿತ ವಸತಿ ಶಾಲೆಯಿಂದ ಕಾಣೆಯಾಗಿದ್ದಾನೆ.
ವಿದ್ಯಾರ್ಥಿ ಮಲ್ಲಿಕಾರ್ಜುನ ನವೆಂಬರ್ 13 ರಂದು ಚೆಳ್ಳಗುರ್ಕಿಯಿಂದ ಪರಾರಿಯಾಗಿದ್ದಾನೆ. ಈ ಕುರಿತು ಪಿ.ಡಿ.ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಣೆಯಾದ ಬಾಲಕನ ಚಹರೆ: ಎತ್ತರ 05 ಅಡಿ, ಕೋಲು ಮುಖ, ಎಣ್ಣೆಗೆಂಪು ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿರುತ್ತಾನೆ. ಕಾಣೆಯಾದ ಸಂದರ್ಭದಲ್ಲಿ ಪಿಂಕ್ ಮತ್ತು ಬಿಳಿ ಬಣ್ಣಗಳ ಮಿಶ್ರಿತ ಉದ್ದ ಗೆರೆವುಳ್ಳ ಪುಲ್ ಶರ್ಟ್ ಮತ್ತು ಬಿಳಿ ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ.
ವ್ಯಕ್ತಿಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ಪಿ.ಡಿ ಹಳ್ಳಿ ಪೆÇೀಲಿಸ್ ಠಾಣೆಯ ದೂ.08392-295010, ಪಿಎಸ್‍ಐ ಮೊ.9480803052, ಪಿಐ ಬಳ್ಳಾರಿ ಪೆÇಲೀಸ್ ಕಂಟ್ರೋಲ್ ರೂಂ ದೂ.08392-258100, ಎಸ್‍ಪಿ ಕಚೇರಿ ದೂ.08392-258400, ಸಿರುಗುಪ್ಪ ಡಿಎಸ್‍ಪಿ ಕಚೇರಿ ದೂ.08392-27600 ಅಥವಾ ಪಿ.ಡಿ ಹಳ್ಳಿ ವೃತ್ತದ ಸಿಪಿಐ ದೂ.08392-276461 ಗೆ ಸಂಪರ್ಕಿಸಬಹುದಾಗಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್