ಭುವನೇಶ್ವರಿ ವಿಶೇಷ ಮಕ್ಕಳ ಶಾಲೆಯಲ್ಲಿ ಕನಕದಾಸರ ಜಯಂತಿ ಆಚರಣೆ
ಗದಗ, 24 ನವೆಂಬರ್ (ಹಿ.ಸ.) : ಆ್ಯಂಕರ್ : ತಮ್ಮ ಕೀರ್ತನೆಗಳ ಮೂಲಕ ಸಮಾಜದ ಅಂಕುಡೊಂಕು ತಿದ್ದಿದ ದಾಸ ಶ್ರೇಷ್ಠ ಭಕ್ತ ಕನಕದಾಸರು. ಇವರು ದಾಸರ ಪರಂಪರೆಯಲ್ಲಿ ಶ್ರೇಷ್ಠರೆನಿಸಿಕೊಂಡಿರುವ ದಾಸ ಶ್ರೇಷ್ಠ ವಿಶ್ವ ಮಾನವ ಭಕ್ತ ಕನಕದಾಸರು, ಭಗವಂತನನ್ನು ಸಾಕ್ಷಾತ್ಕರಿಸಿಕೊಂಡ ಇವರು ಕರ್ನಾಟಕದಲ್ಲಿ ಜನಿಸಿ ವಿಶ್ವ
ಫೋಟೋ


ಗದಗ, 24 ನವೆಂಬರ್ (ಹಿ.ಸ.) :

ಆ್ಯಂಕರ್ : ತಮ್ಮ ಕೀರ್ತನೆಗಳ ಮೂಲಕ ಸಮಾಜದ ಅಂಕುಡೊಂಕು ತಿದ್ದಿದ ದಾಸ ಶ್ರೇಷ್ಠ ಭಕ್ತ ಕನಕದಾಸರು. ಇವರು ದಾಸರ ಪರಂಪರೆಯಲ್ಲಿ ಶ್ರೇಷ್ಠರೆನಿಸಿಕೊಂಡಿರುವ ದಾಸ ಶ್ರೇಷ್ಠ ವಿಶ್ವ ಮಾನವ ಭಕ್ತ ಕನಕದಾಸರು, ಭಗವಂತನನ್ನು ಸಾಕ್ಷಾತ್ಕರಿಸಿಕೊಂಡ ಇವರು ಕರ್ನಾಟಕದಲ್ಲಿ ಜನಿಸಿ ವಿಶ್ವಕ್ಕೆ ಶಾಂತಿ ಸಮಾನತೆ ಹಾಗೂ ಸೌಹಾರ್ದತೆಯನ್ನು ಒಳಗೊಂಡ ಕೀರ್ತನೆಗಳನ್ನು ಹಾಗೂ ಕಾವ್ಯಗಳನ್ನು ರಚಿಸಿ ಮಾನವಕುಲಕ್ಕೆ ಸರ್ವಕಾಲಿಕ ಮೌಲ್ಯಗಳನ್ನು ಪ್ರತಿಪಾದಿಸಿದ ಮಹಾನ್ ಮಾನವತಾವಾದಿ ಎಂದರು.

ವಿಶ್ವ ಕಲ್ಯಾಣ ಸಂಸ್ಥೆಯ ಅಧ್ಯಕ್ಷ, ರಾಜ್ಯ ಪ್ರಶಸ್ತಿ ಪುರಸ್ಕೃತರ ಮಂಜುನಾಥ ದು. ಹದ್ದಣ್ಣವರವರು ಅಧ್ಯಕ್ಷತೆವಹಿಸಿ ಭಕ್ತ ಕನಕದಾಸರ ಭಾವಚಿತ್ರಕ್ಕೆ ಹೂ ಮಾಲೆ ಅರ್ಪಿಸುತ್ತಾ, ಇಂದು ಶ್ರೀಮತಿ ನಿರ್ಮಲಾ ಷಡಾಕ್ಷರಯ್ಯ. ಕರಿಸಿದ್ಧಿಮಠವರು ತಮ್ಮ ಹುಟ್ಟುಹಬ್ಬದ ನಿಮಿತ್ಯ ದೇವರ ಸ್ವರೂಪಿಗಳಾದ ವಿಶೇಷ ಮಕ್ಕಳಿಗೆ ಸಿಹಿಯೊಂದಿಗೆ ಅಲ್ಪೋಪಹಾರವನ್ನು ವ್ಯವಸ್ಥೆ ಮಾಡಿ, ಶ್ರೀಮತಿ ನಿರ್ಮಲಾ ಷಡಾಕ್ಷರಯ್ಯ. ಕರಿಸಿದ್ಧಿಮಠವರು ನಿರಂತರವಾಗಿ ಸಹಾಯ ಮಾಡುತ್ತಾ ನಮ್ಮ ಸೇವಾ ಕಾರ್ಯಕ್ಕೆ ಬೆನ್ನಲುಬಾಗಿ ನಿಂತಿದ್ದಾರೆ. ಶ್ರೀಮತಿ ನಿರ್ಮಲಾ ಕರಿಸಿದ್ಧಿಮಠವರಿಗೆ ಭಗವಂತ ಸಕಲ ಇಷ್ಟಾರ್ಥಗಳನ್ನು ಹಾಗೂ ಆಯುರ್ ಆರೋಗ್ಯವನ್ನು ಕರಣಿಸಲೆಂದು ಹಾರೈಸಿ, ಕೃತಜ್ಞತೆಗಳನ್ನು ಅರ್ಪಿಸಿದರು.

ವಿಶ್ವ ಕಲ್ಯಾಣ (ರಿ) ಗದಗ ಸಂಚಾಲಿತ ಭುವನೇಶ್ವರಿ ವಿಶೇಷ ಅಗತ್ಯವುಳ್ಳ ಮಕ್ಕಳ ಶಾಲೆಯಲ್ಲಿ ್ಲ ದಾಸವರೇಣ್ಯ ಭಕ್ತ ಕನಕದಾಸರ ಜಯಂತಿ ಹಾಗೂ ಶ್ರೀಮತಿ ನಿರ್ಮಲಾ ಷಡಾಕ್ಷರಯ್ಯ. ಕರಿಸಿದ್ಧಿಮಠವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ದಿವ್ಯಾಂಗ ವಿಶೇಷ ಚೇತನರು ಹಾಗೂ ಎಲ್ಲರೂ ಭಕ್ತ ಕನಕದಾಸರ ಭಾವಚಿತ್ರಕ್ಕೆ ಹೂಗಳ ಸಮರ್ಪಣೆಯನ್ನು ಮಾಡುವುದರ ಮೂಲಕ ಆಚರಿಸಿದರು. ಕುಮಾರಿ ಐಶ್ವರ್ಯ ನೀಲಗುರಿ, ಕಾದಂಬರಿ ಗೌಳಿ, ಪಾಲಕರು, ಸಿಬ್ಬಂದಿ ಹಾಗೂ ವಿಶೇಷ ಮಕ್ಕಳು ಉಪಸ್ಥಿತರಿದ್ದರು. ಕೊನೆಗೆ ಎಲ್ಲರಿಗೂ ಸಿಹಿಯೊಂದಿಗೆ ಅಲ್ಪೋಪಹಾರವನ್ನು ವಿತರಿಸಲಾಯಿತು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande