ಇಂಟರ್ಝೋನ್ ಕರಾಟೆ ಪಂದ್ಯಾವಳಿಗೆ ಆಯ್ಕೆಯಾದ ವಿದ್ಯಾರ್ಥಿಗೆ ಅಭಿನಂದನೆ
ಇಂಟರ್ಝೋನ್ ಕರಾಟೆ ಪಂದ್ಯಾವಳಿಗೆ ಆಯ್ಕೆಯಾದ ವಿದ್ಯಾರ್ಥಿಗೆ ಅಭಿನಂದನೆ
ಕೋಲಾರದ ನಗರದ ಶಂಕರ ವಿದ್ಯಾಲಯದಲ್ಲಿ ಕೋಲಾರದ ಇಕೋವಶಿ ಕರಾಟೆ ಶಾಲೆಯ ವತಿಯಿಂದ ಬೆಲ್ಟ್ ಗ್ರೇಡಿಂಗ್ ಎಕ್ಸಾಮ್ ಹಾಗೂ ದೆಹಲಿಯಲ್ಲಿ ಡಿ.೧೨ ರಂದು ನಡೆಯುವ ಇಂಟರ್ಝೋನ್ ಕರಾಟೆ ಪಂದ್ಯಾವಳಿಯಲ್ಲಿ ಭಾಗವಹಿಸಲು ಕೋಲಾರದಿಂದ ಪ್ರಪ್ರಥಮ ಬಾರಿಗೆ ಆಯ್ಕೆಯಾಗಿರುವ ನಗರದ ಚಿನ್ಮಯ ವಿದ್ಯಾಲಯದ ಮಹಂತ್ ವಿ.ಆರ್ ಹಾಗೂ ಪನ್ವಿತ್ ರವರನ್ನು ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ ಸನ್ಮಾನಿಸಿದರು.


ಕೋಲಾರ, ೨೪ ನವೆಂಬರ್ (ಹಿ.ಸ) :

ಆ್ಯಂಕರ್ : ನಗರದ ಶಂಕರ ವಿದ್ಯಾಲಯದಲ್ಲಿ ಕೋಲಾರದ ಇಕೋವಶಿ ಕರಾಟೆ ಶಾಲೆಯ ವತಿಯಿಂದ ಬೆಲ್ಟ್ ಗ್ರೇಡಿಂಗ್ ಎಕ್ಸಾಮ್ ಹಾಗೂ ದೆಹಲಿಯಲ್ಲಿ ಡಿ.೧೨ ರಂದು ನಡೆಯುವ ಇಂಟರ್ಝೋನ್ ಕರಾಟೆ ಪಂದ್ಯಾವಳಿಯಲ್ಲಿ ಭಾಗವಹಿಸಲು ಕೋಲಾರದಿಂದ ಪ್ರಪ್ರಥಮ ಬಾರಿಗೆ ಆಯ್ಕೆಯಾಗಿರುವ ನಗರದ ಚಿನ್ಮಯ ವಿದ್ಯಾಲಯದ ಮಹಂತ್ ವಿ.ಆರ್ ಹಾಗೂ ಪನ್ವಿತ್ ರವರನ್ನು ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ ಸನ್ಮಾನಿಸಿ ಪ್ರೋತ್ಸಾಹಧನ ನೀಡಿದರು.

ಇದೇ ಸಮಯದಲ್ಲಿ ಸಹನಾ, ಅನನ್ಯ ,ಸಾಯಿ ವಿಷ್ಣು ರೆಡ್ಡಿ, ಆಕಾಶ್, ಜನಿತ್ ಹಾಗೂ ಹಿತೇಶ್ ಬ್ಲಾಕ್ ಬೆಲ್ಟ್ ಗಳನ್ನು ಪಡೆದುಕೊಂಡರು. ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ದಲಿತ ನಾರಾಯಣಸ್ವಾಮಿ ರಾಜ್ಯಾಧ್ಯಕ್ಷರು ಭಾರತೀಯ ದಲಿತ ಸೇನಾ ಸಮಿತಿ,ಮುರಳಿ ಮೋಹನ್, ಜಿಲ್ಲಾ ನೌಕರರ ಸಂಘದ ಖಜಾಂಚಿ ಹಾಗೂ ಜಿಲ್ಲಾಧ್ಯಕ್ಷರು ದೈಹಿಕ ಶಿಕ್ಷಕರ ಸಂಘ ಕೋಲಾರ, ರಾಜೇಶ್ ಬಾಬು ಜಂಟಿ ಕಾರ್ಯದರ್ಶಿ ಕೋಲಾರ ಅಥ್ಲೆಟಿಕ್ ಅಸೋಸಿಯೇಷನ್ ಹಾಗೂ ಪುರುಷೋತ್ತಮ್, ಖಜಾಂಚಿ ಕೋಲಾರ ಅಥ್ಲೆಟಿಕ್ ಅಸೋಸಿಯೇಷನ್ ರವರು ಪಾಲ್ಗೊಂಡಿದ್ದರು.

ನ್ಯಾಷನಲ್ ಜಡ್ಜ್ ಆದಂತಹ ಸಂಪತ್ ಕುಮಾರ್ ರವರು ಆಗಮಿಸಿ ಕರಾಟೆಪಟುಗಳಿಗೆ ಕುಮಿತೆ ಹಾಗೂ ಕಟ್ಟಾ ಸೆಮಿನಾರನ್ನು ಅರ್ಥಪೂರ್ಣವಾಗಿ ನಡೆಸಿಕೊಟ್ಟರು. ಕರಾಟೆ ಶಿಕ್ಷಕರಾದಂತಹ ಯಲ್ಲಪ್ಪ, ನಾಗರಾಜ್ ಹಾಗು ದೀಪಕ್ ಉಪಸ್ಥಿತರಿದ್ದರು.

ಚಿತ್ರ : ಕೋಲಾರದ ನಗರದ ಶಂಕರ ವಿದ್ಯಾಲಯದಲ್ಲಿ ಕೋಲಾರದ ಇಕೋವಶಿ ಕರಾಟೆ ಶಾಲೆಯ ವತಿಯಿಂದ ಬೆಲ್ಟ್ ಗ್ರೇಡಿಂಗ್ ಎಕ್ಸಾಮ್ ಹಾಗೂ ದೆಹಲಿಯಲ್ಲಿ ಡಿ.೧೨ ರಂದು ನಡೆಯುವ ಇಂಟರ್ಝೋನ್ ಕರಾಟೆ ಪಂದ್ಯಾವಳಿಯಲ್ಲಿ ಭಾಗವಹಿಸಲು ಕೋಲಾರದಿಂದ ಪ್ರಪ್ರಥಮ ಬಾರಿಗೆ ಆಯ್ಕೆಯಾಗಿರುವ ನಗರದ ಚಿನ್ಮಯ ವಿದ್ಯಾಲಯದ ಮಹಂತ್ ವಿ.ಆರ್ ಹಾಗೂ ಪನ್ವಿತ್ ರವರನ್ನು ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ ಸನ್ಮಾನಿಸಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande