ವಿಕಲಚೇತನರ ಜಿಲ್ಲಾ ಮಟ್ಟದ ಕ್ರೀಡಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ
ಗದಗ, 24 ನವೆಂಬರ್ (ಹಿ.ಸ.) : ಆ್ಯಂಕರ್ : ವಿಶ್ವ ವಿಕಲಚೇತನರ ದಿನಾಚರಣೆ-2025ರ ಪ್ರಯುಕ್ತ ವಿಕಲಚೇತನರಿಗಾಗಿ ಜಿಲ್ಲಾ ಮಟ್ಟದ ಕ್ರೀಡಾ ಹಾಗೂ ಸಾಂಸ್ಕöÈತಿಕ ಕಾರ್ಯಕ್ರಮಕ್ಕೆ ಕೆ.ಎಚ್.ಪಾಟಿಲ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ ಎಸ್ ಶಿವನಗೌಡ ಚಾಲನೆ
ಫೋಟೋ


ಗದಗ, 24 ನವೆಂಬರ್ (ಹಿ.ಸ.) :

ಆ್ಯಂಕರ್ : ವಿಶ್ವ ವಿಕಲಚೇತನರ ದಿನಾಚರಣೆ-2025ರ ಪ್ರಯುಕ್ತ ವಿಕಲಚೇತನರಿಗಾಗಿ ಜಿಲ್ಲಾ ಮಟ್ಟದ ಕ್ರೀಡಾ ಹಾಗೂ ಸಾಂಸ್ಕöÈತಿಕ ಕಾರ್ಯಕ್ರಮಕ್ಕೆ ಕೆ.ಎಚ್.ಪಾಟಿಲ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ ಎಸ್ ಶಿವನಗೌಡ ಚಾಲನೆ ನೀಡಿದರು.

ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜಿಲ್ಲೆಯಲ್ಲಿ ವಿಕಲಚೇತನರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಘ-ಸಂಸ್ಥೆಗಳು ಇವರುಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ವಿಕಲಚೇತನರ ದಿನಾಚರಣೆ-2025ರ ಪ್ರಯುಕ್ತ ವಿಕಲಚೇತನರಿಗಾಗಿ ಜಿಲ್ಲಾ ಮಟ್ಟದ ಕ್ರೀಡಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಜಿಲ್ಲಾ ಕ್ರೀಡಾಂಗಣದಲ್ಲಿ ಚಾಲನೆ ನೀಡಿ ಮಾತನಾಡಿದರು.

ವಿಕಲಚೇತನರ ಮಕ್ಕಳ ಹಕ್ಕುಗಳಿಗೆ ಚ್ಯುತಿ ಬರದಂತೆ ಎಚ್ಚರವಹಿಸಿ ಕಾನೂನಿನ ಅಡಿಯಲ್ಲಿ ಸಿಗುವ ಕಾನೂನು ನೇರವು, ಕಾನೂನಿನ ಮೂಲಕ ನಿಮಗೆ ಸಿಗುವ ಸಹಾಯ ಸಹಕಾರವನ್ನು ಕಾನೂನು ಪ್ರಾಧಿಕಾರದಿಂದ ನಮ್ಮ ಸಹಕಾರವಿರುತ್ತದೆ ಎಂದರು. ವಿಕಲಚೇತನರ ಮಕ್ಕಳ ಸಂಬದಿಸಿದ ಸೌಲಬ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಲು ಕರೆ ನೀಡಿದರು

ವಿಕಲಚೇತನರ ಕಲ್ಯಾಣಧಿಕಾರಿ ಮಾಂತೇಶ ಕೆ, ಮಾತನಾಡಿ ಸಾಮಾಜಿಕ ಪ್ರಗತಿಯನ್ನು ಸಾಧಿಸಲು ವಿಕಲಚೇತನರನ್ನು ಒಳಗೊಂಡ ಸಮಾಜಗಳನ್ನು ರೂಪಿಸುವುದು ಘೋಷವಾಕ್ಯವಾಗಿದೆ ಎಂದರು. ಈ ಕ್ರೀಡೆಯಲ್ಲಿ ಪುರುಷ, ಮಹಿಳೆ, ಹಲವಾರು ಶಾಲಾ ಮಕ್ಕಳು ಸ್ವಯಮ ಸೇವಾ ಸಂಸ್ಥೆಯ ಮಕ್ಕಳು ಸೆರಿದಂತೆ ಒಟ್ಟು 250 ವಿಕಲಚೇತನರ ಮಕ್ಕಳು ಬಾಗಿಯಾಗಿದ್ದಾರೆ ಎಂದರು.

ಕ್ರೀಡೆ ಮನುಷ್ಯನ ಅವಿಬಾಜ್ಯ ಅಂಗವಾಗಿದೆ. ಎಮ್ ಆರ್ ಮಕ್ಕಳು ಅವಲಂಬಿತ ರಾಗಬಾರದು ಸ್ಕಿಲ್ ಬೇಸ ತರಬೇತಿಯಿಂದ ನೀವು ಸ್ವಾಲಂಬಿಗಳಾಗಬೆಕೆಂದರು, ತಂದೆ ತಾಯಿ ಜೊತೆಗೆ ಸಂಪೂರ್ಣವಾಗಿ ಅವಲಂಬಿತವಗಬಾರದು ಮತ್ತು ಎಮ್ ಆರ್ ಮಕ್ಕಳನ್ನು ಮುಖ್ಯವಾಹಿನಿಗೆ ತರಲು ಪಾಲಕರ ಪೋಷಕರ ಪಾತ್ರ ಮಹತ್ವದಾಗಿದೆ ಎಂದರು

ಈ ಸಂದರ್ಬದಲ್ಲಿ ಕ್ರಿಡಾ ಇಲಾಖೆ ಸಹಾಯಕ ನಿರ್ದೇಶಕರು ಡಾ. ಶರಣು ಗೂಗೇರಿ, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಉಪನಿದೇಶಕ ಆರ್ ಎಸ್ ಬುರಡಿ ಸೇರಿದಂತೆ ಹಲವರು ಹಾಜರಿದ್ದರು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande