
ಗದಗ, 24 ನವೆಂಬರ್ (ಹಿ.ಸ.) :
ಆ್ಯಂಕರ್ : ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಒಂದು ವೇಳೆ ಸಿ.ಎಮ್ ಸ್ಥಾನಕ್ಕೆ ರಾಜಿನಾಮೆ ಕೊಟ್ಟರೆ ತೆರವಾಗಲಿರುವ ಮುಖ್ಯಮಂತ್ರಿ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದ ಹಿರಿಯ ಧುರೀಣರಾದ ಎಚ್ ಕೆ ಪಾಟೀಲರನ್ನೇ ಮುಖ್ಶಮಂತ್ರಿಗಳನ್ನಾಗಿ ಆಯ್ಕೆ ಮಾಡಲೇಬೇಕು ಯಾಕಂದರೆ ಹಿರಿಯರಾದ ಎಚ್.ಕೆ. ಪಾಟೀಲ ಅವರ ತಂದೆ ದಿ. ಕೆ.ಎಚ್. ಪಾಟೀಲರಿಗೂ ಸಹ ಮುಖ್ಯಮಂತ್ರಿ ಸ್ಥಾನ ಒಲಿದು ಬಂದಿತ್ತು.
ಆದರೆ ಅಂದಿನ ಪಕ್ಷದ ರಾಷ್ಟ್ರೀಯ ನಾಯಕರಾದ ರಾಜೀವ ಗಾಂಧಿ ಅವರು ದಿ.ಬಂಗಾರಪ್ಪ ಅವರಿಗೆ ಬಿಟ್ಟುಕೊಡುವಂತೆ ಸೂಚಿಸಿದಾಗ ಮರು ಮಾತನಾಡದೇ ಪಕ್ಷದ ಹಿತಕ್ಕಾಗಿ ಮುಖ್ಯಮಂತ್ರಿ ಸ್ಥಾನ ತ್ಯಾಗ ಮಾಡಿದ್ದನ್ನು ಗಂಭೀರವಾಗಿ ಇಂದು ಪರಿಗಣಿಸಬೇಕು ಸಧ್ಯ ಮತ್ತೋಮ್ಮೆ ಮುಖ್ಯಮಂತ್ರಿ ಸ್ಥಾನ ಒಲಿದು ಬಂದಿದೆ ಇಗಲಾದರೂ ಕಾಂಗ್ರೆಸ್ ವರಿಷ್ಠರುಗಳು ಯಾವುದರಲ್ಲಿ ಕಡಿಮೆ ಇಲ್ಲದ ಕಾಂಗ್ರೇಸ್ಸಿನ ಹಿರಿಯ ಧುರಿಣರಾದ ಎಚ್.ಕೆ. ಪಾಟೀಲರಿಗೆ ರಾಜ್ಯದ ಮುಖ್ಯಮಂತ್ರಿ ಸ್ಥಾನ ಆದ್ಯತೆ ನೀಡಬೇಕು ಮತ್ತು ರೋಣ ಮತಕ್ಷೇತ್ರದ ಹಿರಿಯ ಶಾಸಕರಾದ ಜಿ.ಎಸ್.ಪಾಟೀಲರಿಗೆ ಅತ್ಯೂನ್ನತ ಸಚೀವ ಸ್ಥಾನ ನಿಡಬೆಕೇಂದು ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಕೃಷ್ಣಾ ಎಚ್ ಹಡಪದ ಅವರು ಹಾಗೂ ಸಾಮಾಜಿಕ ಕಾರ್ಯಕರ್ಥರಾದ ಅಬ್ದುಲಮುನಾಫ ಮುಲ್ಲಾ ಅವರು ಕಾಂಗ್ರೆಸ್ ವರಿಷ್ಠರಿಗೆ ಒತ್ತಾಯಿಸಿ ಆಗ್ರಹಿಸಿದ್ದಾರೆ
ಪತ್ರಿಕಾ ಹೇಳಿಕೆ ನಿಡಿರೂವ ಅವರುಗಳು ಗದಗಿನ ಅಭಿವೃಧ್ದಿಯ ಹರಿಕಾರರಾದ ಎಚ್ ಕೆ ಪಾಟೀಲ ಅವರು ಉತ್ತರ ಕರ್ನಾಟಕದ. ಸಮರ್ಥ ಹಾಗೂ ಮುತ್ಸದ್ದಿ ನಾಯಕರು ಗದಗ ಮತಕ್ಷೆತ್ರದ ಜನಪ್ರೀಯ ಶಾಸಕರು ಹಾಗೂ ಕಾನೂನು ನ್ಯಾಯ ಮಾನವ ಹಕ್ಕುಗಳು ಸಂಸದೀಯ ವ್ಯವಹಾರಗಳು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚೀವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚೀವರು ಕಾಂಗ್ರೆಸ್ ಪಕ್ಷದ ಎಐಸಿಸಿ ಖಾಯಂ ಸದಸ್ಯರು ಗ್ರಾಮೀಣಾಭಿವೃದ್ಧಿ, ಜಲಸಂಪನ್ಮೂಲ,ಜವಳಿ ಕಾನೂನು ,ಕೃಷಿ ಇನ್ನು ಅನೇಕ ಖಾತೆಗಳನ್ನು ನಿರ್ವಹಿಸಿ ಹಾಗೂ ವಿಧಾನ ಪರಿಷತ್ ವಿಪಕ್ಷ ನಾಯಕರಾಗಿ ಸಮರ್ಥವಾಗಿ ಕಾರ್ಯ ನಿರ್ವಹಿಸಿ ಶಾಸಕರಾಗಿ ಸಚಿವರಾಗಿ ಅನೇಕ ಜನಪರ ಯೋಜನೆಗಳಿಂದ ಡಾಕ್ಟರೇಟ್ ಪದವಿಗೆ ಭಾಜನರಾದ ಸರಳ ಸಜ್ಜನಿಕೆಯ ರಾಜಕಾರಣಿ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಕಪ್ಪು ಚುಕ್ಕೆ ಇಲ್ಲದಂತಹ ರಾಜಕಾರಣಿ ಅಂದರೆ ಅಜಾತಶತ್ರು ಡಾ// ಎಚ್.ಕೆ ಪಾಟೀಲರು ಎಂದರೆ ತಪ್ಪಾಗಲಾರದು ಮತ್ತು ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷರು ರೋಣ ಶಾಸಕರು ಆದ ಸನ್ಮಾನ್ಯ ಜಿ.ಎಸ್.ಪಾಟೀಲ ಅವರಿಗೆ ರಾಜ್ಯದ ಅತ್ಯೂನ್ನತ ಸಚಿವ ಸ್ಥಾನವನ್ನು ಕೊಡಲೆಬೇಕು ಯಾಕೆಂದರೆ ಅವರು ಪುರಸಭೆ ಅಧ್ಯಕ್ಷರಾಗಿ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿ ಕೆಪಿಸಿಸಿಯಲ್ಲಿ ಪದಾಧಿಕಾರಿಗಳಾಗಿ ಸದ್ಯ ಗದಗ ಜಿಲ್ಲೆ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷರಾಗಿ ಕಪ್ಪುಚಿಕ್ಕೆ ಇಲ್ಲದಂತೆ ಪ್ರಾಮಾಣಿಕವಾಗಿ ಜನಸೇವೆ ಮಾಡುತ್ತಿದ್ದಾರೆ ಹೀಗೆ ಅವರು ಸತತ ನಲವತ್ತು ವರ್ಷಗಳ ಕಾಲ ಸರ್ವ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವಿರತವಾಗಿ ಪಕ್ಷವನ್ನು ಕಟ್ಟಿ ಸದೃಡಗೊಳಿಸಿದ್ದಾರೆ ಎಂಟು ಬಾರಿ ಚುನಾವಣೆಗೆ ಸ್ಪರ್ಧಿಸಿ ಐದು ಸಾರಿ ಗೆಲುವನ್ನು ಕಂಡ ಹಿರಿಯ ಮುತ್ಸದ್ದಿ ಪಕ್ಷ ನಿಷ್ಠ ರಾಜಕಾರಣಿ ಆಗಿದ್ದಾರೆ ಹಾಗಾಗಿ ಸನ್ಮಾನ್ಯ ಸಿದ್ದರಾಮಯ್ಯನವರು ಸಿ.ಎಮ್ ಸ್ಥಾನಕ್ಕೆ ರಾಜಿನಾಮೆ ಕೊಟ್ಟರೆ ಕಾಂಗ್ರೆಸ್ಸಿನ ಹೀರಿಯ ಧುರಿಣರಾದ ಎಚ್ ಕೆ ಪಾಟೀಲರಿಗೆ ರಾಜ್ಯದ ಮುಂದಿನ ಮುಖ್ಯಮಂತ್ರಿ ಸ್ಥಾನ ಆದ್ಯತೆ ನೀಡಬೇಕು ಮತ್ತು ರೋಣ ಮತಕ್ಷೇತ್ರದ ಹಿರಿಯ ಶಾಸಕರಾದ ಜಿ.ಎಸ್.ಪಾಟೀಲರಿಗೆ ಅತ್ಯೂನ್ನತ ರಾಜ್ಯ ಸಚೀವ ಸ್ಥಾನ ನಿಡಬೇಕೇಂದು ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಶಕ್ಷರಾದ ಕೃಷ್ಣಾ ಎಚ್ ಹಡಪದ ಹಾಗೂ ಸಾಮಾಜಿಕ ಕಾರ್ಯಕರ್ಥರಾದ ಅಬ್ದುಲಮುನಾಫ ಮುಲ್ಲಾ ಅವರು ಸನ್ಮಾನ್ ರಾಹೂಲ ಗಾಂದಿ. ಸೋನಿಯಾ ಗಾಂದಿ. ಮತ್ತು ಹಿರಿಯರಾದ ಮಲ್ಲಿಕಾರ್ಜುನ ಖರ್ಗೆಯವರು ಆದಿಯಾಗಿ ಕಾಂಗ್ರೆಸ್ ಸಮಸ್ತ ವರಿಷ್ಠರಿಗೆ ಒತ್ತಾಯಿಸಿ ಆಗ್ರಹಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / lalita MP