ಸಿರುಗುಪ್ಪ : ಹಾಳು ಮುರುವಣೆಯ ಸಿ.ಹೆಚ್.ಮಹಾಕಾಳಿ ರಾಜುಗೆ `ಶ್ರೇಷ್ಠ ಮೀನು ಕೃಷಿಕ’ ಪ್ರಶಸ್ತಿ
ಸಿರುಗುಪ್ಪ, 24 ನವೆಂಬರ್ (ಹಿ.ಸ.) : ಆ್ಯಂಕರ್ : ಸಿರುಗುಪ್ಪ ತಾಲ್ಲೂಕಿನ ಹಾಳು ಮುರುವಣೆ ಗ್ರಾಮದ ಸಿ.ಹೆಚ್. ಮಹಾಕಾಳಿ ರಾಜು ಅವರಿಗೆ 2025-26 ನೇ ಸಾಲಿನ `ಶ್ರೇಷ್ಠ ಮೀನು ಕೃಷಿಕ’ ಪ್ರಶಸ್ತಿ ಲಭಿಸಿದೆ. ಬೆಂಗಳೂರಿನ ಹೆಬ್ಬಾಳದ ಪಶುವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿ ನಡೆದ ಮ
ಸಿರುಗುಪ್ಪ : ಹಾಳು ಮುರುವಣೆಯ ಸಿ.ಹೆಚ್.ಮಹಾಕಾಳಿ ರಾಜುಗೆ  `ಶ್ರೇಷ್ಠ ಮೀನು ಕೃಷಿಕ’ ಪ್ರಶಸ್ತಿ


ಸಿರುಗುಪ್ಪ, 24 ನವೆಂಬರ್ (ಹಿ.ಸ.) :

ಆ್ಯಂಕರ್ : ಸಿರುಗುಪ್ಪ ತಾಲ್ಲೂಕಿನ ಹಾಳು ಮುರುವಣೆ ಗ್ರಾಮದ ಸಿ.ಹೆಚ್. ಮಹಾಕಾಳಿ ರಾಜು ಅವರಿಗೆ 2025-26 ನೇ ಸಾಲಿನ `ಶ್ರೇಷ್ಠ ಮೀನು ಕೃಷಿಕ’ ಪ್ರಶಸ್ತಿ ಲಭಿಸಿದೆ.

ಬೆಂಗಳೂರಿನ ಹೆಬ್ಬಾಳದ ಪಶುವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿ ನಡೆದ ಮತ್ಸ್ಯ ಮೇಳ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಸಿ.ಹೆಚ್.ಮಹಾಕಾಳಿ ರಾಜು ಅವರು 2012-13ನೇ ಸಾಲಿನಿಂದ ಇಲ್ಲಿಯವರೆಗೆ ಸುಮಾರು 50 ಎಕರೆ ಸ್ವಂತ ಜಮೀನಿನಲ್ಲಿ ಮೀನು ಕೃಷಿ ಕೊಳಗಳನ್ನು ನಿರ್ಮಿಸಿಕೊಂಡು ಪ್ರತಿ ಎಕರೆ ವಿಸ್ತೀರ್ಣದ ಮೀನುಕೊಳದಲ್ಲಿ 4.5 ರಿಂದ 5.0 ಟನ್ ನಂತೆ ಒಟ್ಟು 225 ಟನ್ ಮೀನನ್ನು ಉತ್ಪಾದನೆ ಮಾಡಿದ್ದಾರೆ. ಪ್ರತಿ ವರ್ಷ ಕನಿಷ್ಠ 1.0 ಕೋಟಿಯಷ್ಟು ನಿವ್ವಳ ಲಾಭ ಪಡೆಯುತ್ತಾ ಜಿಲ್ಲೆಯ ಯಶಸ್ವಿ ಮೀನು ಕೃಷಿಕ ಎಂದೆನಿಸಿಕೊಂಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande