ನಕಲಿ ದಾಖಲೆ ಸೃಷ್ಟಿ ಮಾಡುತ್ತಿದ್ದ ಆಸಾಮಿ ಬಂಧನ
ಗದಗ, 24 ನವೆಂಬರ್ (ಹಿ.ಸ.) : ಆ್ಯಂಕರ್ : ಸರ್ಕಾರಿ ದಾಖಲೆ ಪಡೆಯೋದು ಸಾಮಾನ್ಯ ಜನರಿಗೆ ತಲೆನೋವು. ಆದರೆ ಗದಗ–ಬೆಟಗೇರಿ ಅವಳಿ ನಗರದಲ್ಲಿ ರಾಘವೇಂದ್ರ ಕಬಾಡಿ ಎಂಬ ‘ಕಿಲಾಡಿ’ ಆಸಾಮಿ ಹತ್ತಿರ ಹೋದ್ರೆ ಸಾಕು ಯಾವ ಸರ್ಕಾರಿ ದಾಖಲೆ ಬೇಕಾದರೂ ಕ್ಷಣಗಳಲ್ಲಿ ರೆಡಿ! ಡ್ರೈವಿಂಗ್ ಅರಿವಿರದವರಿಗೂ ಡ್ರೈವಿಂಗ್ ಲೈ
ಫೋಟೋ


ಗದಗ, 24 ನವೆಂಬರ್ (ಹಿ.ಸ.) :

ಆ್ಯಂಕರ್ : ಸರ್ಕಾರಿ ದಾಖಲೆ ಪಡೆಯೋದು ಸಾಮಾನ್ಯ ಜನರಿಗೆ ತಲೆನೋವು. ಆದರೆ ಗದಗ–ಬೆಟಗೇರಿ ಅವಳಿ ನಗರದಲ್ಲಿ ರಾಘವೇಂದ್ರ ಕಬಾಡಿ ಎಂಬ ‘ಕಿಲಾಡಿ’ ಆಸಾಮಿ ಹತ್ತಿರ ಹೋದ್ರೆ ಸಾಕು ಯಾವ ಸರ್ಕಾರಿ ದಾಖಲೆ ಬೇಕಾದರೂ ಕ್ಷಣಗಳಲ್ಲಿ ರೆಡಿ! ಡ್ರೈವಿಂಗ್ ಅರಿವಿರದವರಿಗೂ ಡ್ರೈವಿಂಗ್ ಲೈಸೆನ್ಸ, ಕಾಲೇಜು ಮೆಟ್ಟಿಲೇ ಹತ್ತದವರಿಗೂ ಡಿಗ್ರಿ ಸರ್ಟಿಫಿಕೇಟ್ ದಾಖಲೆಗಳೇ ಇಲ್ಲದವರಿಗೂ ಆಧಾರ್ ಕಾರ್ಡ್ ಎಲ್ಲವೂ ಈತನ ‘ಸ್ಪೆಷಾಲಿಟಿ’.

ಗದಗ ನಗರದ ಹಾತಲಗೇರಿ ನಾಕಾದಲ್ಲಿ ‘ಡಿಜಿಟಲ್ ಸ್ಟುಡಿಯೋ’ ಹೆಸರಿನಲ್ಲಿ ನಕಲಿ ದಾಖಲೆಗಳ ಅಡ್ಡವನ್ನು ನಡೆಸುತ್ತಿದ್ದ ರಾಘವೇಂದ್ರ, ಅಧಿಕ ಹಣಕ್ಕೆ ಬೇಕಾದ ಯಾವುದೇ ಕಾರ್ಡ್ ಸೃಷ್ಟಿ ಮಾಡಿ ಕೊಡುತ್ತ ಬಂದಿದ್ದಾನೆ. ಹಲವು ವರ್ಷಗಳಿಂದ ಈ ಕಾಳಧಂಧೆ ನಡೆಯುತ್ತಿದ್ದರೂ, ಅಧಿಕೃತರಿಗೆ ಮಾಹಿತಿ ಸಿಗದೇ ಉಳಿದಿತ್ತು.

ಕೊನೆಗೂ ಗುಪ್ತ ಮಾಹಿತಿ ಆಧರಿಸಿ ಬೆಟಗೇರಿ ಬಡಾವಣೆ ಪೊಲೀಸರು ಸಾಮಾನ್ಯ ಗ್ರಾಹಕರಂತೆ ಸ್ಟುಡಿಯೋಗೆ ತೆರಳಿ ನಕಲಿ ದಾಖಲೆ ಮಾಡಿಸಿಕೊಳ್ಳಲು ಯತ್ನಿಸಿದಾಗ ರಾಘವೇಂದ್ರನ ಅಸಲಿ ಮುಖವಾಡ ಬಯಲಾಗುತ್ತದೆ. ತಕ್ಷಣವೇ ಪೋಲಿಸ್ ತಂಡ ದಾಳಿ ನಡೆಸಿ, ಕಂಪ್ಯೂಟರ್, ಪ್ರಿಂಟರ್, ಲ್ಯಾಮಿನೇಟರ್, ಮೇಕಿಂಗ್ ಸಾಫ್ಟ್‌ವೇರ್ ಹಾಗೂ ಈಗಾಗಲೇ ತಯಾರಾಗಿದ್ದ ಹಲವಾರು ನಕಲಿ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಮಾರ್ಕ್ಸ್ ಕಾರ್ಡ್, ಖಾಸಗಿ ಹುದ್ದೆಗಳಿಗೆ ಬೇಕಾಗುವ ಐಡಿ ಕಾರ್ಡ್ ಸೇರಿದಂತೆ ಹಲವು ಇಲಾಖೆಗಳಿಗೆ ಸಂಬಂಧಿಸಿದ ನಕಲಿ ದಾಖಲೆಗಳನ್ನು ಸೃಷ್ಟಿಸಿ ಹೆಚ್ಚಿನ ಹಣಕ್ಕೆ ಮಾರಾಟ ಮಾಡುತ್ತಿದ್ದುದಾಗಿ ಪ್ರಾಥಮಿಕ ವಿಚಾರಣೆಯಲ್ಲಿ ತಿಳಿದುಬಂದಿದೆ. ಈಗಾಗಲೇ ಎಷ್ಟು ಮಂದಿಗೆ ನಕಲಿ ದಾಖಲೆ ನೀಡಿದ್ದಾನೆ? ಆ ದಾಖಲೆಗಳು ದುರುಪಯೋಗಕ್ಕೆ ಒಳಗಾಗಿದ್ದೆಯೇ? ಹಿನ್ನಲೆಯಲ್ಲಿ ಇನ್ನೂ ಯಾರಾದರೂ ಜಾಲದಲ್ಲಿ ಭಾಗಿಯಾಗಿದರೇ? ಎಂಬ ಅಂಶಗಳ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಸಂಕಟದಲ್ಲಿರುವುದು ನಕಲಿ ದಾಖಲೆ ಮಾಡಿಸಿಕೊಂಡವರೇ. ಪೊಲೀಸರು ವಶಪಡಿಸಿಕೊಂಡ ದಾಖಲೆಗಳಲ್ಲಿ ಹಲವು ಹೆಸರುಗಳು ದೊರಕಿದ ಕಾರಣ, ತನಿಖೆ ಮುಂದುವರಿದಂತೆ ಇನ್ನಷ್ಟು ಅಂಶಗಳು ಬೆಳಕಿಗೆ ಬರಬಹುದೆಂಬ ನಿರೀಕ್ಷೆ ಇದೆ.

ಎಸ್ಪಿ ಅವರು, “ಇದು ಸಮಾಜಕ್ಕೆ ಅಪಾಯಕಾರಿಯಾದ ಕೃತ್ಯ. ಸಮಗ್ರ ತನಿಖೆ ನಡೆಸಿ, ನಕಲಿ ದಾಖಲೆ ಜಾಲದ ಸಂಪೂರ್ಣ ಬಯಲುಗೆಳೆಯುತ್ತೇವೆ,” ಎಂದು ತಿಳಿಸಿದ್ದಾರೆ.

ಹಲವು ವರ್ಷಗಳಿಂದ ಅಡಗಿಕೊಂಡು ನಡೆದಿದ್ದ ಈ ದೊಡ್ಡ ಮಟ್ಟದ ನಕಲಿ ದಾಖಲೆ ಜಾಲವನ್ನು ಭೇದಿಸಿದ್ದಾರೆ. ಇದು ಸಾರ್ವಜನಿಕರಿಂದ ಮೆಚ್ಚುಗೆ ಕಾರಣವಾಗಿದೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande