ವಿಜ್ಞಾನ, ತಂತ್ರಜ್ಞಾನ ರಂಗದಲ್ಲೂ ಮಹಿಳೆಯರ ಸಾಧನೆಗೆ ಕರೆ
ವಿಜ್ಞಾನ,ತಂತ್ರಜ್ಞಾನ ರಂಗದಲ್ಲೂ ಮಹಿಳೆಯರು ಸಾಧನೆಗೆ ಕರೆ
ಚಿತ್ರ : ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ, ಮಂಗಸಂದ್ರದ ಸುವರ್ಣಗಂಗೆ ಆವರಣದಲ್ಲಿ ಪಿಎಂ-ಉಷಾ ಯೋಜನೆಯಡಿ ಬ್ರೇಕಿಂಗ್ ಬ್ಯಾರಿಯರ್ಸ್: ವುಮೆನ್ ಲೀಡಿಂಗ್ ಇನೋವೇಶನ್ ಇನ್ ಸೈನ್ಸ್ ಮತ್ತು ಟೆಕ್ನಾಲಜಿ ಎಂಬ ಶೀರ್ಷಿಕೆಯಡಿ ಹಮ್ಮಿಕೊಂಡಿದ್ದ ಒಂದು ದಿನದ ರಾಷ್ಟೀಯ ವಿಚಾರ ಸಂಕಿರಣವನ್ನು ಬೆಂಗಳೂರು ಉತ್ತರ ವಿವಿ ಮಂಗಸಂದ್ರದ ಸ್ನಾತಕೋತ್ತರ ಕೇಂದ್ರದ ನಿರ್ದೇಶಕಿ ಪ್ರೊ.ಕುಮುದಾ ಉದ್ಘಾಟಿಸಿ ಮಾತನಾಡಿದರು.


ಕೋಲಾರ, ೨೦ ನವಂಬರ್ (ಹಿ.ಸ.) :

ಆ್ಯಂಕರ್ : ಹೆಣ್ಣು ಮಕ್ಕಳಿಗೆ ಹಿಂದೆ ಶಿಕ್ಷಣ,ಉದ್ಯೋಗಕ್ಕಿದ್ದ ಅಡ್ಡಿ ಇಂದು ನಿವಾರಣೆಯಾಗಿದ್ದು, ಇಂದು ವಿಜ್ಞಾನ ಮತ್ತು ತಂತ್ರಜ್ಞಾನ ರಂಗ ಸೇರಿದಂತೆ ಸಮಾಜದ ಎಲ್ಲಾ ರಂಗಗಳಲ್ಲೂ ತಮ್ಮ ಸಾಮರ್ಥ್ಯ ಪ್ರದರ್ಶಿಸುವ ಮೂಲಕ ಮುಖ್ಯವಾಹಿನಿಗೆ ಬಂದಿದ್ದಾರೆ ಎಂದು ಬೆಂಗಳೂರು ಉತ್ತರ ವಿವಿ ಮಂಗಸಂದ್ರದ ಸ್ನಾತಕೋತ್ತರ ಕೇಂದ್ರದ ನಿರ್ದೇಶಕಿ ಪ್ರೊ.ಕುಮುದಾ ತಿಳಿಸಿದರು.

ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ, ಮಂಗಸಂದ್ರದ ಸುವರ್ಣಗಂಗೆ ಆವರಣದಲ್ಲಿ ಭೌತಶಾಸ್ತ್ರ, ಗಣಿತಶಾಸ್ತ್ರ ಮತ್ತು ಗಣಕವಿಜ್ಞಾನ ವಿಭಾಗಗಳ ಸಂಯುಕ್ತಾಶ್ರಯದಲ್ಲಿ, ಪಿಎಂ-ಉಷಾ ಯೋಜನೆಯಡಿ ಬ್ರೇಕಿಂಗ್ ಬ್ಯಾರಿಯರ್ಸ್: ವುಮೆನ್ ಲೀಡಿಂಗ್ ಇನೋವೇಶನ್ ಇನ್ ಸೈನ್ಸ್ ಮತ್ತು ಟೆಕ್ನಾಲಜಿ ಎಂಬ ಶೀರ್ಷಿಕೆಯಡಿ ಹಮ್ಮಿಕೊಂಡಿದ್ದ ಒಂದು ದಿನದ ರಾಷ್ಟೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.

ಮಹಿಳೆಯರನ್ನು ಅಡುಗೆ ಮನೆಗೆ ಸೀಮಿತ ಮಾಡುತ್ತಿದ್ದ ಕಾಲವಿತ್ತು ಆದರೆ ಇಂದು ಸಮಾಜ ಬದಲಾವಣೆಯಾಗಿದೆ ಮಹಿಳೆಯರು ಉದ್ಯೋಗ ಬಯಸಿ ವಿಶ್ವದೆಲ್ಲೆಡೆ ಏಕಾಂಗಿಯಾಗಿ ಹೋಗಿ ಬದುಕುವ ಶಕ್ತಿ ಪಡೆದುಕೊಂಡಿದ್ದಾರೆ, ಮಹಿಳೆಯರು ವಿವಿಧ ರಂಗಗಳಲ್ಲೂ ತಮ್ಮ ಸಾಧನೆಯೊಂದಿಗೆ ನಾವು ಸಮರ್ಥರು ಎಂಬುದನ್ನು ಸಾಬೀತು ಮಾಡಿದ್ದಾರೆ ಎಂದರು.

ಬೆಂಗಳೂರು ವಿವಿಯ ಭೌತಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕಿ ಡಾ. ಎ.ಆರ್.ಉಷಾದೇವಿ ಮುಖ್ಯ ಭಾಷಣ ಕಾರರಾಗಿ ಭಾಗವಹಿಸಿದ್ದು, ಅವಕಾಶಗಳು ಇಲ್ಲದ ಸಂದರ್ಭದಲ್ಲೂ ಭೌತಶಾಸ್ತ್ರ ಅನೇಕ ಮಹಿಳಾ ವಿಜ್ಞಾನಿಗಳ ಸಾಧನೆಯನ್ನು ಪರಿಚಯಿಸಿದ ಅವರು, ನೋಬಲ್ ಬಹುಮಾನ ಪಡೆಯುವ ಮೂಲಕ ಮಹಿಳೆಯರು ಸಾಧಕಿಯರಾಗಿ ಅತಿ ಹಿಂದೆಯೇ ಹೊರ ಬಂದಿದ್ದಾರೆ ಎಂದರು.

ಇದೀಗ ಮಹಿಳೆಯರಿಗೆ ಎಲ್ಲಾ ಸೌಲಭ್ಯಗಳು ಇವೆ ಇಂತಹ ಸಂದರ್ಭದಲ್ಲಿ ಹಿನ್ನಡೆಯ ಮಾತೇ ಇಲ್ಲ, ಮಹಿಳೆಯರು ಸಮಾಜದಲ್ಲಿ ನಾವು ಸಮರ್ಥರು ಎಂದು ಗುರುತಿಸಿಕೊಂಡು ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಭೌತಶಾಸ್ತ್ರದ ಕ್ವಾಂಟಮ್ ಸೈನ್ಸ್ ವಿಷಯದ ಕುರಿತು ಮಾತನಾಡಿದ ಅವರು, ಹಿರಿಯ ವಿಜ್ಞಾನಿಗಳ ಸಾಲಿನಲ್ಲೂ ತಾವು ಮೊದಲಿಗರಾಗಿರುವ ಕುರಿತು ಸಂತಸ ವ್ಯಕ್ತಪಡಿಸಿದ ಅವರು, ಹೆಣ್ಣು ಮಕ್ಕಳು ನಮಗೆ ಸಾಧ್ಯವಿಲ್ಲ ಎಂಬ ಆಲೋಚನೆ ಬದಿಗಿಡಬೇಕು ಎಂದರು.

ಉನ್ನತ ಶಿಕ್ಷಣದಲ್ಲಿ ಸಮಾನತೆ, ನವೀನತೆಯನ್ನು ಉತ್ತೇಜಿಸುವ ಪಿಎಂ-ಉಷಾ ಯೋಜನೆಯ ಗುರಿಗಳ ಅನುಸಾರ, ಈ ವಿಚಾರ ಸಂಕಿರಣದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಮಹಿಳೆಯರ ಕೊಡುಗೆ ಹಾಗೂ ನಾಯಕತ್ವ, ಯುವ ಮಹಿಳಾ ಸಂಶೋಧಕರನ್ನು ವೈಜ್ಞಾನಿಕ ನವೀನತೆ ಮತ್ತು ಸಂಶೋಧನೆಯತ್ತ ಪ್ರೇರೇಪಿಸುವುದು, ಎಸ್ಟಿಇಎಂ ಕ್ಷೇತ್ರಗಳಲ್ಲಿ ಲಿಂಗ ಸಮತೆಯನ್ನು ಪ್ರೋತ್ಸಾಹಿಸುವ ಸಂಬಂಧ ಸವಾಲುಗಳನ್ನು ಚರ್ಚಿಸಲಾಯಿತು.

ಭೌತಶಾಸ್ತ್ರ ವಿಭಾಗದ ಗೋಷ್ಠಿಯಲ್ಲಿ ಬೆಂಗಳೂರು ವಿವಿಯ ಪ್ರಾಧ್ಯಾಪಕರಾದ ಡಾ.ಶರ್ಬರಿ ಭಟ್ಟಾಚಾರ್ಯ, ಧಾರವಾಡದ ನ್ಯಾಷನಲ್ ಫೊರೆನ್ಸಿಕ್ ಸೈನ್ಸ್ ವಿವಿಯ ಸಹಾಯಕ ಪ್ರಾಧ್ಯಾಪಕರಾದ ಡಾ. ಕವಿತಾ ಹನಮರ್ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದರು.

ಗಣಿತಶಾಸ್ತ್ರ ವಿಭಾಗದ ಗೋಷ್ಠಿಯಲ್ಲಿ ಬೆಳಗಾವಿಯ ರಾಣಿ ಚೆನ್ನಮ್ಮ ವಿವಿಯ ಸಹ ಪ್ರಾಧ್ಯಾಪಕರಾದ ಡಾ. ಸುನಿಲ್ ಎಂ. ಹೊಸಮನಿ ಮತ್ತು ಬೆಂಗಳೂರು ವಿವಿಯ ಸಹಾಯಕ ಪ್ರಾಧ್ಯಾಪಕರಾದ ಡಾ. ಸುಗುಂತಾ ದೇವಿ ಸಂಪನ್ಮೂಲ ವ್ಯಕ್ತಿಗಳಾಗಿ ಉಪನ್ಯಾಸ ನೀಡಿದರು.

ಗಣಕವಿಜ್ಞಾನ ವಿಭಾಗದ ಗೋಷ್ಠಿಯಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಹಿರಿಯ ವ್ಯವಸ್ಥಾಪಕರಾದ ಡಾ.ಅರ್ಚನಾ ಹಾಗೂ ಕೆ.ಆರ್. ಪುರಂನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕರಾದ ಪಿ.ಚಂದ್ರಶೇಖರ್ ಸಂಪನ್ಮೂಲ ವ್ಯಕ್ತಿಗಳಾಗಿ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಪಿಎಂ ಉಷಾ ಯೋಜನೆಯ ನೋಡಲ್ ಅಧಿಕಾರಿ ಡಾ.ರಮೇಶ್, ಸಂಯೋಜಕರಾದ ಇಮ್ರಾನ್ ಖಾನ್, ಗಣಿತ ಶಾಸ್ತ್ರ ಉಪನ್ಯಾಸಕರಾದ ಸಿ.ಎಸ್.ಶ್ರೀಲತಾ ನಿರೂಪಿಸಿದ ಕಾರ್ಯಕ್ರಮದಲ್ಲಿ ಭೌತಶಾಸ್ತ್ರ ವಿಭಾಗದ ಉಪನ್ಯಾಸಕರಾದ ಹೆಚ್.ಕೆ. ಲೋಕೇಶ್,ಜಿ.ಎಸ್.ಸುಷ್ಮಾ, ನೇಹಾ,ಗಣಿತ ವಿಭಾಗದ ನಾಗಾರ್ಜುನ್, ಗಣಕ ವಿಜ್ಞಾನ ವಿಭಾಗದ ಶಿಲ್ಪಾ, ಕೀರ್ತನಾ ಮತ್ತಿತರರಿದ್ದು, ಉಪನ್ಯಾಸಕಿ ಮುಬಾರಕ್ತಾಜ್ ಸ್ವಾಗತಿಸಿ, ವಿದ್ಯಾರ್ಥಿನಿಯರಾದ ಮಧುಸ್ಮಿತಾ,ಅನುಷ ಪ್ರಾರ್ಥಿಸಿ, ಉಪನ್ಯಾಸಕಿ ಮಮತಾ ವಂದಿಸಿದರು. ವಿಜ್ಞಾನ ವಿಭಾಗಗಳ ಸ್ನಾತಕೋತ್ತರ ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ಸಂಯೋಜಿತ ಕಾಲೇಜುಗಳ ವಿದ್ಯಾರ್ಥಿಗಳು ಈ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದರು.

ಚಿತ್ರ : ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ, ಮಂಗಸಂದ್ರದ ಸುವರ್ಣಗಂಗೆ ಆವರಣದಲ್ಲಿ ಪಿಎಂ-ಉಷಾ ಯೋಜನೆಯಡಿ ಬ್ರೇಕಿಂಗ್ ಬ್ಯಾರಿಯರ್ಸ್: ವುಮೆನ್ ಲೀಡಿಂಗ್ ಇನೋವೇಶನ್ ಇನ್ ಸೈನ್ಸ್ ಮತ್ತು ಟೆಕ್ನಾಲಜಿ ಎಂಬ ಶೀರ್ಷಿಕೆಯಡಿ ಹಮ್ಮಿಕೊಂಡಿದ್ದ ಒಂದು ದಿನದ ರಾಷ್ಟೀಯ ವಿಚಾರ ಸಂಕಿರಣವನ್ನು ಬೆಂಗಳೂರು ಉತ್ತರ ವಿವಿ ಮಂಗಸಂದ್ರದ ಸ್ನಾತಕೋತ್ತರ ಕೇಂದ್ರದ ನಿರ್ದೇಶಕಿ ಪ್ರೊ.ಕುಮುದಾ ಉದ್ಘಾಟಿಸಿ ಮಾತನಾಡಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande