ಕುಕ್ಕುಟ ಉದ್ಯಮಕ್ಕೆ ಬೇಡಿಕೆ : ಜಿಪಂ ಉಪಕಾರ್ಯದರ್ಶಿ ಶಶಿಕಾಂತ ಶಿವಪೂರೆ
ಬಳ್ಳಾರಿ, 20 ನವೆಂಬರ್ (ಹಿ.ಸ.) : ಆ್ಯಂಕರ್ : ಕುಕ್ಕುಟ ಉದ್ಯಮಕ್ಕೆ ಬಹಳಷ್ಟು ಬೇಡಿಕೆ ಇದ್ದು, ಮಹಿಳೆಯರು ಸರಿಯಾದ ತರಬೇತಿ ಹೊಂದುವ ಮೂಲಕ ಉದ್ಯಮಿಗಳಾಗಬೇಕು ಎಂದು ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಶಶಿಕಾಂತ ಶಿವಪೂರೆ ಅವರು ಹೇಳಿದ್ದಾರೆ. ನಗರದ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ
ಕುಕ್ಕುಟ ಉದ್ಯಮಕ್ಕೆ ಬೇಡಿಕೆ: ಜಿಪಂ ಉಪಕಾರ್ಯದರ್ಶಿ ಶಶಿಕಾಂತ ಶಿವಪೂರೆ


ಕುಕ್ಕುಟ ಉದ್ಯಮಕ್ಕೆ ಬೇಡಿಕೆ: ಜಿಪಂ ಉಪಕಾರ್ಯದರ್ಶಿ ಶಶಿಕಾಂತ ಶಿವಪೂರೆ


ಬಳ್ಳಾರಿ, 20 ನವೆಂಬರ್ (ಹಿ.ಸ.) :

ಆ್ಯಂಕರ್ : ಕುಕ್ಕುಟ ಉದ್ಯಮಕ್ಕೆ ಬಹಳಷ್ಟು ಬೇಡಿಕೆ ಇದ್ದು, ಮಹಿಳೆಯರು ಸರಿಯಾದ ತರಬೇತಿ ಹೊಂದುವ ಮೂಲಕ ಉದ್ಯಮಿಗಳಾಗಬೇಕು ಎಂದು ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಶಶಿಕಾಂತ ಶಿವಪೂರೆ ಅವರು ಹೇಳಿದ್ದಾರೆ.

ನಗರದ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯ ಆವರಣದಲ್ಲಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದಡಿ ರಚಿಸಿರುವ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟಗಳ ಮಹಿಳೆಯರಿಗೆ 13 ದಿನಗಳ ಉಚಿತ ಕೋಳಿ ಸಾಕಾಣಿಕೆ ತರಬೇತಿ ಕಾರ್ಯಕ್ರಮವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಮಹಿಳೆಯರು ತಮ್ಮ ಗ್ರಾಮಗಳಲ್ಲಿ ಕೋಳಿ ಶೆಡ್‍ಗಳನ್ನು ನಿರ್ಮಿಸಲು ಮತ್ತು ಮಹಿಳಾ ಉದ್ಯಮಿಗಳಾಗಲು ಜಿಲ್ಲಾ ಪಂಚಾಯತ್, ಎನ್‍ಆರ್‍ಎಲ್‍ಎಂ ಯೋಜನೆಯ ಸ್ವ-ಸಹಾಯ ಸಂಘದ ಒಕ್ಕೂಟದ ಮಹಿಳೆಯರಿಗೆ ನೆರವು ನೀಡಲಾಗುತ್ತದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮಾರ್ಗದರ್ಶನ ಮಾಡಿದರು.

ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯ ನಿರ್ದೇಶಕ ರಾಜೆಸಾಬ್ ಎಚ್ ಎರಿಮನಿ, ಜಿಪಂ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ರಾಜೇಂದ್ರ, ಉಪನ್ಯಾಸಕರುಗಳಾದ ಜಡೆಪ್ಪ, ಸಿದ್ದಲಿಂಗಮ್ಮ, ಸಂತೋಷ ಕುಮಾರ್, ಪರಮೇಶ ಸೇರಿದಂತೆ ಎನ್‍ಆರ್‍ಎಲ್‍ಎಂ ಸಿಬ್ಬಂದಿಗಳು, ಬಳ್ಳಾರಿ ಜಿಲ್ಲೆಯ 70 ಜನ ಶಿಬಿರಾರ್ಥಿಗಳು ಭಾಗವಹಿಸಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande