ಸೂಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಸ್ತೆಗಳಿಗೆ ೫ ಕೋಟಿ ಅನುದಾನ
ಸೂಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಸ್ತೆಗಳಿಗೆ ೫ ಕೋಟಿ ಅನುದಾನ
ಚಿತ್ರ ; ಹೊನ್ನೇನಹಳ್ಳಿ ಗ್ರಾಪಂ ಪಿಡಿಒ ಹರೀಶ್ ಹಾಗೂ ವಡಗೂರು ಗ್ರಾಪಂ ಪಿಡಿಒ ರಮೇಶ್ ಬಾಬು ವಿರುದ್ದ ತನಿಖೆಗೆ ಒತ್ತಾಯಿಸಿ ಕರ್ನಾಟಕ ರಿಪಬ್ಲಿಕನ್ ಸಂಘಟನೆಯ ನೇತೃತ್ವದಲ್ಲಿ ಕೋಲಾರ ಜಿಲ್ಲಾ ಪಂಚಾಯತಿ ಮುಂಭಾಗ ಪ್ರತಿಭಟನೆ ನಡೆಸಿ ಜಿಪಂ ಉಪ ಕಾರ್ಯದರ್ಶಿ ರಮೇಶ್ ಅವರಿಗೆ ಮನವಿಸಲ್ಲಿಸಿ ಒತ್ತಾಯಿಸಿದರು.


ಕೋಲಾರ, ೨೦ ನವಂಬರ್ (ಹಿ.ಸ.) :

ಆ್ಯಂಕರ್ : ತಲಗುಂದ ಗೇಟ್ ನಿಂದ ನುಗ್ಗಲಾಪುರ ವರೆಗಿನ ಸಂಪರ್ಕ ಕಲ್ಪಿಸುವ ರಸ್ತೆಗೆ ೧.೫೦ ಕೋಟಿ ವೆಚ್ಚದ ಡಾಂಬರೀಕರಣ ಕಾಮಗಾರಿಗೆ ಚಲ್ಲಹಳ್ಳಿ ಗ್ರಾಮದಲ್ಲಿ ಗುರುವಾರ ಸುಲೂರು ಗ್ರಾಪಂ ಅಧ್ಯಕ್ಷ ಪೆಮ್ಮಶೆಟ್ಟಿಹಳ್ಳಿ ಸುರೇಶ್ ಗುದ್ದಲಿ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸುರೇಶ್ ಸುಮಾರು ವರ್ಷಗಳಿಂದ ಅಭಿವೃದ್ಧಿ ಮಾಡಬೇಕೆಂದು ಶಾಸಕರ ಗಮನಕ್ಕೆ ತಂದಿದ್ದರು ಅದೇ ರೀತಿ ಚುನಾವಣೆ ಸಮಯದಲ್ಲಿ ನಾನು ಸಹ ಮಾತು ಕೊಟ್ಟಿದಂತೆ ತಾಲೂಕಿನ ಅಭಿವೃದ್ಧಿಗೆ ಹೆಚ್ಚಿನ ಅನುದಾನ ತಂದು ಪ್ರತಿಯೊಂದು ಹಳ್ಳಿಗೂ ಸಂಪರ್ಕ ಕಲ್ಪಿಸುವ ರಸ್ತೆಗಳ ಅಭಿವೃದ್ಧಿ ಮುಂದಾಗಿದ್ದಾರೆ ಅದರಂತೆ ಸೂಲೂರು ಗ್ರಾಪಂ ವ್ಯಾಪ್ತಿಯ ರಸ್ತೆಗಳಿಗೆ ೫ ಕೋಟಿ ಅನುದಾನವನ್ನು ತಂದಿದ್ದಾರೆ ಜೊತೆಗೆ ೧೪ ದೇವಾಲಯಗಳ ಜೀರ್ಣೋದ್ಧಾರಕ್ಕೆ ೫೫ ಲಕ್ಷ ಕೊಟ್ಟು ಅಭಿವೃದ್ಧಿಗೆ ಆಧ್ಯತೆ ನೀಡಿದ್ದಾರೆ ಎಂದರು.

ವಕ್ಕಲೇರಿ ಗ್ರಾಪಂ ಮಾಜಿ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ ಮಾತನಾಡಿ ಕೋಲಾರ ಕ್ಷೇತ್ರದ ಗ್ರಾಮಾಂತರ ಪ್ರದೇಶದ ಗ್ರಾಮಗಳಿಗೆ ಸುಮಾರು ೨೦೦ ಕೋಟಿ ಅನುದಾನದಲ್ಲಿ ರಸ್ತೆಗಳ ಅಭಿವೃದ್ಧಿಗೆ ಆಧ್ಯತೆ ನೀಡಲಾಗಿದೆ ವಿರೋಧಿಗಳು ಪೂಜೆಗೆ ಸೀಮಿತ ಅಂತ ಅಪಪ್ರಚಾರ ಮಾಡಲು ಹೊರಟಿದ್ದಾರೆ ಚುನಾವಣೆಯಲ್ಲಿ ರಾಜಕಾರಣ ಮಾಡಲಿ ಅಭಿವೃದ್ಧಿಯಲ್ಲಿ ಸಂದರ್ಭದಲ್ಲಿ ಅಲ್ಲ ಕೆಲಸ ಮಾಡೋರಿಗೆ ಸಹಾಯ ಮಾಡಲಿ ಮುಂದಿನ ದಿನಗಳಲ್ಲಿ ವಿರೋಧಿಗಳಿಗೆ ಮನವರಿಕೆಯಾಗುವ ರೀತಿಯಲ್ಲಿ ಕ್ಷೇತ್ರದ ಶಾಸಕರು ಕೆಲಸ ಮಾಡಿ ತೋರಿಸಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ವೀರೇಂದ್ರ ಪಾಟೀಲ್, ಸೂಲೂರು ಗ್ರಾಪಂ ಸದಸ್ಯರಾದ ನುಗ್ಗಲಾಪುರ ಕೃಷ್ಣಮೂರ್ತಿ, ಚಲ್ಲಹಳ್ಳಿ ಹರಿಮೂರ್ತಿ, ತಲುಗುಂದ ನರಸರಾಜು, ವೆಂಕಟೇಶ್, ಸುಜಾತ, ಸಿಕಿಂದರ್, ಮುಖಂಡರಾದ ಮೋವಿನ್, ತೋಸಿಫ್, ಅಶೋಕ್, ಫೈಜಲ್ ಖಾನ್, ನಾಗರಾಜು, ಈರಪ್ಪ, ಅಂಬರೀಶ್, ಬೈರೆಡ್ಡಿ, ನಂಜುಂಡಪ್ಪ, ನಾರಾಯಣಪ್ಪ, ಕೃಷ್ಣಪ್ಪ, ರಾಜಶೇಖರ್, ಮುನಿರೆಡ್ಡಿ ಮುಂತಾದವರು ಇದ್ದರು.

ಚಿತ್ರ : ಕೋಲಾರ ತಾಲ್ಲೂಕಿನ ತಲಗುಂದ ಗೇಟ್ ನಿಂದ ನುಗ್ಗಲಾಪುರ ವರೆಗಿನ ಸಂಪರ್ಕ ಕಲ್ಪಿಸುವ ರಸ್ತೆಗೆ ೧.೫೦ ಕೋಟಿ ವೆಚ್ಚದ ಡಾಂಬರೀಕರಣ ಕಾಮಗಾರಿಗೆ ಚಲ್ಲಹಳ್ಳಿ ಗ್ರಾಮದಲ್ಲಿ ಗುರುವಾರ ಸುಲೂರು ಗ್ರಾಪಂ ಅಧ್ಯಕ್ಷ ಪೆಮ್ಮಶೆಟ್ಟಿಹಳ್ಳಿ ಸುರೇಶ್ ಗುದ್ದಲಿ ಪೂಜೆ ನೆರವೇರಿಸಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande