
ಕಂಪ್ಲಿ, 20 ನವೆಂಬರ್ (ಹಿ.ಸ.) :
ಆ್ಯಂಕರ್ : ಕಂಪ್ಲಿ ಪುರಸಭೆ ವ್ಯಾಪ್ತಿಯ ಕಂಪ್ಲಿ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿನ ಹಳೆ ಬಸ್ ನಿಲ್ದಾಣದ ಮಳಿಗೆಗಳು, ಬಳ್ಳಾರಿ ರಸ್ತೆಯಲ್ಲಿರುವ ನೆಲ ಮತ್ತು ಒಂದನೇ ಮಹಡಿ ಮಳಿಗೆಗಳು ಶಿಥೀಲಾವಸ್ಥೆಗೊಂಡಿದ್ದು, ವಾಸಕ್ಕೆ ಯೋಗ್ಯವಿಲ್ಲವೆಂದು ಮತ್ತು ಅದೇ ಜಾಗದಲ್ಲಿ ಬಸ್ ಶೆಲ್ಟರ್ ಆಗಿ ನಿರ್ಮಿಸಲು ಮತ್ತು ಈ ಜಾಗವನ್ನು ಕೆಕೆಆರ್‍ಟಿಸಿ ಇಲಾಖೆಗೆ ಹಸ್ತಾಂತರಿಸಲಾಗುತ್ತಿದ್ದು, ಈ ಕುರಿತು ಕಂಪ್ಲಿ ಪಟ್ಟಣದ ಸಾರ್ವಜನಿಕರಿಂದ ಯಾವುದೇ ರೀತಿಯ ತಂಟೆ-ತಕರಾರು ಇದ್ದಲ್ಲಿ 15 ದಿನ ಒಳಗಾಗಿ ಕಂಪ್ಲಿ ಪುರಸಭೆ ಕಚೇರಿಗೆ ಅರ್ಜಿಯ ಮೂಲಕ ಲಿಖಿತವಾಗಿ ಆಕ್ಷೇಪಣೆ ಸಲ್ಲಿಸಬಹುದು ಎಂದು ಕಂಪ್ಲಿ ಪುರಸಭೆಯ ಮುಖ್ಯಾಧಿಕಾರಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್