
ಕೊಪ್ಪಳ, 20 ನವೆಂಬರ್ (ಹಿ.ಸ.) :
ಆ್ಯಂಕರ್ : ಕೊಪ್ಪಳ ಜಿಲ್ಲೆಯ ನಾನಾ ನ್ಯಾಯಾಲಯಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಟೈಪಿಸ್ಟ್, ಅಟೆಂಡರ್ ಮತ್ತು ಜವಾನರನ್ನು ಪೂರೈಸಲು ನೋಂದಾಯಿತ ಅರ್ಹ ಸಂಸ್ಥೆಗಳಿಂದ ಇ-ಟೆಂಡರ್ ಕೆಪಿಪಿ ಪೋರ್ಟಲ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಡಿಸೆಂಬರ್ 2ರ ಸಂಜೆ 5 ಗಂಟೆ ಆಗಿದ್ದು, ಅರ್ಹ ಸಂಸ್ಥೆಗಳು ತಮ್ಮ ಅರ್ಜಿಯನ್ನು ಕೆಪಿಪಿ ಪೋರ್ಟಲ್ ವೆಬ್‍ಸೈಟ್ಟೆಂhttps://kppp.karnataka.gov.in ಡರ್ ರೆಫರೆನ್ಸ ನಂ: HCK/2025-26/SE0098 ಮೂಲಕ ಅರ್ಜಿ ಸಲ್ಲಿಸಬೇಕು. ನಂತರ ಬಂದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಮುಖ್ಯ ಆಡಳಿತ ಅಧಿಕಾರಿಗಳು, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕೊಪ್ಪಳ ಇವರನ್ನು ಕಾರ್ಯಾಲಯದ ಅವಧಿಯಲ್ಲಿ ಸಂಪರ್ಕಿಸಬಹುದು ಎಂದು ಕೊಪ್ಪಳ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್